Happy Birthday Vishnuvardhan : ರಾರಾಜಿಸುತ್ತಿವೆ ವಿಷ್ಣು ದಾದನ ಕಟೌಟ್ ಗಳು..!!
ದಿವಂಗತ ವಿಷ್ಣದಾದನ ಅಭಿಮಾನಿಗಳು ಎಂದಿನಂತೆ ಇಂದೂ ಸಹ ಅರ್ಥಪೂರ್ಣ ರೀತಿಯಲ್ಲಿ ಅವರ ಹುಟ್ಟಹಬ್ಬ ಆಚರಣೆ ಮಾಡುತ್ತಿದ್ದಾರೆ.. ಸುಮಾರು ದಿನಗಳ ಹಿಂದೆಯಿಂದಲೇ ಯಜಮಾನೋತ್ಸವದ ತಯಾರಿಯಲ್ಲಿ ಅಭಿಮಾನಿಗಳು ತೊಡಗಿದ್ದರು.. ದಾದನ ಕಟೌಟ್ ಗಳು ಸಹ ರೆಡಿಯಾಗಿದ್ದವು.. ಇನ್ನೂ ಆಟೋ ಸ್ಟಾಂಡ್ ಸೇರಿ ಹಲವೆಡೆ ವಿಷ್ಣವರ್ಧನ್ ಅವರ ಅಭಿಮಾನಿಗಳಿಂದು ವಿಶೇಷ ಪೂಜೆ , ಅನ್ನಸಂತರ್ಪಣೆಯಂತಹ ುತ್ತಮ ಕೆಲಸಗಳ ಮೂಲಕ ವಿಷ್ಣವರ್ಧನ್ ಅವರ ಹುಟ್ಟುಹಬ್ಬಾ ಆಚರಿಸಲಿದ್ದಾರೆ..
ಎಲ್ಲೆಡೆ ವಿಷ್ಣುವರ್ಧನ್ ಅವರ ಕಟೌಟ್ ಗಳು ರಾರಾಜಿಸುತ್ತಿವೆ..
ಸೋಷಿಯಲ್ ಮೀಡಿಯಾದಲ್ಲಿ ಹಲವಾರು ತಾರೆಯರು , ಗಣ್ಯರು , ರಾಜಕೀಯ ಮುಖಂಡರು , ವಿಷ್ಣವರ್ಧನ್ ಅವರ ಜನ್ಮದಿನಕ್ಕೆ ಪೋಸ್ಟ್ ಗಳನ್ನ ಹಾಕುತ್ತಾ ವಿಷ್ಣುದಾದ ನೆನಪು ಮಾಡಿಕೊಳ್ತಿದ್ದಾರೆ..
ಸಾಹಸ ಸಿಂಹ ಕನ್ನಡ ಚಿತ್ರರಂಗದ ಹೃದಯವಂತ ಡಾ.ವಿಷ್ಣುವರ್ಧನ್ ಇಂದು ನಮ್ಮೊಂದಿಗಿದ್ದಿದ್ದರೇ ತಮ್ಮ 72 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು.
ಆದ್ರೆ ಅವರು ನಮ್ಮನ್ನಗಲಿ 13 ವರ್ಷಗಳಾಗಿವೆ. ಇಂದು ವಿಷ್ಣುದಾದಾ ಹುಟ್ಟಹಬ್ಬವನ್ನು ಅಭಿಮಾನಿಗಳು ವಿಭಿನ್ನವಾಗಿ ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.
1950 ಸೆಪ್ಟೆಂಬರ್ 18 ರಂದು ಜನಸಿದ ವಿಷ್ಣುದಾದಾರ ಮೂಲ ಹೆಸರು ಸಂಪತ್ ಕುಮಾರ್.ಕನ್ನಡ ಸೇರಿ ತಮಿಳು, ತೆಲುಗು,ಮಲಯಾಳಂ, ಹಿಂದಿ ಭಾಷೆಗಳಲ್ಲೂ ನಟಿಸಿ ಜನಪ್ರಿಯತೆ ಗಳಿಸಿದ್ದ ಹೆಮ್ಮೆಯ ಕನ್ನಡಿಗ,ಕನ್ನಡದ ಕೋಟಿಗೊಬ್ಬ ನಮ್ಮ ವಿಷ್ಣುದಾದ ತಮ್ಮ 59ನೇ ವಯಸ್ಸಿನಲ್ಲಿ ಸ್ವರ್ಗಸ್ತರಾದರು.
ಇಂದು ಡಾ. ವಿಷ್ಣುವರ್ಧನ್ ಜನ್ಮದಿನ, ಡಿಸೆಂಬರ್ 29ಕ್ಕೆ ವಿಷ್ಣುದಾದಾ ಚಿತ್ರರಂಗಕ್ಕೆ ಬಂದು 50 ವರ್ಷಗಳು ಪೂರೈಸಲಿವೆ.ಈ ಹಿನ್ನೆಲೆಯಲ್ಲಿ ಅಭಿಮಾನ್ ಸ್ಟುಡಿಯೋದಲ್ಲಿರುವ ಸಾಹಸ ಸಿಂಹನ ಸಮಾಧಿ ಬಳಿ ಅವರ ಪ್ರಮುಖ ಸಿನಿಮಾಗಳ 40 ಅಡಿ ಎತ್ತರದ 50 ಕಟೌಟ್ ಗಳು ರಾರಾಜಿಸುತ್ತಿವೆ.