Rashmika Mandanna : ಟಾಲಿವುಡ್ ನಲ್ಲಿ ಮುಗಿದೇ ಹೋಯ್ತಾ ರಶ್ಮಿಕಾ ಮೇನಿಯಾ..?? ಟಾಪ್ 5 ರಲ್ಲೂ ಇಲ್ಲ ಸ್ಥಾನ..!! ನಂಬರ್ 1 ನಟಿ ಯಾರ್ ಗೊತ್ತಾ..??
ಸ್ಯಾಂಡಲ್ ವುಡ್ ಮೂಲಕ ಕಿರಿಕ್ ಪಾರ್ಟಿ ಸಿನಿಮಾದಿಂದ ಹಿಟ್ ಆಗಿ ಸದ್ಯ ಟಾಲಿವುಡ್ , ಬಾಲಿವುಡ್ , ಕಾಲಿವುಡ್ ನಲ್ಲಿ ಮಿಂಚುತ್ತಿರುವ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.. ರಶ್ಮಿಕಾಗೆ ಡಿಮ್ಯಾಂಡ್ ಕೂಡ ಹೆಚ್ಚಾಗಿದ್ದು , ಸೌತ್ ನಟಿಯರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪೈಕಿ ಒಬ್ಬರು..
ಬಾಲಿವುಡ್ ನಲ್ಲಿ ರಶ್ಮಿಕಾ ನಟನೆಯ 2 ಸಿನಿಮಾಗಳು ಇನ್ನೇನು ರಿಲೀಸ್ ಆಗಬೇಕಿವೆ.. ಪ್ರಸ್ತುತ ರಣಬೀರ್ ಕಪೂರ್ ಜೊತೆಗೆ ಅನಿಮಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು , ಮುಂದೆ ಸೂಪರ್ ಹಿಟ್ ಸಿನಿಮಾದ ಸರಣಿ ಆಶಿಕಿ 3 ನಲ್ಲಿ ಕಾರ್ತಿಕ್ ಆರ್ಯನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ ಎಂದೂ ಕೂಡ ಹೇಳಲಾಗ್ತಿದೆ..
ಇತ್ತ ತಮಿಳಿನಲ್ಲಿ ದಳಪತಿ ವಿಜಯ್ 66 ನೇ ಸಿನಿಮಾದಲ್ಲಿ ನಟಿಸಿದ್ರೆ , ಪುಷ್ಪ 2 ಪ್ರಾಜೆಕ್ಟ್ ನಲ್ಲೂ ರಶ್ಮಿಕಾ ನಟಿಸಲಿದ್ದಾರೆ.. ಇದರ ಹೊರತಾಗಿ ಚಿಯಾನ್ ವಿಕ್ರಮ್ ಅವರ ಮುಂದಿನ ಸಿನಿಮಾಗೆ ರಶ್ಮಿಕಾ ನಾಯಕಿ ಎನ್ನಲಾಗ್ತಿದೆ..
ಈ ನಡುವೆ ಕರಣ್ ಜೋಹರ್ ನಿರ್ಮಿಸಿ ಟೈಗರ್ ಶ್ರಾಫ್ ನಟಿಸಬೇಕಿದ್ದ ಸಿನಿಮಾದಲ್ಲಿ ರಶ್ಮಿಕಾ ನಾಯಕಿ ಎನ್ನಲಾಗಿತ್ತು.. ಆದ್ರೆ ಸಿನಿಮಾ ಸೆಟ್ಟೇರುವ ಮುನ್ನವೇ ನಿಂರುಹೋಗಿದೆ..
ಆದ್ರೆ ಎಲ್ಲಾ ಇಂಡಸ್ಟ್ರಿಗಳಿಗಿಂದ ರಶ್ಮಿಕಾ ಹೆಚ್ಚು ಹಿಟ್ ಆಗಿದ್ದೇ ಟಾಲಿವುಡ್ ಮೂಲಕ.. ಆದ್ರೆ ಟಾಲಿವುಡ್ ನಲ್ಲಿ ಅತಿ ಹೆಚ್ಚು ಜನಪ್ರಿಯ ನಟಿಯರ ಪಟ್ಟಿಯಲ್ಲಿ ನಟಿ ರಶ್ಮಿಕಾಗೆ ಟಾಪ್ 5 ರಲ್ಲೂ ಸ್ಥಾನವಿಲ್ಲ..
ಹೌದು..!
ಈಗ ನಂಬರ್ ಸ್ಥಾನದಲ್ಲಿ ಸಮಂತಾ ಇದ್ದಾರೆ.. ಎರಡನೇ ಸ್ಥಾನದಲ್ಲಿ , 3 ನೇ ಸ್ಥಾನ ಹೋಗಲಿ ಟಾಪ್ 7 ರ ಸ್ಥಾನದೊಳಗೂ ರಶ್ಮಿಕಾ ಇಲ್ಲ.. ಅಂದ್ಹಾಗೆ ರಶ್ಮಿಕಾಗೆ 8 ನೇ ಸ್ಥಾನ ಸಿಕ್ಕಿದೆ..
ಓರ್ಮ್ಯಾಕ್ಸ್ ರಿಲೀಸ್ ಮಾಡಿರೋ ಆಗಸ್ಟ್ ತಿಂಗಳ ಸರ್ವೆಯಲ್ಲಿ ಸಮಂತಾ ಅತ್ಯಂತ ಜನಪ್ರಿಯ ನಟಿಯಾಗಿ ಹೊರ ಹೊಮ್ಮಿದ್ದಾರೆ
ಸಮಂತಾ ಬಹಳ ವರ್ಷಗಳಿಂದ ಟಾಳಿವುಡ್ ನಲ್ಲಿ ಟಾಪ್ ಸ್ಥಾನದಲ್ಲಿಯೇ ಇದ್ದಾರೆ.. ಅದ್ರಲ್ಲೂ ಡಿವೋರ್ಸ್ ನಂತರ ಮತ್ತಷ್ಟು ಸುದ್ದಿಯಲ್ಲಿದ್ದರು.. ಪುಷ್ಪದಲ್ಲಿ ಡ್ಯಾನ್ಸ್ ಮಾಡಿದ ನಂತರ ಲ್ ಓವರ್ ಇಂಡಿಯಾ ಸಮಂತಾ ಕ್ರೇಜ್ ಇನ್ನೂ ಹೆಚ್ಚೇ ಆಗಿದೆ.. ಸಾಲು ಸಾಲು ಸಿನಿಮಾಗಳಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ.. ಅವರ ಜನ್ಪ್ರಿಯತೆ ಹೆಚ್ಚಾಗಿದ್ದು ನಂಬರ್ 1 ಸ್ಥಾನದಲ್ಲಿದ್ದಾರೆ..
ಇನ್ನೂ ಟಾಳಿವುಡ್ ನ ಸ್ಟಾರ್ ನಟಿ , ಕಾಜಲ್ ಅಗರ್ ವಾಲ್ ಅವರು ಮದುವೆಯಾಗಿ ಮಗುವಿಗೆ ಜನ್ಮ ನೀಡಿದ ನಂತರ ಕೊಂಚ ಬಣ್ಣದ ಜಗತ್ತಿನಿಂದ ಅಂತರ ಕಾಯ್ದುಕೊಂಡರೂ ಅವರ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ..
3ನೇ ಸ್ಥಾನದಲ್ಲಿ ಸ್ವೀಟಿ , ಕರಾವಳಿ ಬ್ಯೂಟಿ ಅನುಷ್ಕಾ ಶೆಟ್ಟಿ ಇದ್ದಾರೆ.. 4 ಸ್ಥಾನದಲ್ಲಿ ಲೇಡಿ ಪವರ್ ಸ್ಟಾರ್ ಸಾಯಿ ಪಲ್ಲವಿ , 5 ನೇ ಸ್ಥಾನದಲ್ಲಿ ಬುಟ್ಟಬೊಮ್ಮ ಪೂಜಾ ಹೆಗ್ಡೆ 6 ನೇ ಸ್ಥಾನದಲ್ಲಿ ಕೀರ್ತಿ ಶೆಟ್ಟಿ ,
7ನೇ ಸ್ಥಾನದಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ , 8 ನೇ ಸ್ಥಾನದಲ್ಲಿ ಚಷ್ಮಾ ಸುಂದರಿ ರಶ್ಮಿಕಾ , 9 ನೇ ಸ್ಥಾನದಲ್ಲಿ ಉಪ್ಪೇನಾ ಬ್ಯೂಟಿ ಕೃತಿ ಶೆಟ್ಟಿ 10 ನೇ ಸ್ಥಾನದಲ್ಲಿ ರಾಶಿ ಖನ್ನಾ ಇದ್ದಾರೆ..
ಸದ್ಯ ರಶ್ಮಿಕಾ 8 ನೇ ಸ್ಥಾನಕ್ಕೆ ಕುಸಿದಿದ್ದು ಟಾಲಿವುಡ್ ನಲ್ಲಿ ಅವರ ವರ್ಚಸ್ಸು ಮುಗಿದೇ ಹೋಯ್ತಾ ಎಂದು ನೆಟ್ಟಿಗರು ಚರ್ಚೆ ಮಾಡಲಾರಂಭಿಸಿದ್ದಾರೆ..