Sonu Sood : ಚಂಡೀಗಢ ವಿಶ್ವವಿದ್ಯಾಲಯ ಕೇಸ್ – ವಿಡಿಯೋ ಶೇರ್ ಮಾಡದಂತೆ ಸೋನು ಸೂದ್ ಮನವಿ..!!
ಬಡವರ ಪಾಲಿನ ರಿಯಲ್ ಹೀರೋ ನಿಸಿಕೊಂಡಿರುವ ಸೋನು ಸೂದ್ ,, ತರರಿಗೆ ಸಹಾಯ ಮಾಡೋದರ ಜೊತೆಗೆ ಆಗಾಗ ಕೆಲ ವಿಚಾರಗಳ ಬಗ್ಗೆ ತಪ್ಪು ಸರಿ ಬಗ್ಗೆಯೂ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಳ್ತಾ ಇರುತ್ತಾರೆ.. ಅಂದ್ಹಾಗೆ ಇದೀಗ ನಟ ಸೋನು ಸೂದ್ ಅವರು ಚಂಡೀಗಡ ವಿಶ್ವ ವಿದ್ಯಾಲಯದ ವಿದ್ಯಾನಿಲಯದೊಳಗೆ ನಡೆದಿದೆ ಎನ್ನಲಾದ ಖಾಸಗಿ ವಿಡಿಯೋ ವೈರಲ್ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.. ಅಲ್ಲದೇ ಒಂದು ಮನವಿಯನ್ನ ಮಾಡಿದ್ದಾರೆ..
ವಿಶ್ವ ವಿದ್ಯಾಲಯದ ಆವರಣದಲ್ಲಿ ನಡೆದ ಈ ಘಟನೆಯ ಬಗ್ಗೆ ಇಡೀ ದೇಶಾದ್ಯಂತ ಕ್ರೋಶ ವ್ಯಕ್ತವಾಗ್ತಿದ್ದು , ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲೇಬೇಕೆಂದು ಒತ್ತಾಯಗಳು ಕೇಳಿಬರುತ್ತಿದೆ.. ಇಂತಹ ನೀಚ ಕೃತ್ಯದಲ್ಲಿ 60 ಮಂದಿ ಯುವತಿಯರ ಜೀವನ ಸಿಲುಕಿದೆ ಎಂಬುದು ನಿಜಕ್ಕೂ ಆತಂಕಕಾರಿ ವಿಚಾರವಾಗಿದೆ..
ಹಾಸ್ಟೇಲ್ ನಲ್ಲಿ ಹುಡುಗಿಯೊಬ್ಬಳು, ಬಾತ್ ರೂಮ್ ಗೆ ಹೋಗುವ ಹುಡುಗಿಯರ ಖಾಸಗಿ ವಿಡಿಯೋಗಳನ್ನು ಚಿತ್ರಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ. ಅಲ್ಲದೇ, 60ಕ್ಕೂ ಹೆಚ್ಚು ವಿಡಿಯೋಗಳು ಇನ್ನೂ ಇವೆ ಎಂದು ಹೇಳಿದ್ದಾಳೆ ಎನ್ನಲಾಗುತ್ತಿದೆ. ಹೀಗಾಗಿ ಯಾವ ಹುಡುಗಿಯರ ವಿಡಿಯೋ ಸ್ಪ್ರೆಡ್ ಆಗುತ್ತೋ ಎಂಬ ಭಯದಲ್ಲಿದ್ದಾರೆ ವಿದ್ಯಾರ್ಥಿನಿಯರು..
ಈ ವಿಚಾರದ ಬಗ್ಗೆ ನಟ ಸೋನು ಸೂದ್ ಅವರು ಮಾತನಾಡುತ್ತಾ ದಯವಿಟ್ಟು ಇಂತಹ ಯಾವುದೇ ವಿಡಿಯೋಗಳನ್ನು ನೋಡಬೇಡಿ ಮತ್ತು ಇತರರಿಗೆ ಕಳುಹಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಇಂತಹ ಕೀಳು ಮನಸ್ಥಿತಿಯವರನ್ನು ಸುಮ್ಮನೆ ಬಿಡಬೇಡಿ ಎಂದು ಆಕ್ರೋಶವನ್ನೂ ಹೊರಹಾಕಿದ್ದಾರೆ..