ಕಾಲಿವುಡ್ ನ ಯುವ ನಟಿ ದಿಪಾ ನೇಣಿಗೆ ಶರಣಾಗಿದ್ದಾರೆ.. ಇತ್ತೀಚೆಗಷ್ಟೇ ತೆರೆಕಂಡ ವಾಯ್ಧಾ ಸಿನಿಮಾದಲ್ಲಿ ಈ ನಟಿ ಕಾಣಿಸಿಕೊಂಡಿದ್ದರು.. ಚೆನ್ನೈನ ವಿರುಗಂಬಕ್ಕಮ್ ನಲ್ಲಿರುವ ತಮ್ಮ ರೂಮ್ ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ನಟಿಯ ಮೃತದೇಹವು ಪತ್ತೆಯಾಗಿದೆ.. ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಪೊಲೀಸರು ಅನುಮಾನ ಪಟ್ಟಿದ್ದಾರೆ..
ಅಂದ್ಹಾಗೆ ದೀಪಾ ಎಂದು ಖ್ಯಾತಿ ಪಡೆದಿರುವ ಈ ನಟಿಯ ಮೂಲ ಹೆಸರು ಪೌಲಿನ್ ಜೆಸ್ಸಿಕಾ.. ವೈಧಾ, ತುಪ್ಪರಿವಾಲನ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ಈ ನಟಿ ನಟಿಸಿದ್ದಾರೆ.
ಮೂಲಗಳ ಪ್ರಕಾರ ದೀಪಾ ಪ್ರೀತಿಸುತ್ತಿದ್ದು , ಅವರ ಲವ್ ಲೈಫ್ ನಲ್ಲಿ ಕೆಲ ತೊಡಕುಗಳು ಎದುರಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗ್ತಿದೆ..