Vishnupriya : ಪುರುಷರು ಒಂದು ವಿಚಾರ ಕಂಟ್ರೋಲ್ ಮಡಿಕೊಳ್ಳಬೇಕು..!! ಕಾಸ್ಟಿಂಗ್ ಕೌಚ್ ಬಗ್ಗೆ ವಿಷ್ಣುಪ್ರಿಯಾ ಶಾಕಿಂಗ್ ಕಾಮೆಂಟ್..!!!
ಪೋವೇ ಪೋರ ಕಾರ್ಯಕ್ರಮದ ಮೂಲಕ ಖ್ಯಾತಿ ಪಡೆದಿರುವ ತೆಲುಗಿನ ಜನಪ್ರಿಯ ಆಂಕರ್ ವಿಷ್ಣುಪ್ರಿಯಾ ಅವರು ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಸಂಬಂಧ ನೀಡಿರುವ ಹೇಳಿಕೆ ಇಡೀ ಟಾಲಿವುಡ್ ರಂಗದಲ್ಲಿ ಸಂಚಲನವನ್ನೇ ಸೃಷ್ಟಿಸಿದೆ..
ಮಾಡೆಲಿಂಗ್ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟರು. ಸೋಷಿಯಲ್ ಮೀಡಿಯಾದಲ್ಲೂ ಇವರು ಬಹಳ ಸಕ್ರಿಯವಾಗಿದ್ದಾಳೆ. ಮೇಲಾಗಿ ಆಗಾಗ ಫೋಟೋ ಶೂಟ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ತಾ ಇರುತ್ತಾರೆ..
ಇತ್ತೀಚೆಗೆ ವಿಷ್ಣುಪ್ರಿಯಾ ಕಾಸ್ಟಿಂಗ್ ಕೌಚ್ ಬಗ್ಗೆ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಇತ್ತೀಚೆಗೆ 15 ವರ್ಷಗಳ ಹಿಂದೆ ತಾವು ಸಿನಿಮಾರಂಗದಿಂದ ದೂರ ಉಳಿದಿದ್ದಕ್ಕೆ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ..
ಕೆಲ ಸಿನಿಮಾಗಳಲ್ಲಿ ನಟಿಸಿ, ಕಿರುತೆರೆ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಮಿಂಚಿರುವ ವಿಷ್ಣುಪ್ರಿಯಾಗೆ ಸಿನಿಮಾರಂಗದಿಂದ ಹೇಳಿಕೊಳ್ಳುವಷ್ಟರ ಮಟ್ಟಿಗೆ ಯಶಸ್ಸು ಸಿಕ್ಕಿಲ್ಲ.. ಇತ್ತೀಚೆಗೆ ಯೂಟ್ಯೂಬ್ ಸಂದರ್ಶನದಲ್ಲಿ ಭಾಗವಹಿಸಿದ್ದ ನಟಿ ಕಾಸ್ಟಿಂಗ್ ಕೌಚ್ ಹಾಗೂ ತಮ್ಮ ಕೆಟ್ಟ ಅನುಭವದ ಬಗ್ಗೆ ಮಾತನಾಡಿದ್ದಾರೆ..
‘ಕಾಸ್ಟಿಂಗ್ ಕೌಚ್ ಸಮಸ್ಯೆ ಕೇವಲ ಚಿತ್ರರಂಗದಲ್ಲಿ ಮಾತ್ರವಲ್ಲದೇ ಇತರ ಕ್ಷೇತ್ರಗಳಲ್ಲೂ ಇದೆ. ಆದರೆ ಚಿತ್ರರಂಗದ ಸೆಲೆಬ್ರಿಟಿಗಳು ಎಲ್ಲರಿಗೂ ಗೊತ್ತಿರುವ ಕಾರಣ ಹೆಚ್ಚಿನವರಿಗೆ ಇಂಡಸ್ಟ್ರಿಯ ಬಗ್ಗೆ ತಪ್ಪು ಕಲ್ಪನೆ ಇದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ‘ಇಂತಹ ಬೇಡಿಕೆ ಇಟ್ಟಾಗ ಅದನ್ನು ಒಪ್ಪಿಕೊಳ್ಳಬೇಕೋ ಬೇಡವೋ ಎನ್ನುವುದು ಮಹಿಳೆಯರಿಗೆ ಬಿಟ್ಟ ವಿಚಾರ. ನನಗೂ ಅವಕಾಶಗಳು ಬರುತ್ತಿದ್ದ ಸಮಯದಲ್ಲಿ ತುಂಬಾ ಜನ ಕೋರಿಕೆ ತೀರಿಸುವಂತೆ ಕೇಳಿದ್ದರು. ಆದರೆ ನಾನು ಅದಕ್ಕೆ ಒಪ್ಪಿಕೊಳ್ಳಲಿಲ್ಲ. ಅದರಿಂದ ಸಾಕಷ್ಟು ಅವಕಾಶಗಳನ್ನು ಕಳೆದುಕೊಳ್ಳುವಂತಾಯಿತು. ನನ್ನ ಪ್ರತಿಭೆಯನ್ನು ನಂಬಿ ಮುಂದೆ ಸಾಗಿದೆ.. ನನ್ನ ಪರಿಶ್ರಮದ ಫಲವಾಗಿ ಇಂದು ಈ ಸ್ಥಾನದಲ್ಲಿ ಇದ್ದೀನಿ’..
‘ ಪುರುಷರು ಸಹ ತಮ್ಮ ಹಾರ್ಮೋನುಗಳನ್ನು ನಿಯಂತ್ರಿಸಬೇಕು’ ಎಂದಿದ್ದಾರೆ.. ಆಗ ಸಂದರ್ಶಕ ಮಹಿಳೆಯರಿಗೆ ಅಷ್ಟೇ ಅಲ್ಲ, ಪುರುಷರಿಗೆ ಮಹಿಳೆಯರಿಂದಲೂ ಈ ಕಾಸ್ಟಿಂಗ್ ಕೌಚ್ ಸಮಸ್ಯೆ ಎದುರಾಗುತ್ತಿದೆ ಎಂದಾಗ ಪುರುಷರೊಂದಿಗೆ ಮಹಿಳೆಯರು ಸಹ ತಮ್ಮ ಹಾರ್ಮೋನುಗಳನ್ನು ನಿಯಂತ್ರಿಸಿಕೊಳ್ಳಬೇಕು’ ಎಂದು ವಿಷ್ಣುಪ್ರಿಯಾ ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ..