Biggboss Kannada 9 : ದಿವ್ಯಾ – ಅರವಿಂದ್ ಜೋಡಿ ಕಮ್ ಬ್ಯಾಕ್..!! ಕಾಫಿನಾಡು ಚಂದ್ರು ಎಂಟ್ರಿ..??
Biggboss Kannada Ott ಮುಗಿದಿದೆ… ಆರ್ಯವರ್ಧನ್ ಗುರೂಜಿ , ಸಾನ್ಯಾ , ರೂಪೇಶ್ , ರಾಕೇಶ್ ಆಡಿಗ ನೇರವಾಗಿ ಟಿವಿ ಬಿಗ್ ಬಾಸ್ ಗೆ ಆಯ್ಕೆಯಾಗಿದ್ದಾರೆ. ಸೆಪ್ಟೆಂಬರ್ 24 ರಿಂದಲೇ ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್ ಆಗಿ ಆರಂಭವಾಗಲಿದೆ..
ಈ ನಾಲ್ವರು ಸ್ಪರ್ಧಿಗಳ ಜೊತೆಗೆ ಮನೆ ಸೇರುವ ಉಳಿದ 12 ಸ್ಪರ್ಧಿಗಳ್ಯಾರೆಂಬ ಕ್ಯೂರಿಯಾಸಿಟಿ ಮನೆ ಮಾಡಿದೆ.. ಇದೆಲ್ಲದರ ನಡುವೆ ಹಿಂದಿನ ಸೀಸನ್ ಗಳ ಸ್ಪರ್ಧಿಗಳು ಮತ್ತೊಮ್ಮೆ ಬಿಗ್ ಬಾಸ್ ಗೆ ಬರುತ್ತಿದ್ದಾರೆ ಎನ್ನಲಾಗುತ್ತಿದೆ.. ಅದ್ರಲ್ಲೂ ಅನುಪಮ , ಪ್ರಶಾಂತ್ ಸಂಬರ್ಗಿ ದೀಪಿಕಾ ದಾಸ್ ಹೆಸರುಗಳು ಕೇಳಿ ಬರುತ್ತಿದೆ..
ಆದ್ರೆ ಇದೀಗ ಟ್ವಿಸ್ಟ್ ಎಂಬಂತೆ ಈ ಬಾರಿ ಬಿಗ್ ಬಾಸ್ ಗೆ ಸೀಸನ್ 8 ರ ಫೈನಲಿಸ್ಟ್ ಗಳಾಗಿದ್ದ ಸೀಸನ್ 8 ರಲ್ಲಿ ಸಖತ್ ಗಮನ ಸೆಳೆದಿದ್ದ ಕ್ಯೂಟ್ ಜೋಡಿ ಅರವಿಂದ್ ಹಾಗೂ ದಿವ್ಯಾ ಉರುಡುಗ ದೊಡ್ಮನೆಗೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಎನ್ನಲಾಗ್ತಿದೆ..
ಹೌದು..! ಈ ಜೋಡಿಗೆ ಒಂದು ಪ್ರತ್ಯೇಕ್ ಫ್ಯಾನ್ ಬೇಸ್ ಇದೆ.. ಅದ್ರಲ್ಲೂ ಇವರ ಸೀಸನ್ ಟೈಮ್ ನಲ್ಲಿ ಆರ್ವಿ # ಟ್ಯಾಗ್ ನಿಂದಲೇ ಟ್ರೆಂಡ್ ಸಹ ಗ್ತಿದ್ದರು.. ಇದೀಗ ಹಳೇ ಸ್ಪರ್ಧಿಗಳನ್ನ ಕರೆತರಕಲಾಗುತ್ತದೆ ಎಂಬ ಗುಮಾನಿ ಬೆನ್ನಲ್ಲೇ ಈ ಜೋಡಿಗಾಗಿ ಡಿಮ್ಯಾಂಡ್ ಮಾಡ್ತಿದ್ದಾರೆ ನೆಟಿಜನ್ಸ್..
ಇನ್ನೂ ಇದರ ಹೊರತಾಗಿ ಹೊಸ ಸ್ಪರ್ಧಿಗಳು ಯಾರೆಂದು ಊಹೆಗಳ ನೋಡುವುದಾದ್ರೆ , ಈ ಬಾರಿ ಮಂಗಳ ಗೌರಿ ಮದುವೆ ಖ್ಯಾತಿಯ ಕಾವ್ಯಶ್ರೀ , ನಾಗಿಣಿ ಖ್ಯಾತಿಯ ನಮ್ರತಾ ಗೌಡ , ಜೊತೆ ಜೊತೆಯಲಿ ಖ್ಯಾತಿಯ ಆರ್ಯವರ್ಧನ್ ಅಲಿಯಾನ್ ಅನಿರುದ್ಧ ಹಾಗೂ ಪ್ರಮುಖವಾಗಿ ಕಾಫಿ ನಾಡು ಚಂದ್ರು ಹೆಸರುಗಳು ಕೇಳಿಬರುತ್ತಿವೆ..
ಅದ್ರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಕಾಫಿನಾಡು ಚಂದ್ರುಗಾಗಿ ಅಭಿಮಾನಿಗಳು ಡಿಮ್ಯಾಂಡ್ ಮಾಡ್ತಿದ್ದು , ಕಾಫಿ ನಾಡು ಚಂದ್ರು ಈ ಬಾರಿ ದೊಡ್ಮನೆ ಪ್ರವೇಶ ಮಾಡ್ತಾರಾ ಕಾದುನೋಡ್ಬೇಕಿದೆ..