BiggBoss Kannada 9 ಇನ್ನೇನು ಇದೇ ಸೆಪ್ಟೆಂಬರ್ 24 ರಿಂದ ಆರಂಭವಾಗಲಿದೆ.. 24 ರ ಸಂಜೆ 6 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಪಡೆಯಲಿದ್ದು , ಕಲರ್ ಫುಲ್ ವೇದಿಕೆ ಮೇಲೆ ಕಿಚ್ಚ ಮತ್ತದೇ ಖದರ್ ನಲ್ಲಿ ಸ್ಪರ್ಧಿಗಳನ್ನ ಮನೆಗೆ ಕಳುಹಿಸಿಕೊಡಲಿದ್ದಾರೆ..
ಅಂದ್ಹಾಗೆ ಇತ್ತೀಚೆಗಷ್ಟೇ Biggboss Kannada Ott ಮುಕ್ತಾಯವಾಗಿದ್ದು ನಾಲ್ವರು ಅಲ್ಲಿಂದ ನೇರವಾಗಿ ಟಿವಿ ಬಿಗ್ ಬಾಸ್ ಗೆ ಬಡ್ತಿ ಪಡೆದಿದ್ದಾರೆ.. ಅಂದ್ಹಾಗೆ ಬಿಗ್ ಬಾಸ್ ಸೀಸನ್ 9 ರಲ್ಲಿ ಸಾಕಷ್ಟು ವಿಶೇಷತೆಗಳು ಹಾಗೂ ಬಹಳಷ್ಟುಯ ಬದಲಾವಣೆಗಳೂ ಇರಲಿದೆ…
ಅಂದ್ಹಾಗೆ ಈ ಬಾರಿ ಬಿಗ್ ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿದವರಿಗೆ ಹಿಂದೆಂದಿನ ಸೀಸನ್ ಗಳಿಂಗಿಂತಲೂ ವಿಭಿನ್ನ ಹಾಗೂ ಕಠಿಣ ಶಿಕ್ಷೆಗಳನ್ನ ನೀಡಲಾಗುತ್ತದೆಯಂತೆ..
ಅಂದ್ಹಾಗೆ ಈ ನಿಯಮಗಳನ್ನ ಕಿಚ್ಚ ಸುದೀಪ್ ( Kichha Sudeep) ಅವರು ಬಿಗ್ ಬಾಸ್ ಗ್ರ್ಯಾಂಡ್ ಓಪನಿಂಗ್ ದಿನವೇ ವೇದಿಕೆ ಮೇಲೆ ಘೋಷಣೆ ಮಾಡಬಹುದು ಎನ್ನಲಾಗ್ತಿದೆ.. ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಕಂಪ್ಲೀಟ್ ಹೊಸ ಥೀಮ್ ಇರಲಿದೆ ಎನ್ನಲಾಗ್ತಿದೆ..
OTT ಯಿಂದ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್ ಮತ್ತು ಆರ್ಯವರ್ಧನ್ ಗುರೂಜಿ ಪ್ರವೇಶವನ್ನು ಪಡೆದಿದ್ದಾರೆ. ಅಂದ್ಹಾಗೆ ಎಲ್ಲರೂ ಸೋನು ಗೌಡ ಸಹ ಟಿವಿಗೆ ಬರಬಹುದು ಎಂದೇ ನಿರೀಕ್ಷೆ ಮಾಡಿದ್ದರಾದ್ರೆ ಆಕೆಯ ಬ್ಯಾಡ್ ಲಕ್ ಟಿವಿಗೆ ಆಯ್ಕೆಯಾಗುವಲ್ಲಿ ವಿಫಲವಾಗಿದ್ದಾರೆ.. ಆದ್ರೂ ಅದ್ಯಾಕೋ ನೆಟ್ಟಿಗರು ಮಾತ್ರವೇ ಈ ವಿಚಾರನ್ನ ಪ್ಪುವುದಕ್ಕೆ ರೆಡಿಯಿಲ್ಲ..
ಅನೇಕ ನೆಟ್ಟಿಗರ ಅಭಿಪ್ರಾಯದಂತೆ ಸೋನು ಗೌಡ ವೈಲ್ಡ್ ಕಾರ್ಡ್ ಮೂಲಕವಾದ್ರೂ ಟಿವಿ ಬಿಗ್ ಬಾಸ್ ಮನೆ ಪ್ರವೇಶ ಮಾಡ್ತಾರೆ ಎಂದೇ ಅಂದಾಜಿಸುತ್ತಿದ್ದಾರೆ.. ಆದ್ರೆ ಇದು ಬಿಗ್ ಬಾಸ್.. ಗೆಸ್ ಗಳು , ಊಹೆಗಳು ವದಂತಿಗಳು ಏನೇ ಇದ್ರೂ ಬಿಗ್ ಬಾಸ್ ಟ್ವಿಸ್ಟ್ ಗಳು ಎಲ್ಲಾ ಲೆಕ್ಕಾಚಾರಗಳನ್ನ ಉಲ್ಟಾ ಮಾಡುತ್ತದೆ..