BiggBoss Kannada Ott : ನನ್ನ ಸಿನಿಮಾಗೆ ಕಿಚ್ಚ ಸುದೀಪ್ ಹೀರೋ ಆಗಬೇಕು – ಸೋನು ಗೌಡ
ಸೋನು ಗೌಡ… ಟ್ರೋಲಿಗರ ಫೇವರೇಟ್.. ಬಿಗ್ ಬಾಸ್ ಕನ್ನಡ ಒಟಿಟಿಯ ಹೈಲೇಟ್…
ಸೋನು ಗೌಡ… ಬ್ಯಾಡ್ ಲಕ್ಕೋ ಏನೋ ಟಿವಿ ಬೆಗ್ ಬಾಸ್ ಎಂಟ್ರಿ ಪಡೆಯದೇ ಬಿಗ್ ಬಾಸ್ ಒಟಿಟಿಯಲ್ಲೇ ಜರ್ನಿ ಮುಗಿಸಿ ಹೊರನಡೆದಿದ್ದಾರೆ..
ಸಿನಿಮಾ ಹೀರೋಯಿನ್ ಆಗುವ ಕನಸು ಕಂಡಿರುವ ಸೋನುಗೆ ರೋ ಆಸೆ ಕೇಳಿ ನೆಟ್ಟಿಗರು ಹಾಗೂ ಕಿಚ್ಚನ ಫ್ಯಾನ್ಸ್ ಕಾಮೆಂಟ್ ಗಳಲ್ಲಿ ಸೋನುಗೆ ಅತಿಯಾಸೆ ಬೇಡ ಎಂದು ಸಲಹೆಗಳನ್ನ ನೀಡ್ತಿದ್ದಾರೆ..
ತಮಗನಿಸಿದ್ದನ್ನ ಮುಂದಿನ ಪರಿಣಾಮದ ಬಗ್ಗೆ ಯೋಚಿಸದೇ ನೇರವಾಗಿ ಮಾತನಾಡಿಬಿಡುವ ಸೋನು ಗೌಡ ಇದೀಗ ನನ್ನ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ನಾಯಕನಾಗಬೇಕು ಎಂದಿದ್ದಾರೆ..
ಈ ಮೂಲಕ ಮತ್ತೊಮ್ಮೆ ಟ್ರೋಲ್ ಆಗ್ತಿದ್ದಾರೆ..
ಅಂದ್ಹಾಗೆ ಸೋನು ಗೌಡ ಬಿಗ್ ಬಾಸ್ ಮನೆಗೆ ಹೋಗುವ ಮೊದಲೇ ಎರೆಡು ಸಿನಿಮಾಗಳಲ್ಲಿ ನಟಿಸಿದ್ದು ಆ ಸಿನಿಮಾಗಳು ರಿಲೀಸ್ ಆಗಬೇಕಿವೆ ಎನ್ನಲಾಗಿದ್ದು , ಇದೀಗ ಮನೆಯಿಂದ ಹೊರಬಂದ ನಂತರವೂ ಸಾಕಷ್ಟು ಆಫರ್ ಗಳು ಸಿಗುತ್ತಿವೆ ಎಂದು ಹೇಳಿಕೊಂಡಿದ್ದಾರೆ..
ಆದ್ರೆ ಸಿಕ್ಕ ಸಿಕ್ಕ ಸಿನಿಮಾಗಳಲ್ಲಿ ನಾನು ನಟಿಸುವುದಿಲ್ಲ.. ನನ್ನ ಪಾತ್ರಕ್ಕೆ ಮಹತ್ವವಿರುವ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದಿರುವ ಸೋನು ನಾನು ನಟಿಸುವ ಸಿನಿಮಾದಲ್ಲಿ ಕಿಚ್ಚ ಸುದೀಪ್ ಅವರು ಹೀರೋ ಆಗಿರಬೇಕು.. ಅವರ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಿದೆ ಎಂದಿದ್ದಾರೆ..