BiggBoss Kannada Ott : ನನ್ನ ರಾಕೇಶ್ ನಡುವಿನ ಬಾಂಡಿಂಗ್ ಗೆ ಸ್ಮೋಕಿಂಗ್ ಕಾರಣ – ಸೋನು
Biggboss Kannada Ott ಮುಕ್ತಾಯವಾಗಿದ್ದು ನಾಲ್ವರು ನೇರವಾಗಿ ಟಿವಿ ಬಿಗ್ ಬಾಸ್ ಸೀಸನ್ 9 ಕ್ಕೆ ಆಯ್ಕೆಯಾಗಿದ್ದಾರೆ..
ಅಂದ್ಹಾಗೆ ಒಟಿಟಿ ಸೀಸನ್ ಹೀಗೆ ಬಂದು ಹಾಗೆ ಹೋಯ್ತು ಎನಿಸುವಂತಿದೆ… ಅಂದ್ಹಾಗೆ ಮನೆಯಲ್ಲಿ ಸಿಕ್ಕಾಪಟ್ಟೆ ಹೈಲೇಟ್ ಆದವರೆಂದ್ರೆ ಸೋನು ಗೌಡ ರಾಕೇಶ್ ಆಡಿಗ..
ಸೋನು ಗೌಡ ಹೊರಗೆ ಜನ ತಮ್ಮನ್ನೇ ಅತಿ ಹೆಚ್ಚು ಟ್ರೋಲ್ ಮಾಡ್ತಾರೆ ಅನ್ನೋದು ಅರಿವಿದ್ರೂ ಮೈಮರೆತು ರಾಕೇಶ್ ಜೊತೆಗೆ ಬಹಳಷ್ಟು ಕ್ಲೋಸ್ ಆಗಿ ಟ್ರೋಲಿಗರಿಗೆ ತಾವೇ ಅವಕಾಶಗಳನ್ನ ಬಿಟ್ಟುಕೊಟ್ಟಿದ್ದಾರೆ ಮತ್ತೆ ಮತ್ತೆ ಟ್ರೋಲ್ ಮಾಡೋದಕ್ಕೆ..
ಅಂದ್ಹಾಗೆ ಸೋನು ರಾಕಿ ತುಂಬಾ ಕ್ಲೋಸ್ ಆಗಿದ್ದರು ಅನ್ನೋದು ಯಾರಿಗೂ ಗೊತ್ತಿಲ್ಲದ ವಿಚಾರವೇನೂ ಅಲ್ಲ.. ಅವರಿಬ್ಬರ ಆತ್ಮೀಯತೆ ಮುತ್ತಿನ ಹಂತಕ್ಕೂ ತಲುಪಿತ್ತು..
ಅಂದ್ಹಾಗೆ ಸೋನು ಹಾಗೂ ರಾಕಿ ನಡುವೆ ಅಷ್ಟು ಬಾಂಡಿಂಗ್ ಬೆಳೆದಿದ್ದು ಹೇಗೆ ಎಂಬುದಕ್ಕೆ ಪ್ರತಿಕ್ರಿಯಿಸಿರುವ ಸೋನು ಗೌಡ.. ನಮ್ಮಿಬ್ಬರ ಬಾಂಡಿಂಗ್ ಗೆ ಸ್ಮೋಕಿಂಗ್ ಕಾರಣ ಎಂದಿದ್ದಾರೆ..
ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಸೋನು ಮಾತನಾಡಿದ್ದಾರೆ.. ಸೋನು ಗೌಡ ಸ್ಮೋಕಿಂಗ್ ಮಾಡುವುದು ಗೊತ್ತಿಲ್ಲದ ಸಂಗತಿಯೇನಲ್ಲ.. ಇದನ್ನ ಅವರೇ ಹೇಳಿಕೊಂಡಿದ್ದರು..
ಬಿಗ್ ಬಾಸ್ ಮನೆಯಲ್ಲಿ ಪ್ರತ್ಯೇಕವಾಗಿ ಸ್ಮೋಕಿಂಗ್ ಙೋನ್ ಸಹ ಇದ್ದು , ಇಲ್ಲಿ ಸ್ಮೋಕ್ ಮಾಡುವಾಗ ಸೋನುಗೆ ರಾಕಿ ಕಂಪನಿ ಕೊಡ್ತಿದ್ದರಂತೆ..
ಮೊದಲ ಬಾರಿಗೆ ಸೋನು ಸಿಗರೇಟು ಕೇಳಿದಾಗ ರಾಕೇಶ್ ಶಾಕ್ ಆಗಿದ್ದಾಗಿ ಹೇಳಿಕೊಂಡಿದ್ದಾರೆ ಸೋನು.. ನೋಡಿದವರು ಏನು ಅನ್ನುತ್ತಾರೆ ಹೀಗೆ ಸಿಗರೇಟು ಸೇದಿದರೆ ಎಂದು ರಾಕೇಶ್ ಅಡಿಗ ಕೇಳಿದಾಗ, ನಾನು ಯಾವುದನ್ನೂ ಮುಚ್ಚಿ ಇಡುವುದಿಲ್ಲ. ಹಾಗೆಯೇ ನಾನು ಅಡಿಕ್ಟ್ ಅಲ್ಲ.
ಬೇಕು ಅಂತಾನೂ ಅನಿಸಲ್ಲ. ಎದುರಿಗೆ ಇದ್ದಾಗ ಅದನ್ನು ಮಾಡಬೇಕು ಅನಿಸತ್ತೆ. ಹಾಗಾಗಿ ಸಿಗರೇಟು ಸೇದಿದ್ದೇನೆ. ನನಗೆ ರಾಕೇಶ್ ಅಡಿಗ ಪರಿಚಯ ಆಗುವುದಕ್ಕೆ ಕಾರಣವೇ ಸ್ಮೋಕಿಂಗ್ ರೂಮ್ ಎಂದಿದ್ದಾರೆ.