Brahmastra ದ ಬಗ್ಗೆ ಮಾತನಾಡಿದ ಬಾಲಿವುಡ್ ‘ಮಣಿಕರ್ಣಿಕಾ’ ಗೆ ತಿರುಗೇಟು ನೀಡಿದ ‘ಶಿವ’..!!
ಬಾಲಿವುಡ್ ನ ದೊಡ್ಡ ದೊಡ್ಡ ಮಂದಿ ವಿರುದ್ಧ ಕಿಡಿ ಕಾರುತ್ತಾ , ಬಾಲಿವುಡ್ ಮಾಫಿಯಾ , ನೆಪೋಟಿಸಮ್ ವಿರುದ್ಧ ಕಿಡಿಕಾರುತ್ತಾ ಬಂದಿರುವ ಡೇರಿಂಗ್ ನಟಿ , ಬಾಲಿವುಡ್ ನ ಕ್ವೀನ್ ಕಂಗನಾ ರಣೌತ್ ರಣಬೀರ್ ಹಾಗೂ ಆಲಿಯಾ ಅಬಿನಯದ ಸಿನಿಮಾ ಬ್ರಹ್ಮಾಸ್ತ್ರದ ವಿರುದ್ಧವೂ ಮಾತನಾಡಿದ್ದರು..
ಬಾಕ್ಸ್ ಆಫೀಸ್ ರಿಪೋರ್ಟ್ , ವಿಮರ್ಶೆಗಳು ಫೇಕ್.. ಕರಣ್ ಜೋಹರ್ ದುಡ್ಡು ಸುರಿದು ನಕಲಿ ರಿಪೋರ್ಟ್ ತೋರಿಸುತ್ತಿದ್ದಾರೆ.. ಈ ಸಿನಿಮಾ ಡಿಸಾಸ್ಟರ್ ಈ ಸಿನಿಮಾಗಾಗಿ 600 ಕೋಟಿ ನಾಶ ಮಾಡಿದಕ್ಕೆ ನಿರ್ದೇಶಕ ಅಯಾನ್ ಮುಖರ್ಜಿಗೆ ಜೈಲಿಗೆ ಹಾಕಬೇಕೆಂದೆಲ್ಲಾ ಹೇಳಿದ್ದರು..
ಇಷ್ಟು ದಿನ ಕಂಗನಾ ಆರೋಪಕ್ಕೆ ರಣಬೀರ್ ಮೌನವಾಗಿದ್ದರು.. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅದ್ಭುತ ಪದರ್ಶನ ಕಾಣ್ತಿದ್ದು 2 ನೇ ವಾರವೂ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಗಳಿಜಕೆ ಮಾಡ್ತಿದೆ..
ಈ ಹೊತ್ತಲ್ಲೇ ‘ಶಂಶೇರಾ’ ರಣಬೀರ್ ಬಾಲಿವುಡ್ ನ ಮಣಿಕರ್ಣಿಕಾ ವಿರುದ್ಧ ಕ್ರೋಶ ಹೊರಹಾಕಿದ್ದಾರೆ..
ಮೊದಲಿಗೆ ನಮ್ಮ ಸಿನಿಮಾದ ಬಜೆಟ್ 600 ಕೋಟಿಗೂ ಅಧಿಕ ಎನ್ನುವುದನ್ನು ರಣಬೀರ್ ಒಪ್ಪಿಕೊಂಡಿದ್ದಾರೆ. ಅಲ್ಲದೇ, ಈ ಸಿನಿಮಾ ಮೂರು ಭಾಗದಲ್ಲಿ ಮೂಡಿ ಬರುತ್ತಿದೆ. ಹಾಗಾಗಿ ಸೆಟ್, ಪ್ರಾಪರ್ಟಿ, ವಿಎಫ್ ಎಕ್ಸ್ ಮತ್ತು ಇತರೆ ಕೆಲಸಗಳಿಗೆ ಆ ಪ್ರಮಾಣದ ಬಜೆಟ್ ಬಳಸಲಾಗಿದೆ. ಮೂರು ಸಿನಿಮಾಗಳಿಗೆ ಅದನ್ನು ವಿಭಾಗಿಸಿದರೆ, ಇನ್ನೂರು ಕೋಟಿ ಕೂಡ ಬಜೆಟ್ ಆಗುವುದಿಲ್ಲ. ಈಗ ಸಿನಿಮಾ ಗೆದ್ದಿದೆಯಾ ಅಥವಾ ಸೋತಿದೆಯಾ ಅಂತ ಅಂದಾಜಿಸಲಿ ಎಂದಿದ್ದಾರೆ