Darshan : ಮೇಲಿನ ಅಭಿಮಾನದಿಂದ ‘ಕ್ರಾಂತಿ’ ಕೆಫೆ ನಡೆಸುತ್ತಿರುವ ಬೆಂಗಾಲಿ ಹುಡುಗನಿಗೆ ಇರೋದು ಅದೊಂದೇ ಆಸೆ..!!
ಕ್ರಾಂತಿ…. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ‘ಕ್ರಾಂತಿ’ಯ ಜಾತ್ರೆ ಈಗಾಗಲೇ ಶುರುವಾಗಿದ್ದು , ಸಿನಿಮಾತಂಡ ಒಂದೆಡೆ ಪ್ರಚಾರ ಮಾಡುತ್ತಿದ್ದರೆ , ಮತ್ತೊಂದೆಡೆ ಅಭಿಮಾನಿಗಳೇ ಖುದ್ದು ‘ಕ್ರಾಂತಿ’ಯನ್ನ ಅದ್ಧೂರಿ ಹಾಗೂ ಕ್ರಾಂತಿಕಾರಿಯಾಗಿ ವಿಭಿನ್ನ ರೀತಿಯಲ್ಲಿ ಪ್ರಚಾರ ಮಾಡ್ತಿದ್ದಾರೆ..
ಅಂದ್ಹಾಗೆ ಡಿ ಬಾಸ್ ಅವರ ಕ್ರೇಜ್ ಜಸ್ಟ್ ಕರ್ನಾಟಕಕ್ಕೆ ಸೀಮಿತವಾಗಿಲ್ಲ.. ರಾಜ್ಯಗಳ ಗಡಿಯಾಚೆಗೂ ದಾಸನ ಹವಾ ಜೋರಾಗಿದೆ.. ಹೌದು.. ಬೆಂಗಾಲಿ ಹುಡುಗ ಡಿ ಬಾಸ್ ಮೇಲಿನ ಅಭಿಮಾನವನ್ನ ವಿಭಿನ್ನವಾಗಿ ತೋರಿಸಿಕೊಂಡಿದ್ದಾನೆ..
ಪಶ್ಚಿಮ ಬಂಗಾಳ ಮೂಲದ ದರ್ಶನ್ ಅಭಿಮಾನಿಯೊಬ್ಬ ದರ್ಶನ್ ಗಾಗಿ ದರ್ಶನ್ ರ ಕ್ರಾಂತಿ ಸಿನಿಮಾದ ಹೆಸರಲ್ಲೇ ಕೆಫೆ ನಡೆಸುತ್ತಿದ್ದಾರೆ.
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಿಂದ 13 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದ ವಿವೇಕ್ ಎಂಬಾತ ದರ್ಶನ್ ಅಭಿಮಾನಿ.. ಈತ ‘ ಕ್ರಾಂತಿ ಕೆಫೆ ’ ಆರಂಭಿಸಿದ್ದಾರೆ.
ಅಂದ್ಹಾಗೆ ದರ್ಶನ್ ಗೆ ಮಾಸ್ ಅಭಿಮಾನಿಗಳು ಹೆಚ್ಚಿದ್ದಾರೆ.. ದರ್ಶನ್ ಅವರ ಇದೇ ಮಾಸ್ ಇಮೇಜ್ ಗೆ ಡಾರ್ಜಲಿಂಗ್ ಹುಡುಗ ಕೂಡ ಫಿದಾ ಆಗಿದ್ದಾನೆ.. ಅಂದ್ಹಾಗೆ ಈ ಅಭಿಮಾನಿ ಹಾಗೂ ಇವರ ಕೆಫೆಯದ್ದೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದ್ದು , ಫೋಟೋಗಳು ಸಹ ವೈರಲ್ ಆಗ್ತಿದೆ..
ಅಂದ್ಹಾಗೆ ಇವರ ಕೆಫೆಗೆ ಬಹಳಷ್ಟು ಜನ ದರ್ಶನ್ ಅಭಿಮಾನಿಗಳು ಬರುತ್ತಾರಂತೆ.. ಅಲ್ಲದೇ ದರ್ಶನ್ ರನ್ನ ವಿವೇಕ್ ಅವರು ದೇವರಂತೆ ಕಾಣುತ್ತಾರಂತೆ.. ಒಮ್ಮೆಯಾದ್ರೂ ದರ್ಶನ್ ರನ್ನ ಭೇಟಿ ಮಾಡುವ ಸೆ ಈ ಹುಡುಗನದ್ದು..
ಇನ್ನೂ ಕ್ರಾಂತಿ ಸಿನಿಮಾದ ಬಗ್ಗೆ ಮಾತನಾಡಿದ್ರೆ , ಸಿನಿಮಾದಲ್ಲಿ ದರ್ಶನ್ ಗೆ ರಚಿತಾ ರಾಮ್ ನಾಯಕಿಯಾಗಿದ್ದಾರೆ.. ವಿ. ಹರಿಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ದರ್ಶನ್ ಗೆ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಶೈಲಜಾ ನಾಗ್ ಮತ್ತು ಬಿ. ಸುರೇಶ ದಂಪತಿ ಬಂಡವಾಳ ಹೂಡಿದ್ದಾರೆ..
ಸಿನಿಮಾ ಕನ್ನಡ ರಾಜ್ಯೋತ್ಸವಕ್ಕೆ ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಿದೆ..