ಸೌತ್ ಸಿನಿಮಾಗಳು ಬಾಲಿವುಡ್ ಮುಂದೆ ಈಗಾಗಲೇ ಅಬ್ಬರಿಸುತ್ತಿವೆ.. ಅಂದ್ಹಾಗೆ ಇನ್ನೂ ಸಾಕಷ್ಟು ಬಹುನಿರೀಕ್ಷಿತ ಸೌತ್ ಸಿನಿಮಾಗಳು ರಿಲೀಸ್ ಆಗಲಿವೆ.. ಈ ಪೈಕಿ , ಮೆಗಾ ಸ್ಟಾರ್ ಚಿರಂಜೀವಿ ನಟನೆಯ ಗಾಡ್ ಫಾದರ್ ಸಿನಿಮಾ ಸಹ ಒಂದು.. ಈ ಸಿನಿಮಾದಲ್ಲಿ ಬಾಲಿವುಡ್ ನ ಸ್ಟಾರ್ ನಟ , ಬ್ಯಾಡ್ ಬಾಯ್ , ಬಾಕ್ಸ್ ಆಫೀಸ್ ಕಾ ಸುಲ್ತಾನ ಸಲ್ಮಾನ್ ಖಾನ್ ಸಹ ನಟಿಸಿರುವ ವಿಚಾರ ಗೊತ್ತೇ ಇದೆ..
ಹೀಗಾಗಿ ಈ ಸಿನಿಮಾ ಮೇಲೆ ಹಿಂದಿ ಫ್ಯಾನ್ಸ್ ಗೂ ಕೂಡ ಭಾರೀ ನಿರೀಕ್ಷೆಯಿತ್ತಾದ್ರೆ ಇದೀಗ ಸಲ್ಲು ಫ್ಯಾನ್ಸ್ ಗೆ ನಿರಾಸೆಯಾಗಿದೆ.. ಸಲ್ಮಾನ್ ಖಾನ್ ಸಿಟ್ಟಾಗಿದ್ದಾರೆ ಎನ್ನೋ ವಿಚಾರ ಸಾಕಷ್ಟು ಸೌಂಡ್ ಮಾಡ್ತಿದೆ..
ಹೌದು.. ಸಿನಿಮಾ ಹಿಂದಿಗೂ ಡಬ್ ಆಗಿ ರಿಲೀಸ್ ಆಗುತ್ತದೆ ಎಂದೇ ಇಷ್ಟು ದಿನಗಳಿಂದ ಹೇಳಲಾಗ್ತಿತ್ತು.. ಆದ್ರೀಗ ಕೇವಲ ತೆಲುಗಿನಲ್ಲಿ ಮಾತ್ರ ರಿಲೀಸ್ ಆಗಲಿದೆ.. ಸಿನಿಮಾ ಹಿಂದಿಗೆ ಡಬ್ ಆಗುವುದಿಲ್ಲ ಎನ್ನಲಾಗ್ತಿದ್ದು , ಇದಕ್ಕೆ ಕಾರಣ ಸಲ್ಲು ಭಾಯ್ ಎನ್ನಲಾಗ್ತಿದೆ..
ಅಂದ್ಹಾಗೆ ಮಲಯಾಳಂನ ಸಿನಿಮಾವಾದ ಸೂಪರ್ ಹಿಟ್ ಲೂಸಿಫರ್ ನ ರೀಮೇಕ್ ಗಾಡ್ ಫಾದರ್.. ತಮಿಳಿನ ನಿರ್ದೇಶಕರಾದ ಮೋಹನ್ ರಾಜಾ ಅವರು ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.. ಸಿನಿಮಾ ಅಕ್ಟೋಬರ್ 5 ಕ್ಕೆ ರಿಲೀಸ್ ಆಗಲಿದೆ.. ಈ ಸಿನಿಮಾವನ್ನ ಆರಂಭದಲ್ಲಿ ಹಿಂದಿಗೆ ಡಬ್ ಮಾಡಬೇಕೆಂದು ನಿರ್ಧಾರಮಾಡಲಾಗಿತ್ತು.. ಆದ್ರೆ ಇದೀಗ ಹಿಂದಿ ಡಬ್ ಮಾಡಲು ಸಿನಿಮಾ ತಂಡ ಹಿಂದೇಟು ಹಾಕಿದೆ ಎನ್ನಲಾಗ್ತಿದ್ದು , ಇದಕ್ಕೆ ಖುದ್ದು ಸಲ್ಲು ಭಾಯ್ ಕಾರಣ ನ್ನಲಾಗ್ತಿದೆ..
ಹೌದು..! ಸಿನಿಮಾದ ಟ್ ಪುಟ್ ನೋಡಿ ಸಲ್ಲು ಭಾಯ್ ಗೆ ಬೇಸರವಾಗಿದ್ಯಂತೆ.. ತಮ್ಮ ಲುಕ್ ಬಿಟ್ರೆ ಔಟ್ ಪುಟ್ ಸಲ್ಮಾನ್ ಖಾನ್ ಗೆ ಹಿಡಿಸದ ಕಾರಣಕ್ಕೆ ಹಿಂದಿಗೆ ಡಬ್ಬಿಂಗ್ ಬೇಡವೆಂದಿದ್ದಾರೆ ಎನ್ನಲಾಗ್ತಿದೆ..
ಅಲ್ಲದೇ ತಮ್ಮ ಪಾತ್ರವನ್ನ ಸರಿಯಾಗಿ ಮಾಡದಕ್ಕೆ ಸಲ್ಮಾನ್ ಖಾನ್ ಸಿನಿಮಾತಂಡವನ್ನೂ ಪ್ರಶ್ನೆ ಮಾಡಿದ್ದಾರೆ.. ಸಿನಿಮಾದಲ್ಲಿ ನಟಿಸಿ ತಮ್ಮ ವರ್ಚಸ್ಸು ಕುಂದಿದೆ ಎಂದು ತಮ್ಮ ಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಬಾಲಿವುಡ್ ಅಂಗಳದಲ್ಲಿ ಹರಿದಾಡ್ತಿದೆ..
ಅಲ್ಲದೇ ಸಿನಿಮಾವನ್ನ ಯಾವುದೇ ಕಾರಣಕ್ಕೂ ಹಿಂದಿಯಲ್ಲಿ ರಿಲೀಸ್ ಮಾಡದಂತೆ ಸಲ್ಲು ಹೇಳಿರೋದಾಗಿ ಮಾತುಗಳು ಕೇಳಿಬರುತ್ತಿದೆ..
ಸದ್ಯ ಕಾರಣದಿಂದ ಸಿನಿಮಾ ಹಿಂದಿಗೆ ಡಬ್ ಆಗುವುದು ಅನುಮಾನ ಅಂತಲೇ ಹೇಳಲಾಗ್ತಿದೆ..