ಈ ತಿಂಗಳು ಒಂದು ರೀತಿ ಎಲ್ಲಾ ಭಾಷೆಗಳ ಸಿನಿಮಾರಂಗಗಳಿಗೂ ಹಬ್ಬ ಎನ್ನಬಹುದು.. ಸಾಲು ಸಾಲು ಸಿನಿಮಾಗಳು ಥಿಯೇಟರ್ ಗಳಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಿ ಅಬ್ಬರಿಸುತ್ತಿವೆ..
ಹಿಂದಿಯಲ್ಲಿ ಪ್ರಮುಖವಾಗಿ ಸೆಪ್ಟೆಂಬರ್ 9 ಕ್ಕೆ ಬ್ರಹ್ಮಾಸ್ತ್ರ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಈಗಲೂ ಅಬ್ಬರಿಸುತ್ತಿದೆ..
ಅಂದ್ಹಾಗೆ ಮಲಯಾಳಂನಲ್ಲಿ ಒಟ್ಟಾರೆಯಾಗಿ 6 ಸಿನಿಮಾಗಳು ರಿಲೀಸ್ ಆಗುತ್ತಿವೆ..
ಪ್ರಮುಖವಾಗಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ತೆಲುಗಿನ ಕಾರ್ತಿಕೇಯ 2 ಸಿನಿಮಾ ಮಲಯಾಳಂನಲ್ಲಿ ಡಬ್ ಆಗಿ ರಿಲೀಸ್ ಆಗ್ತಿದೆ..
ಇದರ ಹೊರತಾಗಿ ಚಟ್ಟಂಬಿ , ವೆಲ್ಲಾರಿ ಪಟ್ಟಣಂ , ಒರ್ಮಕಲಿಲ್ , ಕೊಶಿಚ್ಯಂಟೆ ಪರಂಬು , ಕರ್ಮಸಾಗರಂ ಸಿನಿಮಾಗಳು ರಿಲೀಸ್ ಆಗ್ತಿವೆ..
ಇತ್ತ ಕನ್ನಡದಲ್ಲಿ ಸೆಪ್ಟೆಂಬರ್ 16 ಕ್ಕೆ ರಿಲೀಸ್ ಆದ ಮಾನ್ಸೂನ್ ರಾಗವೂ ಉತ್ತಮ ಪ್ರದರ್ಶನ ಕಾಣುತ್ತಿದೆ..
ಜೊತೆಗೆ ಈ ವಾರ ಗುರುಶಿಷ್ಯರು , ರಾಜಾ ರಾಣಿ ರೋರರ್ ರಾಕೆಟ್ , ಧಮ್ ಸಿನಿಮಾಗಳೂ ಕೂಡ ರಿಲೀಸ್ ಆಗ್ತಿದೆ..
ಮತ್ತೊಂದೆಡೆ ತಮಿಳಿನಲ್ಲೂ ಸಾಲು ಸಾಲು ಸಿನಿಮಾಗಳು ರಿಲೀಸ್ ಆಗ್ತಿವೆ..
ಒಟ್ಟಾರೆಯಾಗಿ 8 ಸಿನಿಮಾಗಳು ವಾರ ತೆರೆಗೆ ಬರಲಿದೆ.. ಅಂದ್ಹಾಗೆ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ್ದ ತೆಲುಗಿನ ಕಾರ್ತಿಕೇಯ 2 ಸಿನಿಮಾ ತಮಿಳಿಗೆ ರೀಮೇಕ್ ಆಗಿ ರಿಲೀಸ್ ಆಗ್ತಿದೆ..
ಇನ್ನೂ ತೆಲುಗಿನಲ್ಲೂ ಈ ವಾರ ಸಾಕಷ್ಟು ಸಿನಿಮಾಗಳು ರಿಲೀಸ್ ಆಗ್ತಿವೆ..
ಒಟ್ಟಾರೆಯಾಗಿ ತೆಲುಗಿನಲ್ಲಿ 6 ಸಿನಿಮಾಗಳು ರಿಲೀಸ್ ಆಗ್ತಿವೆ.. ಸೆಪ್ಟೆಂಬರ್ 22 ಕ್ಕೆ ಪಗ ಪಗ ಪಗ ಸಿನಿಮಾ ರಿಲೀಸ್ ಆಗ್ತಿದೆ..
ಸೆಪ್ಟೆಂಬರ್ 23 ಕ್ಕೆ ಒಟ್ಟಾರೆಯಾಗಿ 5 ಸಿನಿಮಾಗಳು ತೆಲುಗು ರಾಜ್ಯಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗುತ್ತಿವೆ..
ಕೃಷ್ಣ ವೃಂಧ ವಿಹಾರಿ , ದೊಂಗಲುನ್ನಾರು ಜಾಗ್ರತ, ಅಲ್ಲುರಿ , ಸರ್ವಂ ಸಿದ್ಧಂ , ಗುರುತುಂದಾ ಸೀತಾಕಾಲಂ ಸಿನಿಮಾಗಳು ರಿಲೀಸ್ ಆಗ್ತಿವೆ..