ತೆಲುಗಿನ ಸ್ಟಾರ್ ನಟ ನಿತಿನ್ ಅವರು ಬಿಜೆಪಿ ಸೇರಲಿದ್ದಾರೆ ಅನ್ನೋ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸಂಚಲನ ಸೃಷ್ಟಿ ಮಾಡಿದೆ..
ನಿತಿನ್ ಕಮಲ ಹಿಡಿಯೋದು ಕನ್ ಫರ್ಮ್ ಎನ್ನಲಾಗ್ತಿದೆ.. ಆದ್ರೆ ಯಾವ ಕ್ಷೇತ್ರದಿಂದ ಅನ್ನೋದೇ ಸರಿಯಾಗಿ ಗೊತ್ತಾಗುತ್ತಿಲ್ಲ..
ಅಂದ್ಹಾಗೆ ಕೆಲವು ದಿನಗಳ ಹಿಂದಷ್ಟೇ ನಿತಿನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದರು.. ಆಗಿನಿಂದಲೂ ಅವರು ಬಿಜೆಪಿ ಸೇರಲಿದ್ದಾರೆ ಎನ್ನೋ ಚರ್ಚೆ ಜೋರಿದೆ..
ಅಂದ್ಹಾಗೆ ನಟ ಖುದ್ದು ರಾಜಕಾರಣಕ್ಕೆ ಇಳಿಯಲಿದ್ದಾರೆ ಅನ್ನೋ ಗುಮಾನಿ ನಡುವೆ ತಮ್ಮ ಕುಟುಂಬ ಸದಸ್ಯರಿಗೆ ಬಿಜೆಪಿ ಟಿಕೆಟ್ ಕೊಡಿಸಲು ಶ್ರಮ ಪಡುತ್ತಿದ್ದಾರೆ ಎಂಬ ಸುದ್ದಿಯೂ ಇದೆ..
ಅಂದ್ಹಾಗೆ ನಿತಿನ್ ತಮ್ಮ ತಂದೆ ಸುಧಾಕರ್ ರೆಡ್ಡಿ ಅಥವ ಸಹೋದರಿ ನಿಖಿತಾ ರೆಡ್ಡಿಗೆ ಬಿಜೆಪಿ ಟಿಕೆಟ್ ಕೊಡಿಸಲು ಓಡಾಡುತ್ತಿದ್ದಾರೆ ಎನ್ನಲಾಗ್ತಿದೆ..
ಅಂದ್ಹಾಗೆ ಜೆಪಿ ನಡ್ಡಾರನ್ನ ಭೇಟಿ ಮಾಡುವ ಹಯಿಂದಿನ ಉದ್ದೇಶವೂ ಇದೇ ಎನ್ನಲಾಗ್ತಿದೆ.. ಅಂದ್ಹಾಗೆ ಮುಂದಿನ ವರ್ಷ ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.. ಈ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಜನೆಯಲ್ಲಿ ನಿತಿನ್ ಕುಟುಂಬವಿದ್ಯಂತೆ..