Ramya : BJP : ಅಬ್ಬಬ್ಬಾ..!! ಇದೆಂಥಾ ಟ್ವಿಸ್ಟ್..?? ‘ಕಮಲ’ ಹಿಡಿತಾರಾ ರಮ್ಯಾ,…!!!
ಸ್ಯಾಂಡಲ್ ವುಡ್ ನ ಮೋಹಕ ತಾರೆ ರಮ್ಯಾ ತಮ್ಮ ಮನೋಜ್ನ ನಟನೆಯಿಂದ ಈಗಲೂ ಸ್ಯಾಂಡಲ್ ವುಡ್ ನ ಕ್ವೀನ್ ಎಂದೇ ಕರೆಸಿಕೊಳ್ತಾರೆ.. ಬಣ್ಣದ ಜಗತ್ತಿನಿಂದ ದೂರಾಗಿ ವರ್ಷಗಳೇ ಕಳೆದ್ರೂ ರಮ್ಯಾ ಕ್ರೇಜ್ ಮಾತ್ರ ಈಗಲೂ ಕಡಿಮೆಯಾಗಿಲ್ಲ..
ಅಂದ್ಹಾಗೆ ರಾಜಕೀಯದಲ್ಲೂ ರಮ್ಯಾ ಗುರುತಿಸಿಕೊಂಡು ಇದೀಗ ರಾಜಕೀಯದಿಂದಲೂ ದೂರವೇ ಇದ್ಧಾರೆ.. ಆದ್ರೆ ರಮ್ಯಾ ಕಟ್ಟಾ ಕಾಂಗ್ರೆಸ್ ಬೆಂಬಲಿಗರು ಎನ್ನುವುದು ಗೊತ್ತಿದೆ.. ಬಿಜೆಪಿ , ಮೋದಿ ಅವರನ್ನ ಸದಾ ಕಾಲ ವಿರೋಧಿಸುತ್ತಾ , ರಾಹುಲ್ ಗಾಂಧಿ ಅವರ ಸೈದ್ಧಾಂತಗಳನ್ನ ಬೆಂಬಲಿಸುತ್ತಾ ಬಂದಿದ್ದಾರೆ..
ಆದ್ರೀಗ ಕಹಾನಿಮೇ ಟ್ವಿಸ್ಟ್ ಎಂಬಂತೆ ರಮ್ಯಾ ಬಿಜೆಪಿ ಸೇರಲಿದ್ದಾರೆ ಅನ್ನೋ ಸುದ್ದಿ ಹರಿದಾಡ್ತಿದ್ದು , ಈ ವದಂತಿಯನ್ನೂ ಸಹ ಭಿಮಾನಿಗಳಿಂದ ಅರಗಿಸಿಕೊಳ್ಳೋಕಾಗ್ತಿಲ್ಲ..
ಹೌದು..!
ಹಳೇ ಮೈಸೂರು ಭಾಗದಲ್ಲಿ ಬಿಜೆಪಿಯ ಬಲವರ್ಧನೆಗೆ ಪ್ರಯತ್ನಿಸುತ್ತಿರುವ ಕಮಲ ನಾಯಕರು ಇದೀಗ ರಮ್ಯಾರನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ತಂತ್ರಗಾರಿಕೆಯಲ್ಲಿದ್ದಾರೆ ಎನ್ನಲಾಗ್ತಿದೆ..
ಆದ್ರೆ ಈ ಬಗ್ಗೆ ರಮ್ಯಾ ಅವರ ಯೋಚನೆ ಏನು..?? ಈ ಸುದ್ದಿ ಎಷ್ಟರ ಮಟ್ಟಿಗೆ ನಿಜ ,, ರಮ್ಯಾ ನಿಜಕ್ಕೂ ಬಿಜೆಪಿ ಸೇರುತ್ತಾರಾ ಅನ್ನೋದಕ್ಕೆ ನಿಖರ ಉತ್ತರಗಳು ಇಲ್ಲ.. ಮುಂದಿನ ದಿನಗಳಲ್ಲಿ ಯಾವೆಲ್ಲಾ ಬೆಳಗಣಿಗಳಾಗುತ್ತೆ ಅನ್ನೋದನ್ನ ಕಾದು ನೋಡ್ಬೇಕಷ್ಟೇ.. ಆದ್ರೆ ರಾಜಕಾರಣದಲ್ಲಿ ಯಾವುದೂ ಅಸಾಧ್ಯವೂ ಅಲ್ಲ… ಟ್ವಿಸ್ಟ್ ಗಳಿಗೂ ಕೊರೆತಯೇನಿಲ್ಲ.. ಯಾವಾಗ ಯಾವ ರೀತಿಯಾದ ಬದಲಾವಣೆಗಳಾಗ್ತವೆ ಅನ್ನೋದನ್ನೂ ಊಹೆ ಮಾಡಿಕೊಳ್ಳೋದಕ್ಕೆ ಸಾಧ್ಯವಿಲ್ಲ.. ಇಲ್ಲಿ ಅಸಾಧ್ಯ ಅಂತ ಊಹೆ ಮಾಡೋದಕ್ಕೆ ಆಪ್ಷನ್ ಇರೋದಿಲ್ಲ..