Samantha : ಅನಾರೋಗ್ಯದಿಂದ ಬಳಲುತ್ತಿದ್ದಾರಾ ಸಮಂತಾ..??
ನಾಗಚೈತನ್ಯರ ಜೊತೆಗೆ ಡಿವೋರ್ಸ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಇತ್ತೀಚೆಗೆ ಬೋಲ್ಡ್ ಪಾತ್ರಗಳಿಗೂ ಪ್ಪುತ್ತಿದ್ದು , ಬಾಲಿವುಡ್ , ಹಾಲಿವುಡ್ ನಲ್ಲೂ ಆಫರ್ ಗಳನ್ನ ಗಿಟ್ಟಿಸಿಕೊಂಡಿದ್ದಾರೆ.. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಸಮಂತಾಗೆ ರೆಸ್ಟ್ ಮಾಡೋದಕ್ಕೆ ಸಮಯ ಕಡಿಮೆ ಸಿಗುತ್ತಿದೆ..
ಈ ನಡುವೆ ಸಮಂತಾ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗ್ತಿದ್ದು , ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ಧಾರೆ.. ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆಕ್ಟೀವ್ ಆಗಿರುತ್ತಿದ್ದ ನಟಿ ಇದೀಗ ಸುಮಾರು 10 ದಿನಗಳಿಂದ ಸೈಲೆಂಟ್ ಆಗಿರೋದೇ ಇಂತಹದ್ದೊಂದು ವದಂತಿ ಹರಿದಾಡೋದಕ್ಕೆ ಕಾರಣವಾಗಿದೆ..
ಅಲ್ದೇ ವಿಜಯ್ ದೇವರಕೊಂಡ ಜೊತೆಗೆ ಖುಷಿ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ.. ಆದ್ರೆ ಅನಾರೋಗ್ಯದ ಕಾರಣದಿಂದ ಸಿನಿಮಾದ ಶೂಟಿಂಗ್ ನಿಂದಲೂ ಬ್ರೇಕ್ ಪಡೆದುಕೊಂಡಿದ್ದಾರೆ ಎನ್ನಲಾಗ್ತಿದೆ..