GodFather OTT ಹಕ್ಕು ಭಾರೀ ಮೊತ್ತಕ್ಕೆ ಸೇಲ್..!!! ಎಷ್ಟು ಕೋಟಿಗೆ ಮಾರಾಟ..??
ಆಚಾರ್ಯ ಸಿನಿಮಾದ ಸೋಲಿನ ನಂತರ ಇದೀಗ ಚರಿಂಜೀವಿ ಅವರ ಗಾಡ್ ಫಾದರ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ.. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ..
ಇನ್ನೇನು ಸಿನಿಮಾ ರಿಲೀಸ್ ಗೆ ಕೆಲ ದಿನಗಳಷ್ಟೇ ಬಾಕಿಯಿದೆ. ಗಾಡ್ ಭಾದರ್ ಸಿನಿಮಾ ಅಕ್ಟೋಬರ್ 5 ರಂದು ರಿಲೀಸ್ ಆಗುತ್ತಿದೆ.. ಅಂದ್ಹಾಗೆ ಈ ಸಿನಿಮಾ ಮಾಲಿವುಡ್ ನ ಸೂಪರ್ ಹಿಟ್ ಸಿನಿಮಾ ಲೂಸಿಫರ್ ನ ರೀಮೇಕ್ ಆಗಿದೆ..
ಅಂದ್ಹಾಗೆ ಸಿನಿಮಾದ ಒಟಿಟಿ ಹಕ್ಕು ಭಾರೀ ಮೊತ್ತಕ್ಕೆ ಸೇಲಾಗಿದ್ಯಂತೆ.. ಅಲ್ದೇ ಸಿನಿಮಾ ಥಿಯೇಟರ್ ಗಳಿಗಪ್ಪಳಿಸಿ 2 ವಾರಗಳಲ್ಲೇ ಒಟಿಟಿಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗ್ತಿದೆ..
NetFlix ಈ ಸಿನಿಮಾದ Ott ಹಕ್ಕನ್ನ ಭಾರೀ ಮೊತ್ತಕ್ಕೆ ಖರೀದಿಸಿದೆ ಎನ್ನಲಾಗ್ತಿದೆ..
GodFather ಸಿನಿಮಾದಲ್ಲಿ ಚಿರಂಜೀವಿ (Chiranjeevi) , ಸಲ್ಮಾನ್ ಖಾನ್ ( Salman Khan ) , ನಯನತಾರಾ ( Nayanatara) ರಂತಹ ಸ್ಟಾರ್ ನಟರುಗಳ ದಂಡೇ ಇದೆ..
ಸಿನಿಮಾಗೆ ಬರೋಬ್ಬರಿ 57 ಕೋಟಿ ರೂ ನೀಡಿ ಒಟಿಟಿ ಹಕ್ಕು ಖರೀದಿಸಲಾಗಿದೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಸದ್ದು ಮಾಡ್ತಿದೆ..