Karthikeya 2 : ಒಟಿಟಿಗೆ ಈ ದಿನವೇ ಬರಲಿದೆ ನೋಡಿ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಸಿನಿಮಾ..!!
ಬಾಲಿವುಡ್ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿದ ಗಲೂ ಥಿಯೇಟರ್ ಗಳಲ್ಲಿ ಉತ್ತಮ ಪ್ರದರ್ಶನ ಕಾಣ್ತಿರುವ ನಿಖಿಲ್ ನಟನೆಯ ಕಾರ್ತಿಕೇಯ 2 ಸಿನಿಮಾ ಒಟಿಟಿಯಲ್ಲಿ ಯಾವಾಗ ಬರಲಿದೆ ಎಂದು ಅಭಿಮಾನಿಗಳು ಕಾಯ್ತಿದ್ದಾರೆ..
ಅಂದ್ಹಾಗೆ ಸಿನಿಮಾದ ಒಟಿಟಿ ಹಕ್ಕನ್ನ ಜೀ5 ಸಂಸ್ಥೆ ಚಿತ್ರದ ಡಿಜಿಟಲ್ ರೈಟ್ಸ್ ಖರೀದಿಸಿದ್ದು ದಸರಾ ಸಂಭ್ರಮದಲ್ಲಿ ಸಿನಿಮಾ ಒಟಿಟಿಗೆ ಲಗ್ಗೆ ಇಡೋದು ಬಹುತೇಕ ಖಚಿತ ಅಂತಲೇ ಹೇಳಲಾಗ್ತಿದೆ..
ಕಾರ್ತಿಕೇಯ 2 ಹಿಂದಿ ಬೆಲ್ಟ್‌ಗಳಲ್ಲಿ ಅಸಾಧಾರಣ ವ್ಯವಹಾರವನ್ನು ಮಾಡುತ್ತಿದೆ. ಚಿತ್ರದ ಅಗಾಧ ಯಶಸ್ಸು ಅನೇಕರನ್ನು ಆಶ್ಚರ್ಯಗೊಳಿಸಿದೆ. ಯಾವುದೇ ಪ್ರಮುಖ ಪ್ರಚಾರವಿಲ್ಲದೇ ಸೈಲೆಂಟಾಗಿಯೇ ಬಂದ ಸಿನಿಮಾ ಅಬ್ಬರಿಸಿ ಬೊಬ್ಬಿರಿದಿದೆ..
ಸಿನಿಮಾ ಥಿಯೇಟರ್ ಗಳಲ್ಲಿ ಧೂಳೆಬ್ಬಿಸಿದೆ.. ಅಂದ್ಹಾಗೆ ಹಿಂದಿ ಬೆಲ್ಟ್‌ನಲ್ಲಿ ಬಿಡುಗಡೆಯ ಸಮಯದಲ್ಲಿ ಸಾಧಾರಣ 50 ಥಿಯೇಟರ್ ಗಳೊಂದಿಗೆ ಪ್ರಾರಂಭವಾದ ನಿಖಿಲ್ ಸಿದ್ಧಾರ್ಥ ಅಭಿನಯದ ಕಾರ್ತಿಕೇಯ 2 ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ..
ಚಿತ್ರವು ಬಾಯಿಮಾತಿನ ಕಾರಣದಿಂದಾಗಿ ಹೆಚ್ಚು ಪರದೆಗಳನ್ನು ಪಡೆಯುತ್ತಲೇ ಇತ್ತು. ಚಿತ್ರದ ಕಥಾವಸ್ತುವು ಶ್ರೀಕೃಷ್ಣನ ಬಗ್ಗೆ ಸತ್ಯವನ್ನು ಕಂಡುಹಿಡಿಯುವುದರ ಮೇಲೆ ಕೇಂದ್ರೀಕೃತವಾಗಿದೆ. ಜನ್ಮಾಷ್ಟಮಿಯ ಸಂದರ್ಭದಲ್ಲಿ ಹೆಚ್ಚು ಹೆಚ್ಚು ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಆಗಮಿಸಿ ಯಶಸ್ವಿಯಾದರು. ಪ್ರಸ್ತುತ, ಇದು ಹಿಂದಿ ಬೆಲ್ಟ್ ನಾದ್ಯಂತ 3,000 ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ.
ಕಾರ್ತಿಕೇಯ 2 ರ ಯಶಸ್ಸಿನ ನಂತರ, ನಾಯಕ ನಟ ನಿಖಿಲ್ ಹೆಚ್ಚಿನ ಭಾಗಗಳು ಬರಲಿವೆ ಮತ್ತು ಭವಿಷ್ಯದಲ್ಲಿ ಫ್ರಾಂಚೈಸ್ ವಿಸ್ತರಿಸಲಾಗುವುದು ಎಂದು ಸಿನಿಮಾ ತಂಡ ಖಚಿತಪಡಿಸಿದ್ದಾರೆ.
ಇದೀಗ ಟಾಲಿವುಡ್ , ಹಿಂದಿಯಲ್ಲಿ ಅಬ್ಬರಿಸಿದ ನಂತರ ಸಿನಿಮಾ ಮಲಯಾಳಂಗೆ ಡಬ್ ಆಗಿ ರಿಲೀಸ್ ಆಗುತ್ತಿದೆ..
ಆಗಸ್ಟ್ 13ರಂದು ಬಿಡುಗಡೆಯಾಗಿತ್ತು. ಕಾರ್ತಿಕೇಯ ಕೇವಲ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಿತ್ತು, ಆದರೆ ಕಾರ್ತಿಕೇಯ 2 ತೆಲುಗು ಮತ್ತು ಹಿಂದಿ ಎರಡೂ ಭಾಷೆಯಲ್ಲಿಯೂ ಸಹ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ತೆಲುಗು ಮತ್ತು ಹಿಂದಿಯಲ್ಲಿ ಬ್ಲಾಕ್ ಬಸ್ಟರ್ ಎನಿಸಿಕೊಂಡಿರುವ ಕಾರ್ತಿಕೇಯ 2 ಮಲೆಯಾಳಂಗೂ ಡಬ್ ಆಗಿದ್ದು, ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡಿದೆ.
ಇದೇ ತಿಂಗಳ 23ರಂದು ಕಾರ್ತಿಕೇಯ 2 ಮಲಯಾಳಂ ವರ್ಷನ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರದ ನಟ ನಿಖಿಲ್ ಸಿದ್ಧಾರ್ಥ್, ನಟಿ ಅನುಪಮಾ ಪರಮೇಶ್ವರನ್ ಸೇರಿದಂತೆ ಚಿತ್ರದ ಇತರರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಚಿತ್ರದ ಪೋಸ್ಟರ್ ಪೋಸ್ಟ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.