Yash – ಶಂಕರ್ 1000 ಕೋಟಿ ಬಜೆಟ್ ಸಿನಿಮಾ..!!! ಬಾಲಿವುಡ್ ನ ಸ್ಟಾರ್ ನಿರ್ಮಾಪಕ..!!!
ರಾಕಿಂಗ್ ಸ್ಟಾರ್ ಯಶ್ ಅವರ ಮೇನಿಯಾ ಆಲ್ ಓವರ್ ಇಂಡಿಯಾ ಇದೆ.. KGF ನಂತರ ಯಶ್ ನ್ಯಾಷನ್ಲ್ ಸ್ಟಾರ್ ಆಗಿದ್ದು , ದೇಶದ ಮೂಲೆಮೂಲೆಗಳಲ್ಲೂ ರಾಕಿ ಅಭಿಮಾನಿಗಳಿದ್ದಾರೆ..
ಯಶ್ ಮುಂದಿನ ಸಿನಿಮಾದ ( Yash19) ಅಪ್ಡೇಟ್ ಗಳಿಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.. KGF3ಬರುತ್ತೆ ಚರ್ಚೆಗಳು ಒಂದೆಡೆಯಾದ್ರೆ ಮಫ್ತಿ ನಿರ್ದೇಶಕ ನರ್ತನ್ ಜೊತೆಗೆ ಯಶ್ ಸಿನಿಮಾ ಮಾಡಲಿದ್ದಾರೆ ಅನ್ನೋ ಗಾಸಿಪ್ ಗಳಿದೆ.. ಈ ಸಿನಿಮಾಗೆ ಪೂಜಾ ಹೆಗ್ಡೆ ನಾಯಕಿ ಅನ್ನೋ ಮಾತುಗಳೂ ಇದೆ..
ಅಷ್ಟೇ ಅಲ್ದೇ ಮುಂದೆ ಯಶ್ ಹಾಗೂ ಟಾಲಿವುಡ್ ನ ಸ್ಟಾರ್ ನಟ ರಾಮ್ ಚರಣ್ ಇಬ್ಬರೂ ನರ್ತನ್ ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಾರೆ ಎಂದೂ ಹೇಳಲಾಗಿತ್ತು.. ಇದೀಗ ಹೊಸದಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ಸುದ್ದಿ ಅಂದ್ರೆ ಯಶ್ ಇಂಡಿಯನ್ , ರೋಬೋ , ಅನಿಯನ್ ಖ್ಯಾತಿಯ ಶಂಕರ್ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋದು,..
ಹೌದು ಸದ್ಯ ರಾಮ್ ಚರಣ್ ಸಿನಿಮಾ ಹಾಗೂ ಇಂಡಿಯನ್ 2 ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಶಂಕರ್ ಮುಂದೆ ಬಾಲಿವುಡ್ ನಲ್ಲಿ ಅನಿಯನ್ ರೀಮೇಕ್ ಸಿನಿಮಾಗೆ ರಣವೀರ್ ಸಿಂಗ್ ಗೆ ಆಕ್ಷನ್ ಕಟ್ ಹೇಳಲಿದ್ದಾರೆ.. ಇದೆಲ್ಲದರ ನಡುವೆ ಇಂತಹದೊಂದು ಸುದ್ದಿ ಹರಿದಾಡ್ತಿದೆ..
ಶಂಕರ್ ರಾಕಿ ಭಾಯ್ ಗೆ ಆಕ್ಷನ್ ಕಟ್ ಹೇಳಲಿದ್ದು ಈ ಸಿನಿಮಾಗೆ ಬಾಲಿವುಡ್ ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಬಂಡವಾಳ ಹೂಡಲಿದ್ದಾರೆ ಎನ್ನಲಾಗ್ತಿದೆ..
ಅಲ್ಲದೇ ಈ ಸಿನಿಮಾದ ಬಜೆಟ್ 1000 ಕೋಟಿಯಂದೇ ವದಂತಿಗಳು ಹರಿದಾಡುತ್ತಿವೆ.. ಈ ಸುದ್ದಿ ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರಿಗಳಲ್ಲಿ ಸಂಚಲವನ್ನೇ ಸೃಷ್ಟಿ ಮಾಡಿದೆ..
ಮೂಲಗಳ ಪ್ರಕಾರ ಮೂವರ ಕಾಂಬಿನೇಷನ್ ನ ಸಿನಿಮಾಗೆ ಎಸ್. ವೆಂಕಟೇಶನ್ ಅವರು ಚಿತ್ರಕಥೆ ಬರೆಯಲಿದ್ದಾರೆ ಎನ್ನಲಾಗ್ತಿದೆ..
ಅಲ್ಲದೇ ಕರಣ್ ಜೋಹರ್ ಜೊತೆಗೆ ಈ ಸಿನಿಮಾಗಾಗಿ ನೆಟ್ ಫ್ಲಿಕ್ಸ್ ಜಂಟಿಯಾಗಿ ಬಂಡವಾಳ ಹೂಡಲಿದ್ಯಂತೆ.. ಆದ್ರೆ ಗಾಸಿಪ್ ಗಳೇನೇ ಇರಲಿ ,, ಸುದ್ದಿ ನಿಜವಾಗ್ಲಿ ಅಂತ ಅಭಿಮಾನಿಗಳು ಬೇಡಿಕೊಳ್ತಿರೋದಂತೂ ಸತ್ಯ…