ಗಂಗೂಭಾಯಿ ಕಾಥೇಯವಾಡಿಯಂತಹ ಸೂಪರ್ ಹಿಟ್ ಸಿನಿಮಾಗಲಲ್ಲಿ ನಟಿಸಿರುವ ಲಿಯಾ ಭಟ್ ಗೆ ಸಾಕಷ್ಟು ಅಭಿಮಾನಿಗಳಿದ್ದಾರೆ…
ಅಂದ್ಹಾಗೆ ಆಲಿಯಾ ಭಟ್ ಬ್ರಹ್ಮಾಸ್ತ್ರ ಸಕ್ಸಸ್ ನ ಖುಷಿಯಲ್ಲಿದ್ದಾರೆ.. ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಪ್ರದರ್ಶನ ಕಾಣ್ತಿದೆ.. ಇದರ ಬೆನ್ನಲ್ಲೇ ಆಲಿಯಾ ಭಟ್ ಗೆ ಮತ್ತೊಂದು ಖುಷಿ ಸಿಕ್ಕಿದೆ..
ಬಾಲಿವುಡ್ ನಲ್ಲಿ ಮೋಸ್ಟ್ ಸಕ್ಸಸ್ ಫುಲ್ ನಟಿಯರ ಸಾಲಿನಲ್ಲಿ ಆಲಿಯಾ ಎರಡನೇ ಸ್ಥಾನಕ್ಕೆ ಏರಿದ್ದಾರೆ.. ಇದೀಗ ಜನಪ್ರಿಯ ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿಗೆ ಬಾಲಿವುಡ್ ಬೆಡಗಿ ಆಲಿಯಾ ಭಟ್ ಭಾಜನರಾಗಿದ್ದಾರೆ.
ಪ್ರಿಯದರ್ಶಿನಿ ಅಕಾಡೆಮಿ ಪ್ರಶಸ್ತಿ ಪ್ರದಾನಿಸಿದೆ.. ಇದು ನಟಿಯರಿಗೆ ನೀಡುವ ಅತ್ಯುತ್ತಮ ಪ್ರಶಸ್ತಿಯಾಗಿದೆ.. ಚಿತ್ರರಂಗದಲ್ಲಿ ಅಪ್ರತಿಮ ಖ್ಯಾತಿ ಹಾಗೂ ಅಪಾರ ಕೊಡುಗೆಗಳನ್ನು ನೀಡಿದವರಿಗೆ ಸ್ಮಿತಾ ಪಾಟೀಲ್ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಈ ಹಿಂದೆ ಬಾಲಿವುಡ್ ನ ಸ್ಟಾರ್ ನಟಿಯರಾದ ಟಬು, ಐಶ್ವರ್ಯ ರೈ ಬಚ್ಚನ್, ವಿದ್ಯಾ ಬಾಲನ್ ಮತ್ತು ಪ್ರಿಯಾಂಕಾ ಚೋಪ್ರಾ ಈ ಅತ್ಯುನ್ನತ ಗೌರವವನ್ನು ಪಡೆದುಕೊಂಡಿದ್ದು, ಇದೀಗ ಆಲಿಯಾ ಭಟ್ ಈ ಪಟ್ಟಿಗೆ ಸೇರಿಕೊಂಡಿದ್ದಾರೆ…