ಬಿಗ್ ಬಾಸ್ ಒಟಿಟಿಯಿಂದ ನೇರವಾಗಿ ಟಿವಿ ಬಿಗ್ ಬಾಸ್ ಗೆ ನಾಲ್ವರು ಸೆಲೆಕ್ಟ್ ಆಗಿದ್ದಾರೆ… ಸಾನ್ಯಾ , ರೂಪೇಶ್ , ರಾಕೇಶ್ , ಆರ್ವರ್ಧನ್ ಗುರೂಜಿ ನೇರ ಟಿವಿ ಬಿಗ್ ಬಾಸ್ ಗೆ ಪ್ರವೇಶ ಪಡೆದಿದ್ದಾರೆ.. ಆದ್ರೆ ಒಟಿಟಿ ಫಿನಾಲೆ ಮುಗಿದ ಮೇಲೆ ಇವರೆಲ್ಲಾ ಎಲ್ಲಿದ್ದಾರೆ ನ್ ಮಾಡ್ತಿದ್ದಾರೆ ಎನ್ನುವ ಪ್ರಶ್ನೆಗಳು ಎಲ್ರಿಗೂ ಇದ್ದು , ಇದೀಗ ನಾಲ್ವರೂ ಇರುವ ಅಜ್ಞಾತ ಸ್ಥಳದ ಸುಳಿವು ಸಿಕ್ಕಿದೆ..
ಈ ನಾಲ್ವರನ್ನೂ ನಿಗೂಢ ಜಾಗಕ್ಕೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿಯೇ ಅವರು ಉಳಿದುಕೊಂಡಿದ್ದಾರೆ.. ಸೆಪ್ಟೆಂಬರ್ 24ರವರೆಗೂ ಅವರು ಈಗಿರುವ ಸ್ಥಳದಲ್ಲೇ ಇರಲಿದ್ದಾರೆ ಎನ್ನಲಾಗಿದೆ..
ಮೂಲಗಳ ಪ್ರಕಾರ ನಾಲ್ವರೂ ಕೂಡ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗ್ತಿದೆ.. ಅಂದ್ಹಾಗೆ ಮೂಲಗಳ ಪ್ರಕಾರ ನಾಲ್ವರನ್ನೂ ಬೆಂಗಳೂರು ಕನಕಪುರ ರಸ್ತೆಯಲ್ಲಿನ ದು ಐಶಾರಾಮಿ ರೆಸಾರ್ಟ್ ನಲ್ಲಿ ಇರಿಸಲಾಗಿದ್ಯಂತೆ.. ಇವರೆಲ್ಲರೂ ಟಿವಿ ಬಿಗ್ ಬಾಸ್ ಓಪನಿಂಗ್ ದಿನ ವೇದಿಕೆಗೆ ಎಂಟ್ರಿಕೊಡಲಿದ್ದಾರೆ…