Kantara : ಕಾಂತಾರಾದಲ್ಲಿ ನಟಿಸಲು ಕಿಶೋರ್ ರಾವ್ ಒಪ್ಪಿದ್ದು ಈ ಕಾರಣಕ್ಕಂತೆ..!!
ಹೊಂಬಾಳೆ ಫಿಲಮ್ಸ್ ಬ್ಯಾನರ್ ನ ಅಡಿ ನಿರ್ಮಾಣವಾಗಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ಕನ್ನಡದ ಬಹುನಿರೀಕ್ಷೆಯ ಸಿನಿಮಾಗಳ ಪೈಕಿ ಒಂದಾದ ‘ಕಾಂತಾರ’ ಸಿನಿಮಾ ಸೆಪ್ಟೆಂಬರ್ 9 ಕ್ಕೆ ಅದ್ಧೂರಿಯಾಗಿ ರಿಲೀಸ್ ಆಗಲಿದೆ.. ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇದೆ..
ಈಗಾಗಲೇ ಸಿನಿಮಾದ ಟೀಸರ್ , ಟ್ರೇಲರ್ ಗಳು ಸಖತ್ ಸೌಂಡ್ ಮಾಡ್ತಿವೆ.. ಅಂದ್ಹಾಗೆ ರಿಷಬ್ ಶೆಟ್ಟಿ ಜೊತೆಗೆ ಕಿಶೋರ್ ರಾವ್ ರ ಫೈಟ್ ಸಿನಿಮಾದಲ್ಲಿರಲಿದೆ ಅನ್ನೋದನ್ನ ಟ್ರೇಲರ್ ನೋಡಿಯೇ ಹೇಳಬಹುದು,.. ಅಂದ್ಹಾಗೆ ಸಿನಿಮಾದ ಬಗ್ಗೆ ವರ್ಸಟೈಲ್ ನಟ ಕಿಶೋರ್ ರಾವ್ ಮಾತನಾಡಿದ್ದು , ಪಾತ್ರಕ್ಕಾಗಿ ಅಲ್ಲ ಸಿನಿಮಾದ ಕಥೆಗಾಗಿ ಕಾಂತಾರಾದ ಭಾಗವಾಗಲು ಬಯಸಿದ್ದಾಗಿ ಹೇಳಿಕೊಂಡಿದ್ದಾರೆ..