ಇಂದು ಬಾಲಿವುಡ್ ನ ಸ್ಟಾರ್ ನಟಿ , ಬಾಲಿವುಡ್ ನ ಬೇಬೋಗೆ ಹುಟ್ಟುಹಬ್ಬದ ಸಂಭ್ರಮ.. ತಾರೆಯರು , ಅಭಿಮಾನಿಗಳು ಕರೀನಾಗೆ ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.. ಸದ್ಯ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ ನಂತರ ಕರೀನಾ ಸಿನಿಮಾರಂಗದಿಂದ ಕೊಂಚ ಅಂತರ ಕಾಯ್ದುಕೊಂಡಿದ್ಧಾರೆ.. ನಟನೆ ಕಡಿಮೆ ಮಾಡಿದ್ದಾರೆ.. ಆದ್ರೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ಥಾರೆ.. ಇಂದು ಕರೀನಾ 42 ನೇ ವಸಂತಕ್ಕೆ ಕಾಲಿಟ್ಟಿದ್ಧಾರೆ.. ಅಂದ್ಹಾಗೆ ಇತ್ತೀಚೆಗೆ ಅವರ ಅಭಿನಯದ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗಿ ಹೀನಾಯವಾಗಿ ಸೋತು ಹೋಯ್ತು..
ಅವರ ನಟನೆಯ ಕೆಲ ಸಿನಿಮಾಗಳನ್ನ ಮಿಸ್ ಮಾಡುಕೊಳ್ಳುವಂತಿಲ್ಲ.. ಸ್ಟಾರ್ ನಟರ ಜೊತೆಗೆ ಬಣ್ಣ ಹಚ್ಚಿರುವ ಬೇಬೋ ಅನೇಕ ಹಿಟ್ ಸಿನಿಮಾಗಳ ಭಾಗವಾಗಿದ್ದಾರೆ..
ಜಬ್ ವಿ ಮೆಟ್, ಭಜರಂಗಿ ಭಾಯಿಜಾನ್ ಮತ್ತು 3 ಈಡಿಯಟ್ಸ್‌ನಂತಹ ದೊಡ್ಡ ಹಿಟ್ ಗಳನ್ನು ನೀಡಿದ್ದಾರೆ. ಕರೀನಾ ಕಪೂರ್ JP ದತ್ತಾ ಅವರ 2000 ರ ರೆಫ್ಯೂಜಿ ಚಲನಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಮುಜೆ ಕುಚ್ ಕೆಹನಾ ಹೈ, ಯಾದೀನ್…, ಅಜ್ಞಾಬೀ, ಕಭಿ ಖುಷಿ ಕಭಿ ಘಮ್… ಮತ್ತು ಮೇನ್ ಪ್ರೇಮ್ ಕಿ ದಿವಾನಿ ಹೂನ್‌ನಂತಹ ಕೌಟುಂಬಿಕ ಮನರಂಜನಾ ಚಿತ್ರಗಳಲ್ಲಿ ನಟಿಸಿದರು.
1- ಜಬ್ ವಿ ಮೆಟ್
ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಅವರ 2007 ರ ಚಲನಚಿತ್ರವು ಸಿನಿಪ್ರಿಯರ ಸಾರ್ವಕಾಲಿಕ ಮೆಚ್ಚಿನ ಚಿತ್ರವಾಗಿದೆ. ಇದು ಪಂಜಾಬ್ ನ ಗೀತ್ ಕೌರ್ ಧಿಲ್ಲೋನ್ ಎಂಬ ಸದಾ ಹಸನ್ಮುಖಿ ಅದೃಷ್ಟವಂತ ಹುಡುಗಿಯ ಕಥೆಯಾಗಿತ್ತು.. ಪ್ರಿಯತಮನಿಗಾಗಿ ಮನೆ ಬಿಟ್ಟು ಓಡಿ ಹೋಗುವಾಗ ರೈಲಿನಲ್ಲಿ ನಾಯಕನ ಪರಿಚಯವಾಗುತ್ತದೆ.. ಶ್ರೀಮಂತ ಉದ್ಯಮಿ (ಶಾಹಿದ್ ನಿರ್ವಹಿಸಿದ ಪಾತ್ರ) ಯ ಪರಿಚಯದಿಂದ ನಾಯಕಿಯ ಜೀವನಕ್ಕೆ ಟ್ವಿಸ್ಟ್ ಸಿಗುತ್ತದೆ..
2- ಚಮೇಲಿ:
ಸುಧೀರ್ ಮಿಶ್ರಾ ನಿರ್ದೇಶನದ ಕರೀನಾ ಕಪೂರ್ ಅವರ ಅದ್ಭುತ ಚಿತ್ರವಾಗಿದ್ದು, ಇದರಲ್ಲಿ ಅವರು ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಮೂರು ವರ್ಷಗಳ ನಂತರ, ಕರೀನಾ ಅನಂತ್ ಬಲಾನಿಯವರ ಸಿನಿಮಾದಲ್ಲಿ ಚಮೇಲಿ ಎಂಬ ಲೈಂಗಿಕ ಕಾರ್ಯಕರ್ತೆಯ ಪಾತ್ರವನ್ನ ನಿಭಾಯಿಸಿದರು..
3- 3 ಈಡಿಯಟ್ಸ್
ಡಿಸೆಂಬರ್ 2009 ರಲ್ಲಿ ಥಿಯೇಟರ್‌ಗಳಲ್ಲಿ ತೆರೆಕಂಡ ನಂತರ 3 ಈಡಿಯಟ್ಸ್ ಭಾರಿ ಯಶಸ್ಸನ್ನು ಕಂಡಿತು. ಕರೀನಾ ಕಪೂರ್ ಮತ್ತು ಬೋಮನ್ ಇರಾನಿ ಜೊತೆಗೆ ಅಮೀರ್ ಖಾನ್, ಆರ್ ಮಾಧವನ್ ಮತ್ತು ಶರ್ಮಾನ್ ಜೋಷಿ ನಟಿಸಿದ್ದಾರೆ, ಈ ಚಲನಚಿತ್ರವು ಚೇತನ್ ಭಗತ್ ಅವರ ಕಾದಂಬರಿ ಫೈವ್ ಪಾಯಿಂಟ್ ಸಮ್ ವನ್ ಅನ್ನು ಆಧರಿಸಿದೆ. ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಹಾಸ್ಟೆಲ್ ದಿನಗಳನ್ನು ನೆನಪಿಸಿಕೊಳ್ಳುತ್ತಾ ತಮ್ಮ ಪದವಿ ಮುಗಿದ ಹಲವು ವರ್ಷಗಳ ನಂತರ ತಮ್ಮ ಬ್ಯಾಚ್‌ಮೇಟ್ ಮತ್ತು ಆತ್ಮೀಯ ಸ್ನೇಹಿತನೊಂದಿಗೆ ಮರುಸಂಪರ್ಕಿಸಲು ಪ್ರಯತ್ನಿಸುತ್ತಿರುವುದನ್ನು ಇದು ತೋರಿಸುತ್ತದೆ. ಈ ರಾಜ್‌ಕುಮಾರ್ ಹಿರಾನಿ ಚಿತ್ರದಲ್ಲಿ ಕರೀನಾ ವೈದ್ಯರ ಪಾತ್ರವನ್ನು ನಿರ್ವಹಿಸಿದ್ದಾರೆ..
4- ಕಭಿ ಖುಷಿ ಕಭಿ ಗಮ್…
ಇನ್ನೂ ಕಭಿ ಖುಷಿ ಕಭಿ ಘಮ್ ಸಿನಿಮಾದಲ್ಲಂತೂ ಕರೀನಾ ಆಕ್ಟಿಂಗ್ ಸದಾ ಕಾಲ ನೆನಪಲ್ಲಿ ಉಳಿಯುವಂತಹದ್ದು.. ಪೂ ಪಾತ್ರದಲ್ಲಿಸಖತ್ ಗಾರ್ಜಿಯಸ್ ಆಗಿ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದರು… ತಮ್ಮ ಆಟಿಟ್ಯೂಡ್ ಮೂಲಕವೇ ಆಗ ಬೇಬೋ ಸಿನಿಪ್ರಿಯರ ಕ್ರಶ್ ಆಗಿಬಿಟ್ಟಿದ್ದರು.. ಈ ಸಿನಿಮಾ ಸೂಪರ್ ಬ್ಲಾಕ್ ಬಾಸ್ಟರ್ ಹಿಟ್ ಆಗಿತ್ತು.. ಅಮಿತಾಭ್ ಬಚ್ಚನ್, ಜಯಾ ಬಚ್ಚನ್, ಶಾರುಖ್ ಖಾನ್, ಕಾಜೋಲ್ ಮತ್ತು ಹೃತಿಕ್ ರೋಷನ್ ಜೊತೆಗೆ ಕರೀನಾ ಬಣ್ಣ ಹಚ್ಚಿದ್ದರು..