ಉಪ್ಪೇನಾ ಬ್ಯೂಟಿ ಟಾಲಿವುಡ್ ನ ಯುವ ಪ್ರತಿಭೆ ಕೃತಿ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ.. ಉಪ್ಪೇನಾ ನಂತರ ಕೃತಿ ಸಕ್ಸಸ್ ಕಂಡರೂ ಇದೀಗ ಬ್ಯಾಕ್ ಟು ಬ್ಯಾಕ್ ಅವರ ಮೂರು ಸಿನಿಮಾಗಳು ಸೋತು ಹೋಗಿವೆ..
ಸದ್ಯ ಕೃತಿ ಶೆಟ್ಟಿಗೆ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.. ಪ್ಪೇನಾ ಸಿನಿಮಾದಲ್ಲಿ ನಟಿಸಿದ್ದಾಗ ಕೃತಿ ಶೆಟ್ಟಿಗೆ 17 ವರ್ಷ.. ಆದ್ರೆ ತಮ್ಮ ಮನೋಜ್ಞ ನಟನೆಯ ಮೂಲಕ ಗಮನ ಸೆಳೆದಿದ್ದ ನಟಿಯನ್ನ ಗೋಲ್ಡನ್ ಲೆಗ್ , ಲಕ್ಕಿ ಗರ್ಲ್ ಅಂತಲೇಢ ಕರೆಯಲಾಗ್ತಿತ್ತು.. ಆದ್ರೆ ಸಾಲು ಸಾಲು ಸಿನಿಮಾಗಳು ಸೋತಿದೆ..
ಆದ್ರೂ ಕೃತಿಗೆ ಆಫರ್ ಗಳು ಕಡಿಮೆಯಾಗಿಲ್ಲ.. ಇತ್ತೀಚೆಗೆ ಕೃತಿ ನಟನೆಯ ಅಮ್ಮಾಯಿ ಗುರಿಂಚಿ ಮೀಕು ಚೆಪ್ಪಾಲಿ ಸಿನಿಮಾವೂ ಕೂಡ ಫ್ಲಾಪ್ ಲಿಸ್ಟ್ ಸೇರಾಗಿದೆ.. ಒಟ್ನಲ್ಲಿ ಕೃತಿ ಶೆಟ್ಟಿಗೆ ಹ್ಯಾಟ್ರಿಲ್ ಸೋಲಾಗಿದೆ..