Niranjan Sudhindra : ಸೂಪರ್ ಸ್ಟಾರ್ ಟೀಸರ್ Review : ‘ಯಂಗ್ ರಿಯಲ್ ಸ್ಟಾರ್’ ಬೆಂಕಿ ಎಂಟ್ರಿ..!!!
‘ಸೂಪರ್ ಸ್ಟಾರ್’ : ಕನ್ನಡ ಸಿನಿಮಾ ರಿವ್ಯೂವ್
ನಿರ್ದೇಶಕರು : ರಮೇಶ್ ವೆಂಕಟೇಶ್ ಬಾಬು
ನಿರ್ಮಾಕರು : ರಮಾ ದೇವಿ ನಾರಗಣಿ
ನಟ : ನಿರಂಜನ್ ಸುಧೀಂದ್ರ
ಸಂಗೀತ ಸಂಯೋಜಕರು : ರಾಘವೇಂದ್ರ ವಿ
ಛಾಯಾಗ್ರಾಹಕರು : ಯೋಗಿ
ಈ ಪ್ರಪಂಚದಲ್ಲಿ ನಿನಗೆ ಇರೋದು ಒಂದೇ ಜೀವನ…
ರೆಕ್ಕೆ ಬಿಚ್ಚಿ ಹಾರಾಡೋ ಹದ್ದಾಗು..
ಹೀಗೆ ಪವರ್ ಡೈಲಾಗ್ ಮೂಲಕ ಆರಂಭವಾಗುವ ‘ ಸೂಪರ್ ಸ್ಟಾರ್’ ಕನ್ನಡ ಸಿನಿಮಾದ ಟೀಸರ್ ಬೆಂಕಿಯಾಗಿದೆ… ಬಿಜಿಎಮ್ ಸಖತ್ ಪವರ್ ಫುಲ್ ಆಗಿದ್ದು ಟೀಸರ್ ಮುಗಿಯೋವರೆಗೂ ರೋಮಾಂಚನಕಾರಿ ಫೀಲ್ ನೀಡುತ್ತೆ..
ಅದ್ರಲ್ಲೂ ಒಂದೊಂದು ಡೈಲಾಗ್ಸ್ ಗಳು ಖಡಕ್…
ಸೋಲನ್ನೇ ಗೆಲ್ಲೋ ಛಲ ರೋನಿಗೆ ಜಗತ್ತನ್ನೇ ಗೆಲ್ಲೋ ಬಲ ಇರುತ್ತೆ..
ಕಾಮನ್ ಆಗಿ ಬದುಕಿದ್ರೆ ಇಲ್ಲಿ ವಾಲ್ಯೂ ಇಲ್ಲ..
ಹೀಗೆ ಮನಸ್ಸಿಗೆ ಹಿತ ನೀಡಿ , ಎದೆ ಬಡಿತ ಹೆಚ್ಚಿಸುವ ಭರ್ಜರಿ ಬಿಜಿಎಮ್ ಜೊತೆಗೆ ಮಸ್ತ್ ಡೈಲಾಗ್ ಗೆ ಫ್ಯಾನ್ಸ್ ಅಂತೂ ಫಿದಾ ಆಗಿದ್ದಾರೆ..
ಅದ್ರಲ್ಲೂ ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣನ ಮಗನಾದ ನಿರಂಜನ್ ಸುಧೀಂದ್ರ ಅವರ ಲುಕ್ಸ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ..
ಹಾಗೆ ನೋಡಿದ್ರೆ ತಮ್ಮ ಪವರ್ ಫುಲ್ ಲುಕ್ಸ್ ನಿಂದಲೇ ಸಿನಿಮಾ ರಿಲೀಸ್ ಗೂ ಮುನ್ನವೇ ಜನರನ್ನ ತಮ್ಮತ್ತ ಸೆಳೆಯುವಲ್ಲಿ ನಿರಂಜನ್ ಯಶಸ್ವಿಯಾಗಿದ್ದಾರೆ.. ಉಪೇಂದ್ರ , ಅಪ್ಪು ಸೇರಿದಂತೆ ಇನ್ನೂ ಅನೇಕರ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಈ ಸಿನಿಮಾಗೆ ಹಾಗೂ ನಿರಂಜನ್ ಗೆ ಸಪೋರ್ಟ್ ಮಾಡ್ತಿದ್ದಾರೆ..
ಯಂಗ್ ರಿಯಲ್ ಸ್ಟಾರ್ ನಿರಂಜನ್ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ರಿಲೀಸ್ ಆಗಿದ್ದು , ಯೂಟ್ಯೂಬ್ ನಲ್ಲಿ ಭರ್ಜರಿ ಸೌಂಡ್ ಮಾಡ್ತಿದೆ… ನಿರಂಜನ್ ಅವರ ಲುಕ್ಸ್ , ಆಟಿಟ್ಯೂಡ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.. 1.44 ಸೆಕೆಂಡ್ ಟೀಸರ್ ಅದ್ಭುತವಾಗಿ ಮೂಡಿಬಂದಿದೆ..
RVB ಬ್ಯಾನರ್ ನ ಅಡಿ ಅದ್ಧೂರಿಯಾಗಿ ನಿರ್ಮಾಣವಾಗಿರೋ ಸಿನಿಮಾಗೆ ರಮಾ ದೇವಿ ನಾರಗಣಿ ಬಂಡವಾಳ ಹೂಡಿದ್ದಾರೆ.. ರಮೇಶ್ ವೆಂಕಟೇಶ್ ಬಾಬು ಅವರು ಆಕ್ಷನ್ ಕಟ್ ಹೇಳಿದ್ದು , ಯೋಗಿ ಕ್ಯಾಮೆರಾ ಕೈಚಳಕ , ರಾಘವೇಂದ್ರ ವಿ ಮ್ಯೂಸಿಕ್ ಮೋಡಿ ಮಾಡಿದೆ..
ಅಂದ್ಹಾಗೆ ಸಿನಿಮಾದ ಟೀಸರ್ ನಿರೀಕ್ಷೆ ಹೆಚ್ಚಿಸಿದ್ದು , ಚಿತ್ರತಂಡಕ್ಕೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.. ಅಂದ್ಹಾಗೆ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್ ಹಾಗೂ ಸಾವಿರಾರು ಲೈಕ್ಸ್ ಪಡೆದುಕೊಂಡಿದೆ..