Raju Shrivastav – ಬಾಲಿವುಡ್ ನ ಖ್ಯಾತ ಹಾಸ್ಯನಟ ರಾಜು ಶ್ರೀವಾಸ್ತವ್ ನಿಧನ..
ಕೆಲ ದಿನಗಳಿಂದ ಅನಾರೋಗ್ಯದಿಂದ ಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಿವುಡ್ ನ ಖ್ಯಾತ ಹಾಸ್ಯ ನಟ ರಾಜು ಶ್ರೀವಾಸ್ತವ್ ( Raju Shrivastav) ಅವರು ಇದೀಗ ನಿಧನರಾಗಿದ್ದಾರೆ..
ದೆಹಲಿಯ ಏಮ್ಸ್ ( Dehli Aiims) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇವರು ಕಳೆದ ಒಂದು ತಿಂಗಳಿಂದ ಕೋಮಾದಲ್ಲಿದ್ದರು..
ಜಿಮ್ ( Gym) ನಲ್ಲಿ ವ್ಯಾಯಾಮ ( Excercise) ಮಾಡುತ್ತಿದ್ದಾಗ ರಾಜು ಅವರು ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದರು.. ಆಗ ರಾಜು ಅವರನ್ನ (ಆಗಸ್ಟ್ 10) ಅವರನ್ನು ದೆಹಲಿ ಆಸ್ಪತ್ರೆಗೆ ( Hospital) ದಾಖಲಿಸಲಾಗಿತ್ತು. ಆದ್ರೆ ಆಗ ಕೋಮಾ ತಲುಪಿದವರು ಇಂದಿನವರೆಗೂ ಪ್ರಜ್ಞೆಗೆ ಮರಳಿರಲಿಲ್ಲ…
ಅಭಿಮಾನಿಗಳು ಶ್ರೀವಾಸ್ತವ್ ಅವರ ಆರೋಗ್ಯಕ್ಕಾಗಿ ಎಷ್ಟೇ ಪ್ರಾರ್ಥನೆಗಳನ್ನ ಸಲ್ಲಿಸಿದ್ರೂ ಯಾವುದೂ ಫಲಿಸಿಲ್ಲ.. ರಾಜು ಅವರ ನಿಧನದ ಸುದ್ದಿ ಬಾಲಿವುಡ್ ಹಾಗೂ ಅಭಿಮಾನಿಗಳಿಗೆ ಆಘಾತ ತಂದಿದೆ..
ಸಿನಿಮಾ ಜಗತ್ತಿನವರು ಅಭಿಮಾನಿಗಳು ರಾಜು ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.. ರಾಜು ಅವರು ಓರ್ವ ಅದ್ಭುತ ಕಾಮಿಡಿಯನ್ ಆಗಿದ್ದರು.. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು ಖ್ಯಾತಿ ಗಳಿಸಿದ್ದಾರೆ,… ಜೊತೆಗೆ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ ಶೋ ಮೂಲಕವೂ ಗಮನ ಸೆಳೆದಿದ್ದರು.. ಇವರಿಗೆ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳಿದ್ದು ನಟನ ನಿಧನ ಸುದ್ದಿಯಿಂದ ಆಘಾತಗೊಂಡಿದ್ದಾರೆ..
ಶ್ರೀವಾಸ್ತವ್ ಅವರಿಗೆ 58 ವರ್ಷ ವಯಸ್ಸಾಗಿತ್ತು..
ಶ್ರೀವಾಸ್ತವ ಅವರು 1980 ರ ದಶಕದಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದರು.. ದಶಕಗಳ ಕಾಲ ಜನರನ್ನ ರಂಜಿಸಿದರು.. ಅದ್ರಲ್ಲೂ ಸ್ಟ್ಯಾಂಡ್-ಅಪ್ ಕಾಮಿಡಿ ಶೋ “ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್” ನ ಮೊದಲ ಸೀಸನ್ ನಲ್ಲಿ ಭಾಗವಹಿಸಿದ ನಂತರ ಇವರಿಗೆ ಸಾಕಷ್ಟು ಮನ್ನಣೆ ಸಿಕ್ಕಿತ್ತು.
ಮೈನೆ ಪ್ಯಾರ್ ಕಿಯಾ , ಆಮ್ದಾನಿ , ಅಟನ್ನಿ ಖರ್ಚಾ ರೂಪಯ್ಯ , ಮೈ ಪ್ರೇಮ್ ಕಿ ದೀವಾನಿ ಹೂ ,
ಮುಂತಾದ ಸೂಪರ್ ಹಿಟ್ ಸಿನಿಮಾಗಳಲ್ಲಿ ರಾಜು ನಟಿಸಿದ್ಧಾರೆ..