ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಸೈಮಾ ಪ್ರಶಸ್ತಿ ಸಮಾರಂಭ 2 ದಿನಗಳ ಕಾಲ ಬಹಳ ಅದ್ಧೂರಿಯಾಗಿ ಜರುಗಿತ್ತು..
ಅರಮನೆ ಮೈದಾನದಲ್ಲಿ ಬಹಳ ಅದ್ಧೂರಿಯಾಗಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ 2 ದಿನಗಳ ಕಾಲ ಕನ್ನಡ , ತಮಿಳು , ತೆಲುಗು , ಮಲಯಾಳಂ ಸಿನಿಮಾರಂಗದ ಸೆಲೆಬ್ರಿಟಿಗಳು ಭಾಗಿಯಾಗಿದ್ರು.. ಈ ಪೈಕಿ ರಾಕಿಂಗ್ ಸ್ಟಾರ್ ಯಶ್ , ಅಭಿಷೇಕ್ ಅಂಬಿರೀಷ್ , ಸಹ ಇದ್ದರು..
ಆದ್ರೆ ಇದೀಗ ಯಶ್ , ಅಭಿಷೇಕ್ ಜೊತೆಗೆ ಇನ್ನೊಂದಿಷ್ಟು ಜನರ ವಿರುದ್ಧ ಇದೇ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದ ದು ಘಟನೆ ವಿರುದ್ಧ FIR ದಾಖಲಾಗಿದೆ..
ಹೌದು..!
ಅವಾರ್ಡ್ ಕಾರ್ಯಕ್ರಮ ಮುಗಿದ ನಂತರ ದು ಐಶಾರಾಮಿ ಖಾಸಗಿ ಹೋಟೆಲ್ ನಲ್ಲಿ ಒಂದಷ್ಟು ಮಂದಿ ನಟ ನಟಿಯರು ಸೇರಿ ತಡರಾತ್ರಿ ಪಾರ್ಟಿ ಮಾಡಿದ್ದಾರೆ.. ಸುಮಾರು 3.30 ರ ಮಧ್ಯರಾತ್ರಿ ವರೆಗೂ ಪಾರ್ಟಿ ನಡೆದಿದೆ ಎನ್ನಲಾಗಿದೆ.. ಈ ಪಾರ್ಟಿಯಲ್ಲಿ ಯಶ್ , ಅಭಿಷೇಕ್ ಅಂಬರಿಷ್ ಸಹ ಭಾಗಿಯಾಗಿದ್ರಂತೆ.. ಇದೇ ಕಾರಣಕ್ಕೆ ಪ್ರಕರಣ ದಾಖಲಾಗಿದೆ ಎನ್ನಲಾಗ್ತಿದೆ..
ಅಂದ್ಹಾಗೆ ಈ ಪಾರ್ಟಿಯಲ್ಲಿ ಯಶ್ ಹಾಗೂ ಅಭಿಷೇಕ್ ಭಾಗಿಯಾಗಿದ್ದಕ್ಕೆ ಪುರಾವೆಯಾಗಿ ಒಂದಷ್ಟು ಫೋಟೋ , ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ,.. ನೆಟ್ಟಿಗರು ಈ ಸಂಬಂಧ ಕ್ರೋಶವನ್ನೂ ಹೊರಹಾಕುತ್ತಿದ್ದು , ಇದೀಗ ಸುದ್ದಿ ತೀವ್ರ ಚರ್ಚೆಗೆ ಗ್ರಾಸವಾಗಿದೆ..