Sonu Gowda : ಸೋನು ಗೌಡ ಏನ್ ಕೆಲಸ ಮಾಡ್ತಾರೆ..?? ತಿಂಗಳಿಗೆ ಸಂಪಾದನೆ ಎಷ್ಟು ಗೊತ್ತಾ..??
ಸೋನು ಗೌಡ… ಟ್ರೋಲಿಗರ ಫೇವರೇಟ್.. ಬಿಗ್ ಬಾಸ್ ಕನ್ನಡ ಒಟಿಟಿಯ ಹೈಲೇಟ್…
ಸೋನು ಗೌಡ… ಬ್ಯಾಡ್ ಲಕ್ಕೋ ಏನೋ ಟಿವಿ ಬೆಗ್ ಬಾಸ್ ಎಂಟ್ರಿ ಪಡೆಯದೇ ಬಿಗ್ ಬಾಸ್ ಒಟಿಟಿಯಲ್ಲೇ ಜರ್ನಿ ಮುಗಿಸಿ ಹೊರನಡೆದಿದ್ದಾರೆ..
Biggboss Kannada Ott ಮುಕ್ತಾಯವಾಗಿದ್ದು ನಾಲ್ವರು ನೇರವಾಗಿ ಟಿವಿ ಬಿಗ್ ಬಾಸ್ ಸೀಸನ್ 9 ಕ್ಕೆ ಆಯ್ಕೆಯಾಗಿದ್ದಾರೆ..
ಅಂದ್ಹಾಗೆ ಒಟಿಟಿ ಸೀಸನ್ ಹೀಗೆ ಬಂದು ಹಾಗೆ ಹೋಯ್ತು ಎನಿಸುವಂತಿದೆ… ಅಂದ್ಹಾಗೆ ಮನೆಯಲ್ಲಿ ಸಿಕ್ಕಾಪಟ್ಟೆ ಹೈಲೇಟ್ ಆದವರೆಂದ್ರೆ ಸೋನು ಗೌಡ ರಾಕೇಶ್ ಆಡಿಗ..
ಸೋನು ಗೌಡ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ತಮ್ಮ ಖಾಸಗಿ ಜೀವನದ ಬಗ್ಗೆ ವೃತ್ತಿ ಜೀವನದ ಬಗ್ಗೆ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ..
ಸೋನು ಗೌಡ ಏನ್ ಕೆಲಸ ಮಾಡ್ತಾರೆ.. ಎಷ್ಟು ದುಡಿಯುತ್ತಾರೆ ಹೀಗೆಲ್ಲಾ ಸಾಕಷ್ಟು ಪ್ರಶ್ನೆಗಳು ಅವರ ಅಭಿಮಾನಿಗಳದ್ದು..
ಖಾಸಗಿ ವಾಹಿನಿಯ ಜೊತೆಗೆ ಸಂದರ್ಶನದ ವೇಳೆ ಕೆಲ ಮಾಹಿತಿಗಳನ್ನ ಸೋನು ಹಂಚಿಕೊಂಡಿದ್ದಾರೆ.
ಟ್ರೋಲ್ ಅವರಿಗೆ ನನ್ನ ಬ್ಯಾಗ್ರೌಂಡ್ ಬಗ್ಗೆ ಹೇಳೋಣ ಎಂದುಕೊಂಡಿದ್ದೆ.. ಆದ್ರೆ ನಮ್ಮ ಅಮ್ಮನ ಅಣ್ಣಂದಿರು ತಮ್ಮ ಹೆಸರುಗಳನ್ನ ಹೇಳಬೇಡ ಎಂದಿದ್ದರು.. ಹೀಗಾಗಿ ನಾನು ಬದುಕಿದ್ರೆ, ಹೆಸರು ಮಾಡಿದ್ರೆ ಒಂಟಿಯಾಗಿ ಮಾಡಬೇಕು. ನನಗೆ ಯಾರ ಬೆಂಬಲವೂ ಬೇಡ ಎಂದು ನಿರ್ಧರಿಸಿದೆ..
ನಾನು ಇರುವ ಮನೆಯನ್ನು ಎಲ್ಲರಿಗೂ ಬಾಡಿಗೆ ಮನೆ ಅಂತಾನೆ ಹೇಳಿದ್ದೀನಿ, ನನ್ನ ಆತ್ಮೀಯರಿಗೆ ಅಷ್ಟೇ ನಾನು ಸ್ವಂತ ಮನೆಯಲ್ಲಿರುವ ವಿಚಾರ ಗೊತ್ತು. ಗೊತ್ತಿಲ್ಲದೆ ಇರುವವರಿಗೆ ನಾನು ಯಾವತ್ತೂ ನಮ್ಮ ಹತ್ತಿರ ಅಷ್ಟು ಆಸ್ತಿ, ಅಂತಸ್ತಿದೆ ಅಂತ ಹೇಳಿಕೊಂಡಿಲ್ಲ.. ನನ್ನ ತರ ನೇರವಾಗಿ ಮಾತಾಡೋರು ಇರಲ್ಲ. ಬೆನ್ನಿಗೆ ಚೂರಿ ಹಾಕೋರೇ ಹೆಚ್ಚು.. ನಾನು ಮೂಲತಃ ಹಳ್ಳಿ ಹುಡುಗಿ.. ಮಂಡ್ಯ ಹುಡುಗಿ.. ಆದರೆ ರಾಯಲ್ ಆಗಿ ಬೆಳೆದೆ. ಕನಕಪುರದ ಸಿಟಿಯಲ್ಲೇ ಬೆಳೆದೆ. ಬೆಂಗಳೂರಲ್ಲೂ ಫ್ಯಾಮಿಲಿ ಜೊತೆ ಇದ್ದೇನೆ. ಹಳ್ಳಿ ಹುಡುಗಿ ಅಂತಾ ಹೇಳಿಕೊಳ್ಳಲು ನನಗೆ ನಾಚಿಕೆ ಇಲ್ಲ. ಮಂಡ್ಯ ಹುಡುಗಿ ಅಂದ್ರೆ, ಅದೊಂತರಾ ಹೆಮ್ಮೆ ಎಂದಿದ್ದಾರೆ…
ಅಲ್ಲದೇ ನಮ್ಮನೆಯಲ್ಲಿ ಎಲ್ಲರೂ ನನಗೆ ಓದುವಂತೆ ಒತ್ತಡ ಹೇರುತ್ತಿದ್ದಾರೆ,.. ನನ್ನದು ಡಿಪ್ಲೊಮಾ ಕಂಪ್ಲೀಟ್ ಆಗಿದ್ದು ಇಂಜಿನಿಯರಿಂಗ್ ಮಾಡುವಂತೆ ಹೇಳ್ತಿದ್ದಾರೆ.. ಆದ್ರೆ ನನಗೆ ಓದುವುದರ ಮೇಲೆ ಆಸಕ್ತಿ ಇಲ್ಲ.. ನಟನೆಯಲ್ಲಿ ಆಸಕ್ತಿಯಿದೆ.. ಹೀಗಾಗಿಯೇ ಈ ವೀಬಾಗದಲ್ಲಿದ್ದೇನೆ ಎಂದಿದ್ದಾರೆ..
ಅಂದ್ಹಾಗೆ ಸೋನು ಗೌಡಾ ತಿಂಗಳಿಗೆ ಮೂರು ಲಕ್ಷಕ್ಕೂ ಅಧಿಕ ಹಣ ಸಂಪಾದನೆ ಮಾಡ್ತಾರಂತೆ..
ಸೋಶಿಯಲ್ ಮೀಡಿಯಾದಲ್ಲಿ ಕೆಲಸ ಮಾಡುತ್ತಿದ್ದೇನೆ. ಕೆಲವೊಂದು ಆ್ಯಪ್ ಗಳ ಜೊತೆ ಟೈಯಪ್ ಆಗಿದ್ದೀನಿ. ನಾನು ಬ್ರಾಂಡ್ ಪ್ರಮೋಟರ್ ಆಗಿ ಕೆಲ ಮಾಡ್ತಿದ್ದು ತಿಂಗಳಿಗೆ 3 ಲಕ್ಷಕ್ಕೂ ಅಧಿಕ ದಾಯ ಬರುತ್ತೆ ಎಂದಿದ್ದಾರೆ..
OTT ಯಿಂದ, ರಾಕೇಶ್ ಅಡಿಗ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್ ಮತ್ತು ಆರ್ಯವರ್ಧನ್ ಗುರೂಜಿ ಪ್ರವೇಶವನ್ನು ಪಡೆದಿದ್ದಾರೆ. ಅಂದ್ಹಾಗೆ ಎಲ್ಲರೂ ಸೋನು ಗೌಡ ಸಹ ಟಿವಿಗೆ ಬರಬಹುದು ಎಂದೇ ನಿರೀಕ್ಷೆ ಮಾಡಿದ್ದರಾದ್ರೆ ಆಕೆಯ ಬ್ಯಾಡ್ ಲಕ್ ಟಿವಿಗೆ ಆಯ್ಕೆಯಾಗುವಲ್ಲಿ ವಿಫಲವಾಗಿದ್ದಾರೆ.. ಆದ್ರೂ ಅದ್ಯಾಕೋ ನೆಟ್ಟಿಗರು ಮಾತ್ರವೇ ಈ ವಿಚಾರನ್ನ ಪ್ಪುವುದಕ್ಕೆ ರೆಡಿಯಿಲ್ಲ..
ಅನೇಕ ನೆಟ್ಟಿಗರ ಅಭಿಪ್ರಾಯದಂತೆ ಸೋನು ಗೌಡ ವೈಲ್ಡ್ ಕಾರ್ಡ್ ಮೂಲಕವಾದ್ರೂ ಟಿವಿ ಬಿಗ್ ಬಾಸ್ ಮನೆ ಪ್ರವೇಶ ಮಾಡ್ತಾರೆ ಎಂದೇ ಅಂದಾಜಿಸುತ್ತಿದ್ದಾರೆ.. ಆದ್ರೆ ಇದು ಬಿಗ್ ಬಾಸ್.. ಗೆಸ್ ಗಳು , ಊಹೆಗಳು ವದಂತಿಗಳು ಏನೇ ಇದ್ರೂ ಬಿಗ್ ಬಾಸ್ ಟ್ವಿಸ್ಟ್ ಗಳು ಎಲ್ಲಾ ಲೆಕ್ಕಾಚಾರಗಳನ್ನ ಉಲ್ಟಾ ಮಾಡುತ್ತದೆ..