ಕಬ್ಜ ಟೀಸರ್ KGF 2 ಕಾಪಿ ಎಂದವರಿಗೆ ಸಖತ್ ಉತ್ತರ ಕೊಟ್ಟ ಉಪ್ಪಿ..!!
ಉಪೇಂದ್ರ ಹಾಗೂ ಸುದೀಪ್ ನಟನೆಯ ಸಿನಿಮಾ ಕಬ್ಜ ಸಖತ್ ಕ್ರೇಜ್ ಹುಟ್ಟುಹಾಕಿದೆ.. ಸಿನಿಮಾ ಸುಮಾರು 8 -9 ಭಾಷೆಗಳಲ್ಲಿ ಬರುತ್ತಿದೆ.. ಅಂದ್ಹಾಗೆ ಸಿನಿಮಾ ಒನ್ ಆಫ್ ದ ಮೋಸ್ಟ್ ಆಂಟಿಸಿಪೇಟೆಡ್ ಇಂಇಡಯನ್ ಸಿನಿಮಾ..
ಕಿಚ್ಚ ಹಾಗೂ ಉಪ್ಪಿ ಫ್ಯಾನ್ಸ್ ಈ ಸಿನಿಮಾಗಾಗಿ ಕಾತರದಿಂದ ಕಾಯ್ತಿದ್ದು ಇವರ ಕಾತರತೆಯನ್ನ ಮತ್ತಷ್ಟು ಹೆಚ್ಚಿಸಿದ್ದೇ ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ಟೀಸರ್.. ಉಪೇಂದ್ರ ಅವರ ಹುಟ್ಟುಹಬ್ಬದ ಪ್ರಯುಕ್ತ ಟೀಸರ್ ಸೆಪ್ಟೆಂಬರ್ 17 ಕ್ಕೆ ರಿಲೀಸ್ ಆಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದೆ… ಸೋಷಿಯಲ್ ಮೀಡಿಯಾದಲ್ಲಿ ಕಬ್ಜ ಟೀಸರ್ ದೇ ಸೌಂಡ್ ಆಗಿದೆ..
ಸಿನಿಮಾದ ಟೀಸರ್ ಕ್ವಾಲಿಟಿ ಅದ್ಭುತವಾಗಿದೆ… ವಿಷ್ಯುವಾಲಿಟಿ ಹೈ ಕ್ಲಾಸ್ ಆಗಿದೆ.. ಸಿನಿಮಾದ ಟೀಸರ್ ನೆಕ್ಸ್ಟ್ ಲೆವೆಲ್ ಅನ್ನುತ್ತಿದ್ದಾರೆ ಫ್ಯಾನ್ಸ್… ಕನ್ನಡ ಸಿನಿಮಾ ಇಂಡಸ್ಟ್ರಿಯನ್ನ ಮತ್ತೊಂದು ಹಾದಿಯತ್ತ ಕರೆದೊಯ್ಯುತ್ತಿರುವ ಸಿನಿಮಾಗಳ ಪೈಕಿ ಒಂದು ಕಬ್ಜ ಅಂತೆಲ್ಲಾ ಹೇಳ್ತಿರುವಾಗ ಸಿನಿಮಾದ ಟೀಸರ್ ಜನರಿಗೆ ಆ ಒಂದು ಸಿನಿಮಾವನ್ನ ಪದೇ ಪದೇ ನೆನಪು ಮಾಡ್ತಿದೆ,..
ಬಿಜಿಎಮ್ ಅದ್ಭುತವಾಗಿದೆ.. ಆದ್ರೆ ಟೀಸರ್ ನೊಡಿದ ಅನೇಕರು ಇದು KGF 2 ರೀತಿಯಲ್ಲೇ ಇದೆ ಎಂದು ಹೇಳ್ತಿದ್ದಾರೆ.. KGF2 ಕಾಪಿ ಅಂತೆಲ್ಲಾ ಲೇವಡಿ ಮಾಡ್ತಿದ್ದಾರೆ.. ಆದ್ರೆ ಈ ರೀತಿಯಾದ ಮಾತುಗಳಿಗೆ ಇದೀಗ ರಿಯಲ್ ಸ್ಟಾರ್ ಉಪೇಂದ್ರ ಖಡಕ್ ಆಗಿಯೇ ಉತ್ತರ ನೀಡಿದ್ದಾರೆ..
ಹೌದು..! ಟೀಸರ್ ನೋಡಿದ್ರೆ KGF 2 ಫೀಲ್ ಬರುತ್ತಿದೆ ಅಂದೋರಿಗೆ ಪ್ರತಿಕ್ರಿಯೆ ನೀಡಿರುವ ಸ್ಯಾಂಡಲ್ ವುಡ್ ಸೂಪರ್ ಸ್ಟಾರ್ , “ GF ಬಂದಾಗ KGF ನೋಡಿ ಕಲಿಯಿರಿ ಎನ್ನುತ್ತಿದ್ದರು.. KGF ರೀತಿಯ ಸಿನಿಮಾ ಮಾಡಿದ್ರೆ ಟೀಕೆ ಮಾಡ್ತಾರೆ.. ಕೆಲವರಿಗೆ ಎಲ್ಲದಕ್ಕೂ ಬಯ್ಯುವ ಕಾಯಿಲೆ ಇರುತ್ತದೆ.. ಚಳಿಗಾಲದಲ್ಲಿ ಅಯ್ಯೋ ಚಳಿ ಬಿಸಿಲು ಬರಲಿ ಎನ್ನತ್ತಾರೆ..
ಬೇಸಿಗೆಯಲ್ಲಿ ಅಯ್ಯೋ ಬಿಸಿ ಬೇಸಿಗೆ ಯಾವಾಗ ಮುಗಿಯುತ್ತೆ ಎನ್ನುತ್ತಾರೆ… ಮಳೆಗಾಲದಲ್ಲಿ ಮಳೆ ಯಾವಾಗ ಮುಗಿಯುತ್ತೋ ಅಂತಾರೆ.. ಒಟ್ನಲ್ಲಿ ಬಯ್ಯುತ್ತಲೇ ಇರುವುದು ಅವರ ಜಾಯಮಾನ “ ಎನ್ನುತ್ತಾ ಹೈಸ್ಕೂಲ್ ದಿನಗಳ ಕನ್ನಡ ಪಠ್ಯದಲ್ಲಿದ್ದ ಇಕ್ಕಳ ಪದ್ಯದ ಉದಾಹರಣೆಯನ್ನ ನೀಡಿದ್ದಾರೆ ಉಪ್ಪಿ.
ಅಲ್ಲದೇ ಕೆಲವರು ಏನೂ ಮಾಡಿದ್ರೂ ತಪ್ಪು ಹುಡುಕುತ್ತಾರೆ.. ಅವರ ಬಗ್ಗೆ ತಲೆ ಕೆಡಿಸಿಕೊಳ್ದೇ ನಮ್ಮ ಕೆಲಸ ನಾವು ಮಾಡಿಕೊಂಡು ಹೋಗಬೇಕಷ್ಟೇ ಎಂದಿದ್ದಾರೆ..
ಉಪ್ಪಿ ಅವರ ಪ್ರತಿಕ್ರಿಯೆಗೆ ಫ್ಯಾನ್ಸ್ ಕೂಡ ಮೆಚ್ಚಿಕೊಂಡಿದ್ದಾರೆ..