Ajith kumar – Ak61
ಸದ್ಯ ಬಾಲಿವುಡ್ ಮಂದಿ ಸಾಲು ಸಾಲು ಸೋನುಗಳ ಬೆನ್ನಲ್ಲೇ ಸೌತ್ ಸಿನಿಮಾಗಳು ಸೂಪರ್ ಹಿಟ್ ಆಗ್ತಿರೋದನ್ನೇ ಎನ್ ಕ್ಯಾಶ್ ಮಾಡಿಕೊಂಡು ಸೌತ್ ಸ್ಟಾರ್ ಗಳ ಹಿಂದೆ ಬಿದ್ದಿದ್ದಾರೆ,..
ಉದಾಹರಣೆ ಕೊಟ್ಟು ಹೇಳೋದಾದ್ರೆ ಶಾರುಖ್ ಖಾನ್ ಗೆ ಸೌತ್ ಸ್ಟಾರ್ ನಿರ್ದೇಶಕ ಅಟ್ಲಿ ಆಕ್ಷನ್ ಕಟ್ ಹೇಳ್ತಿರುವುದು , ಈ ಸಿನಿಮಾದಲ್ಲಿ ನಯನತಾರಾ ನಾಯಕಿಯಾಗಿದ್ದರು..
ಇತ್ತೀಚೆಗೆ ವಿಜಯ್ ದೇವರಕೊಂಡ ಲೈಗರ್ ಸಿನಿಮಾಗೆ ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಬಂಡವಾಳ ಹೂಡಿದ್ದು , ಬ್ರಹ್ಮಾಸ್ತ್ರದಲ್ಲಿ ನಾಗಾರ್ಜುನ್ ನಟನೆ, ಲಾಲ್ ಸಿಂಗ್ ಚಡ್ಡಾದಲ್ಲಿ ನಾಗಚೈತನ್ಯ ನಟನೆ, ಪ್ರಭಾಸ್ ಆದಿಪುರುಷ್ ಸಿನಿಮಾಗೆ ಟಿ ಸೀರೀಸ್ ಬಂಡವಾಳ ಹೂಡುತ್ತಿರುವುದು… ರಣವೀರ್ ನಟನೆಯ ಅನಿಯನ್ ರೀಮೇಕ್ ವರ್ಷನ್ ಸಿನಿಮಾಗೆ ಶಂಕರ್ ಆಕ್ಷನ್ ಕಟ್ ಹೇಳುತ್ತಿರುವುದು..
ಅಂದ್ಹಾಗೆ ಕಾಲಿವುಡ್ ನ ಸ್ಟಾರ್ ನಟ ಅಜಿತ್ ಸಿನಿಮಾಗೆ ಬಾಲಿವುಡ್ ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಬಂಡವಾಳ ಹೂಡುತ್ತಿರುವುದು ಗೊತ್ತೇ ಇದೆ.. ಇದೀಗ AK61 (Ajithkumar 61 ನೇ ಸಿನಿಮಾ) ಟೈಟಲ್ ಮತ್ತು ಫಸ್ಟ್ ಲುಕ್ ಅನಾವರಣಗೊಂಡಿದೆ..
ಹೌದು..! ಈ ಸಿನಿಮಾಗೆ ‘ತುನಿವು’ ಎಂದು ಟೈಟಲ್ ಇಡಲಾಗಿದ್ದು , ಅಜಿತ್ ಕುಮಾರ್ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ ನಿರ್ಮಾಕರು.
Instagram ನಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರು ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.. “#Thunivu #NoGutsNoGlory #AK61FirstLook #AK61 ಎಂಬ ಹ್ಯಾಶ್ ಟ್ಯಾಗ್ ಗಳನ್ನ ಬಳಸಿ ಸಿನಿಮಾದ ಟೈಟಲ್ ರಿವೀಲ್ ಮಾಡಿದ್ಧಾರೆ..
ಪೋಸ್ಟರ್ ನಲ್ಲಿ ಅಜಿತ್ ಕುಮಾರ್ ಸಖತ್ ಡೇರಿಂಗ್ ಆಗಿ ಕಾಣಿಸಿಕೊಂಡಿದ್ದಾರೆ… ಖಡಕ್ ಲುಕ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.. ಅಜಿತ್ ಕುಮಾರ್ ಬಿಳಿ ಕೂದಲು ಮತ್ತು ಬಿಳಿ ಗಡ್ಡವನ್ನು ಹೊಂದಿದ್ದು, ಕೈಯಲ್ಲಿ ಗನ್ ಹಿಡಿದು ಆಟಿಟ್ಯೂಡ್ ನಲ್ಲಿ ಕುಳಿತಿರುವುದನ್ನ ಕಾಣಬಹುದು.
ಅಜಿತ್ ಕುಮಾರ್ ಬೆಂಕಿ ಲುಕ್ ಗೆ ಅಭಿಮಾನಿಗಳು ಬೆಂಕಿಯ ಎಮೋಜಿಗಳನ್ನ ನೀಡುತ್ತಾ ಕಾಮೆಂಟ್ ಗಳನ್ನ ಮಾಡ್ತಿರೋದನ್ನ ನೋಡಬಹುದು..