ಬಾಲಿವುಡ್ ನಲ್ಲಿ ಕೆಲ ತಿಂಗಳ ಹಿಂದೆ ಸಂಚಲನವನ್ನೇ ಸೃಷ್ಟಿಸಿದ್ದ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ ಕೇಸ್ ಬಗ್ಗೆ ಇದೀಗ ಗೌರಿ ಖಾನ್ ಮೌನ ಮುರಿದಿದ್ದಾರೆ..
ಜೈಲಿನಲ್ಲಿ ಕೆಲ ದಿನಗಳು ಕಾಲ ಕಳೆದು ನಂತರ ರಿಲೀಸ್ ಆಗಿ ಅದಾದ ಮೇಲೆ ಕ್ಲೀನ್ ಚಿಟ್ ಪಡೆದಿರುವ ಆರ್ಯನ್ ಖಾನ್ ಕೇಸ್ ಬಗ್ಗೆ ಕಾಫಿ ವಿತ್ ಕರಣ್ ಶೋನಲ್ಲಿ ಮಾತನಾಡಿದ್ದಾರೆ.. ತಾಯಿಯಾಗಿ , ಪೋಷಕರಾಗಿ ನಾವು ಬಹಳ ನೋವನುಭವಿಸಿದ್ದೇವೆ…
ಕುಟುಂಬವಾಗಿ ನಿಂತಾಗ ನಾವು ಈಗ ಹೀಗಿದ್ದೇವೆ,.. ನಮ್ಮ ಲ್ಲಾ ಸ್ನೇಹಿತರು , ಪ್ರೀತಿ ತೋರಿಸಿದ ಎಲ್ಲರಿಗೂ ಧನ್ಯವಾದಗಳನ್ನ ಅರ್ಪಿಸುತ್ತೇವೆ ಎಂದಿದ್ದಾರೆ..
ಅಂದ್ಹಾಗೆ ಪುತ್ರಿಗೆ ಡೇಟಿಂಗ್ ಸಲಹೆಯನ್ನೂ ನೀಡಿರುವ ಗೌರಿ ಖಾನ್ , ಯಾವುದೇ ಕಾರಣಕ್ಕೂ ಒಂದೇ ಸಮಯದಲ್ಲಿ ಇಬ್ಬರನ್ನ ಡೇಟ್ ಮಾಡದಂತೆ ತಿಳಿಸಿದ್ದಾರೆ..