ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಾವಾಗಿರುವ ಕಾಂತಾರಾ ಸೆಪ್ಟೆಂಬರ್ 30ಕ್ಕೆ ತೆರೆಗೆ ಬರಲಿದೆ.. ಸಿನಿಮಾದ ಟ್ರೇಲರ್ ಸಾಕಷ್ಟು ಕ್ರೇಜ್ ಹುಟ್ಟುಸಿದೆ… ಸಿನಿಮಾಗೆ ರಿಷಬ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು , ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.. ರಿಷಬ್ ನಿರ್ದೇಶನದ ನಾಲ್ಕನೇ ಸಿನಿಮಾ ಇದಾಗಿದೆ..
ಅವರ ಜೊತೆಗೆ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಿಶೋರ್ ರಾವ್ ಕೂಡ ನಟಿಸಿದ್ಧಾರೆ.. ಅಂದ್ಹಾಗೆ ಇತ್ತೀಚೆಗೆ ಈ ಸಿನಿಮಾದ ಬಗ್ಗೆ ಹರಿದಾಡಿದ್ದ ದು ಸುದ್ದಿಗೆ ಇದೀಗ ರಿಷಬ್ ಶೆಟ್ಟಿ ಅವರು ಕ್ಲಾರಿಟಿ ಕೊಟ್ಟಿದ್ದಾರೆ.. ಈ ಸಿಸಿಮಾಗೆ ಮೊದಲ ಯ್ಕೆ ಪುನೀತ್ ರಾಜ್ ಕುಮಾರ್ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೇಳಿದ್ದರು..
ಕೆಲವರು ಆಶ್ಚರ್ಯ ಪಟ್ಟರೂ ಕೆಲವರು ಪಬ್ಲಿಸಿಟಿ ಗಿಮಿಕ್ ಅಂದ್ರು.. ಆದ್ರೆ ಈ ಬಗ್ಗೆ ಇದೀಗ ರಿಷಬ್ ಶೆಟ್ಟಿ ಮಾತನಾಡಿದ್ದಾರೆ.. ಸದ್ಯ ರಿಷಬ್ ಶೆಟ್ಟಿ ಮತ್ತೆ ಸಿನಿಮಾ ತಂಡ ಚಿತ್ರದ ಪ್ರಚಾರದಲ್ಲಿ ತೊಡಗಿದ್ದು ಸಂದರ್ಶನವೊಂದ್ರಲ್ಲಿ ಈ ಬಗ್ಗೆ ರಿಷಬ್ ಮಾತನಾಡಿದ್ದಾರೆ..
ಈ ಚಿತ್ರದಲ್ಲಿ ಕತೆ ಬರೆಯುವಾಗಲೇ ನಾಯಕ ಶಿವ ಪಾತ್ರ ಮಾಡುವುದು ನಾನೇ ಎಂದು ಬರೆದಿದ್ದೆ ಎಂದಿದ್ದು ಪಾತ್ರಕ್ಕೆ ಮೂಲವಾಗಿ ನಾನೇ ನಾಯಕ ಎಂದು ಸ್ಪಷ್ಟಪಡಿಸಿದ್ದಾರೆ..
ಆದ್ರೆ ನಿರ್ಮಾಪಕ ವಿಜಯ್ ಅವರಿಗೆ ಈ ಕತೆ ಹೇಳುವಾಗ ಕಥೆಗೆ ಸ್ಟಾರ್ ನಟರಾದರೆ ಯಾರು ಮಾಡಬಹುದು ಎಂದು ಪ್ರಶ್ನೆ ಕೇಳಿದಾಗ ಚಿತ್ರದಲ್ಲಿ ಕಷ್ಟದ ಆಕ್ಷನ್ ಸೀನ್ ಹಾಗೂ ಕಂಬಳದ ಓಟದ ಸೀನ್ ಗಳು ಹೆಚ್ಚಿರುವುದರಿಂದ ಚಿತ್ರಕ್ಕೆ ಅಪ್ಪು ಸರ್ ಸರಿಯಾದ ಆಯ್ಕೆ ಎಂದಿದ್ದೆ ಎಂದು ತಿಳಿಸಿದ್ದಾರೆ.
ಆದ್ರೆ ಡೇಟ್ಸ್ ಹೊಂದಾಣಿಕೆಯಾಗಲಿಲ್ಲ.. ಅಪ್ಪು ಅವರು ಆಗಲೇ ಜೇಮ್ಸ್ ಹಾಗೂ ದ್ವಿತ್ವ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು.. ಅವರ ಬಳಿ ಮೂರ್ನಾಲ್ಕು ಸಿನಿಮಾಗಳು ಇದ್ದ ಕಾರಣಕ್ಕೆ ಅಪ್ಪು ಅವರೇ ಬಂದು ನನಗೆ ಈ ಸಿನಿಮಾದಲ್ಲಿ ನಟಿಸುವಂತೆ ಹೇಳಿದ್ದರು ಎಂದು ಸ್ಪಷ್ಟಪಡಿಸಿದ್ದಾರೆ..