ಸ್ಯಾಂಡಲ್ ವುಡ್ ನ ಪ್ರತಿಭಾನ್ವಿತ ನಟ , ಬಹುಭಾಷಾ ನಟ , ವರ್ಸಟೈಲ್ ಆಕ್ಟರ್ ಕಿಶೋರ್ ರಾವ್ ಸೌತ್ ಇಂಡಸ್ಟ್ರಿಯಲ್ಲಿ ಜನಪ್ರಿಯತೆ ಪಡೆದಿದ್ದಾರೆ.. ಇದೀಗ ಕಿಶೋರ್ ರಾವ್ ಬಾಲಿವುಡ್ ನತ್ತ ಮುಖ ಮಾಡಿದ್ದಾರೆ.. ಸದಾ ವಿಭಿನ್ನ ಹಾಗೂ ಪ್ರಾಯೋಗಿಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಕಿಶೋರ್ ಅಂತಹದ್ದೇ ಮತ್ತೊಂದು ವಿಭಿನ್ನ ಪಾತ್ರದಲ್ಲಿ ಹಿಂದಿ ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ..
ಅಂದ್ಹಾಗೆ ಈ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಾಯಕನಾಗಿ ಕಿಶೋರ್ ರಾವ್ ಬಣ್ಣ ಹಚ್ಚಲಿದ್ದಾರೆ.. ರೆಡ್ ಕಾಲರ್ ಸಿನಿಮಾ ಮೂಲಕ ಹಿಂದಿ ಪ್ರೇಕ್ಷಕರನ್ನ ಸೆಲೆಯಲು ಕಿಶೋರ್ ಸಜ್ಜಾಗಿದ್ದಾರೆ.. ಅಂದ್ಹಾಗೆ ಬಹುತೇಕ ಕನ್ನಡ ಕಲಾವಿದರು ಈ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ..
ಸದ್ಯ ಕಿಶೋರ್ ರಾವ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕನ್ನಡದ ಬಹುನಿರೀಕ್ಷೆಯ ಕಾಂತಾರಾ ಸಿನಿಮಾ ಸೆಪ್ಟೆಂಬರ್ 30 ಕ್ಕೆ ರಿಲೀಸ್ ಆಗಲಿದೆ.. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ನಾಯಕನಾಗಿದ್ದಾರೆ..