ಸೆಪ್ಟೆಂಬರ್ 23 ರಂದು ರಾಷ್ಟ್ರೀಯ ಸಿನಿಮಾ ದಿನಾಚೆಣೆ ಹಿನ್ನೆಲೆ ಮಲ್ಟಿಫ್ಲೆಕ್ಸ್ ಗಳಲ್ಲಿ ಎಲ್ಲಾ ಸಿನಿಮಾಗಳ ಟಿಕೆಟ್ ಗಳು ಸಹ 75 ರೂಪಾಯಿಗೆ ಸಿಗುತ್ತಿದೆ,.. ಅಂದ್ಹಾಗೆ ರಾಷ್ಟ್ರೀಯ ಸಿನಿಮಾ ದಿನಾಚರಣೆಯನ್ನ ಮೊದಲಿಗೆ ಸೆಪ್ಟೆಂಬರ್ 16 ರಮದು ಆಚರಿಸಬೇಕೆಂದು ನಿರ್ಧಾರವಾಗಿತ್ತು.. ಆನಂತರ ಪೋಸ್ಟ್ ಪೋನ್ ಮಾಡಲಾಯ್ತು.. ಮುಮದೂಡಲು ಬ್ರಹ್ಮಾಸ್ತ್ರ ಸಿನಿಮಾ ಕಾರಣವೆಂದೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದೆ.. ಬ್ರಹ್ಮಾಸ್ತ್ರ ಸಿನಿಮಾ ಕಲೆಕ್ಷನ್ ಹೊಡೆತ ಬೀಳಬಹುದೆಂದ ರೀತಿ ಮಾಡಲಾಯ್ತು ಎಂದೇ ಆರೋಪಿಸಲಾಗಿದೆ..
ಅಂದ್ಹಾಗೆ 75 ರೂ ಟಿಕೆಟ್ ಸಿಗುತ್ತಿರೋದ್ರೀಂದ ಮಲ್ಟಿಪ್ಲೆಕ್ಸ್ ಗಳಲ್ಲಿ ಅವತಾರ್ ಪಾರ್ಟ 1 3ಡಿ , ಬ್ರಹ್ಮಾಸ್ತ್ರ , ಕನ್ನಡದ ಮಾನ್ಸೂನ್ ರಾಗ , ಗುರು ಶಿಷ್ಯರು ರಂತಹ ನ್ನೂ ಹಲವಾರು ಸಿನಿಮಾಗಳನ್ನ ಜನ ಕಡಿಮೆ ಬೆಲೆಗೆ ಟಿಕೆಟ್ ಕೊಂಡು ವೀಕ್ಷಿಸಬಹುದಾಗಿದೆ.. ಅಂದ್ಹಾಗೆ ಪ್ರೇಕ್ಷರಿಗೆ ಇದು ಉಡುಗೊರೆಯ ರೂಪದಲ್ಲಿ “ Thankyou “ ಅಭಿಯಾನದಡಿ 75 ರೂಗೆ ಟಿಕೆಟ್ ಗಳು ಲಭ್ಯವಾಗ್ತಿದೆ…