ಪುನೀತ್ ರಾಜ್ ಕುಮಾರ್ ಅವರ ನಟನೆಯ ಕೊನೆಯ ಸಿನಿಮಾ ಲಕ್ಕಿ ಮ್ಯಾನ್ ಇತ್ತೀಚೆಗಷ್ಟೇ ಥಿಯೇಟರ್ ಗಳಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಿದ್ದು ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆದುಕೊಂಡಿದೆ.. ದೇವರಾಗಿ ತೆರೆಮೇಲೆ ಕಂಡ ಪುನೀತ್ ರಾಜ್ ಕುಮಾರನ್ನ ಕಂಡು ಅಭಿಮಾನಿಗಳು ಭಾವುಕರಾಗಿದ್ದರು..
ಇದೀಗ ಪುನೀತ್ ರಾಜ್ ಕುಮಾರ್ ಅವರ ಕನಸಿಕ ಪ್ರಾಜೆಕ್ಟ್ ಆಗಿದ್ದ ‘ಗಂಧದಗುಡಿ’ ಸಿನಿಮಾ ರಿಲೀಸ್ ಗೆ ತಯಾರಿ ನಡೆಯುತ್ತಿದೆ.. ಈ ಸಿನಿಮಾ ಕೊನೆಯ ಬಾರಿಗೆ ಅಪ್ಪುರನ್ನ ತೆರೆ ಮೇಲೆ ಕಾಣುಬಹುದು.. ಹೀಗಾಗಿ ಅಭಿಮಾನಿಗಳು ಸಿನಿಮಾವನ್ನ ಬಹಳ ಅದ್ಧೂರಿಯಾಗಿ ರಿಲೀಸ್ ಮಾಡಲು ತಯಾರಿ ನಡೆಸುತ್ತಿದ್ದಾರೆ..
ಕಾಡಿನೊಳಗೆ , ಕರ್ನಾಟಕದ ವನ್ಯ ಸಂಪತ್ತಿನ ಕುರಿತಾಗಿ ಸಿನಿಮಾವನ್ನ ಚಿತ್ರೀಕರಿಸಲಾಗಿದೆ.. ಈ ಡಾಕ್ಯುಮೆಂಟ್ರಿ ಸಿನಿಮಾವನ್ನ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ರಿಲೀಸ್ ಮಾಡಬಹುದು…
ಈ ಸಿನಿಮಾದ ಮತ್ತೊಂದು ವಿಷೇಶತೆ ಅಂದ್ರೆ ‘ಗಂಧದಗುಡಿ’ ಟೈಟಲ್ ನಲ್ಲಿ ಮೊದಲಿಗೆ ರಾಜ್ ಕುಮಾರ್ ಆ ನಂತರ ಶಿವರಾಜ್ ಕುಮಾರ್ ಅವರೂ ಸಹ ಸಿನಿಮಾ ಮಾಡಿದ್ದು , ಈಗ ಇದೇ ಟೈಟಲ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ರಿಲೀಸ್ ಆಗ್ತಿದೆ..
ಅಂದ್ಹಾಗೆ ಗಂಧದ ಗುಡಿ ಸಿನಿಮಾ ರಿಲೀಸ್ ಗೆ ಇನ್ನೂ ಒಂದು ತಿಂಗಳು ಬಾಕಿಯಿರುವಾಗಲೇ ಅಪ್ಪು ಫ್ಯಾನ್ಸ್ ಸಂಭ್ರಾಮಾಚರಣೆಗಳನ್ನ ಶುರು ಮಾಡಿದ್ದಾರೆ..
ಈಗ ಅಭಿಮಾನಿಗಳೆಲ್ಲರೂ ಕೆಜೆ ರಸ್ತೆಯ ಪ್ರಮುಖ ಚಿತ್ರಮಂದಿರದ ಎದುರು ರಾಜ್ ಕುಮಾರ್ , ಶಿವಣ್ಣ , ಪುನೀತ್ ರಾಜ್ ಕುಮಾರ್ ಅವರ ಕಟೌಟ್ ಗಳನ್ನ ನಿಲ್ಲಿಸಲು ಪ್ಲಾನ್ ಮಾಡ್ತಿದ್ದಾರೆ.. ಮೂರ ಗಂಧದ ಗುಡಿ ಟೈಟಲ್ ಪೋಸ್ಟರ್ ನಿಲ್ಲಿಸಲು ಯೋಜನಯಿದೆ ಎನ್ನಲಾಗ್ತಿದೆ..