ಸೆಪ್ಟೆಂಬರ್ 24 ರಿಂದ Biggboss Kannada ಸೀಸನ್ 9 ಆರಂಭವಾಗುದು ಬಹುತೇಕ ಖಚಿತವೆನ್ನಲಾಗ್ತಿದೆ.. ಈಗಾಗಲೇ ಸಂಬಂಧಿತ ಪ್ರೋಮೋಗಳು ಸೌಂಡ್ ಮಾಡ್ತಿದೆ.. ಸ್ಪರ್ಧಿಗಳು ಯಾರೆಲ್ಲಾ ಬರಲಿದ್ದಾರೆ.. ಈ ಸೀಸನ್ ನಲ್ಲಿ ಏನೆಲ್ಲಾ ವಿಶೇಷತೆಗೋಳಿದೆ ಎಂಬ ಚರ್ಚೆಗಳು , ಒಂದಷ್ಟು ಹೆಸರುಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಡಿಸ್ಕಷನ್ ಚಾಲೂ ಇದೆ..
ಈ ನಡುವೆ ಈ ಸೀಸನ್ ಕಂಪ್ಲೀಟ್ ಡಿಫರೆಂಟ್ ಆಗಿರಲಿದೆ ಅನ್ನೋ ಅನುಮಾನ ಮೂಡಿದೆ..
ಈ ಸೀಸನ್ ನಲ್ಲಿ ಸಾಕಷ್ಟು ವಿಶೇಷತೆಗಳು ಹೊಸ ಹೊಸ ರೂಲ್ಸ್ ಗಳಿದೆ.. ಜೊತೆಗೆ ಕೆಲ ಪ್ರಯೋಗಗಳನ್ನೂ ಮಾಡಲು ಬಿಗ್ ಬಾಸ್ ಟೀಮ್ ಮುಂದಾಗಿದೆ..
ಅಂದ್ಹಾಗೆ ಬಿಗ್ ಬಾಸ್ ಮನೆಗೆ ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಅನ್ನೋ ಸಾಕಷ್ಟು ಕುತೂಹಲಗಳಿದೆ.. ಈ ನಡುವೆ ಒಟಿಟಿ ಸೀಸನ್ ನಿಂದ ನೇರವಾಗಿ ಪ್ರವೇಶ ಪಡೆದ ನಾಲ್ವರಂತೂ ಎಲ್ರಿಗೂ ಗೊತ್ತೇ ಇದೆ..
ಕಲರ್ಸ್ ಕನ್ನಡ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಹೊಸ ಫೋಟೋ ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಪ್ರದರ್ಶನಕ್ಕೆ ಎಲ್ಲಾ ರೀತಿಯಲ್ಲೂ ಮನೆ ಸೆಟ್ ಆಗಿದೆ. ಈ ಬಾರಿ ಟಿವಿ ಸೀಸನ್ನಲ್ಲಿ ಹಲವು ವಿಶೇಷತೆ ಇರಲಿವೆಯಾದರೂ ಬಿಗ್ ಬಾಸ್ ಮನೆಗೆ ಹೆಚ್ಚಿನ ಬದಲಾವಣೆಗಳೇನನ್ನೂ ಮಾಡುತ್ತಿಲ್ಲ ಎನ್ನಲಾಗಿದೆ.