ಸೆಪ್ಟೆಂಬರ್ 24 ರಿಂದ ಬಿಗ್ ಬಾಸ್ ಕನ್ನಡ ಸೀಸನ್ 9 ಗ್ರ್ಯಾಂಡ್ ಓಪನಿಂಗ್ ಮೂಲಕ ಶುರುವಾಗಲಿದೆ.. ಈ ಸೀಸನ್ ನಲ್ಲಿ ಸಾಕಷ್ಟು ವಿಶೇಷತೆಗಳು ಹೊಸ ಹೊಸ ರೂಲ್ಸ್ ಗಳಿದೆ.. ಜೊತೆಗೆ ಕೆಲ ಪ್ರಯೋಗಗಳನ್ನೂ ಮಾಡಲು ಬಿಗ್ ಬಾಸ್ ಟೀಮ್ ಮುಂದಾಗಿದೆ..
ಅಂದ್ಹಾಗೆ ಬಿಗ್ ಬಾಸ್ ಮನೆಗೆ ಈ ಬಾರಿ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಅನ್ನೋ ಸಾಕಷ್ಟು ಕುತೂಹಲಗಳಿದೆ.. ಈ ನಡುವೆ ಒಟಿಟಿ ಸೀಸನ್ ನಿಂದ ನೇರವಾಗಿ ಪ್ರವೇಶ ಪಡೆದ ನಾಲ್ವರಂತೂ ಎಲ್ರಿಗೂ ಗೊತ್ತೇ ಇದೆ..
ಸಾನ್ಯಾ ಐಯರ್ , ರೂಪೇಶ್ ಶೆಟ್ಟಿ , ರಾಕೇಶ್ ಆಡಿಗ , ಆರ್ಯವರ್ಧನ್ ಗುರೂಜಿ.. ಹೀಗೆ ನಾಲ್ವರು ಟಿವಿ ಬಿಗ್ ಬಾಸ್ ಗೆ ಆಯ್ಕೆಯಾಗಿದ್ದು , ಸದ್ಯ ಇವರನ್ನ ಬೆಂಗಳೂರಿನ ಐಶಾರಾಮಿ ರೆಸಾರ್ಟ್ ಒಂದರಲ್ಲಿ ಇರಿಸಲಾಗಿದೆ ಎನ್ನಲಾಗಿದೆ..
ಇನ್ನೂ ಈ ನಾಲ್ವರನ್ನು ಹೊರತು ಪಡಿಸಿ ಮಿಕ್ಕ ಸ್ಪರ್ಧಿಗಳು ಯಾರೆಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ..
ಬಿಗ್ ಬಾಸ್ ನಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ 16 ಸ್ಪರ್ಧಿಗಳು ಮನೆ ಪ್ರವೇಶ ಮಾಡಲಿದ್ದಾರೆ.. 16 ಜನರ ಪೈಕಿ ನಾಲ್ವರು ಈಗಾಗಲೇ ಮನೆಯಲ್ಲಿ ತಮ್ಮ ಸ್ಥಾನವನ್ನ ರಿಸರ್ವ್ ಮಾಡಿಕೊಂಡಾಗಿದೆ..
ಆದ್ರೆ ಉಳಿದ 12 ಮಂದಿ ಯಾರು..?? ಇದನ್ನ ನೋಡುವುದಾದ್ರೆ ಈ ಸೀಸನ್ ನಲ್ಲಿ ಬಿಗ್ ಬಾಸ್ ನ ಹಿಂದಿನ ಸ್ಪರ್ಧಿಗಳು ಕೂಡ ಇರಲಿದ್ದಾರೆ ಎಂದೇ ಹೇಳಲಾಗ್ತಿದೆ..
ಇನ್ನೂ ಬಿಗ್ ಬಾಸ್ ಗೆ ಈ ಬಾರಿ ಬರುತ್ತಿರುವ ಹೊಸ ಸ್ಪರ್ಧಿಗಳ ಸಂಭಾವ್ಯ ಪಟ್ಟಿಗೆ ಮತ್ತೊಬ್ಬರ ಹೆಸರು ಸೇರ್ಪಡೆಯಾಗಿದೆ..
ಹೌದು..!
ಶನಿ ಧಾರಾವಾಹಿಯಲ್ಲಿ ನಟಿಸಿ ಮಿಂಚಿದ್ದ ನಟ ಸುನೀಲ್ ಇತ್ತೀಚೆಗೆ ಕೆಂಡಸಂಪಿಗೆಯಲ್ಲಿ ಗಮನ ಸೆಲೆಯುತ್ತಿದ್ದರು.. ಆದ್ರೆ ಧಿಡೀರ್ ಇವರ ಪಾತ್ರವನ್ನ ಧಾರವಾಹಿಯಲ್ಲಿ ಸಾಯಿಸಲಾಗಿದೆ.. ಹೀಗಾಗಿ ಈ ನಟ ಬಿಗ್ ಬಾಸ್ ಪ್ರವೇಶ ಮಾಡ್ತಾರೆ ಅಂತಲೇ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ..