ಸೋನು ಗೌಡಗೆ ಬಿಗ್ ಬಾಸ್ ಒಟಿಟಿಯಲ್ಲಿ ಸಿಕ್ಕ ಸಂಭಾವನೆ ಎಷ್ಟು..??!!!
ಬಿಗ್ ಬಾಸ್ ಒಟಿಟಿಯಲ್ಲಿ ಸಿಕ್ಕಾಪಟ್ಟೆ ಹೈಲೇಟ್ ಆದ್ರೂ ಟಿವಿ ಬಿಗ್ ಬಾಸ್ ಗೆ ಪ್ರವೇಶ ಪಡೆಯದೇ ನಿರಾಸೆ ಅನುಭವಿಸಿದ ಸೋನು ಗೌಡ ಎಷ್ಟೇ ಟ್ರೋಲ್ ಆದ್ರೂ ತಲೆ ಕೆಡಿಸಿಕೊಳ್ಳದೇ ಮಾತನಾಡುವ ಹುಡುಗಿ ಎಂದೇ ಗುರುತಿಸಿಕೊಂಡಿದ್ದಾರೆ..
ಅಂದ್ಹಾಗೆ ಸೋನು ಗೌಡ ಮೊದಲಿಗೆ ಟಿಕ್ ಟಾಕ್ ನಲ್ಲಿ ಫೇಮಸ್ ಆದವರು.. ಆ ನಂತರ ರೀಲ್ಸ್ ಮಾಡುತ್ತಾ ಫೇಮಸ್ ಆಗಿ ಸೋಷಿಯಲ್ ಮೀಡಿಯಾ ಸ್ಟಾರ್ ಆದವರು.. ಇನ್ಸ್ಟಾದಲ್ಲಿ ಸುಮಾರು 8 ಲಕ್ಷ ಫ್ಯಾನ್ಸ್ ಗಳನ್ನ ಹೊಂದಿದ್ದು ತಮ್ಮದೇ ಯೂಟ್ಯೂಬ್ ಚಾನಲ್ ನೂ ಹೊಂದಿದ್ಧಾರೆ.. ಅಂದ್ಹಾಗೆ ಫೇಮ್ ಅಷ್ಟೇ ಸೂನು ಗೌಡ ವಿವಾದಗಳನ್ನ ಮಾಡಿಕೊಂಡಿದ್ದೇ ಹೆಚ್ಚು..
ಅಂದ್ಹಾಗೆ ಸೋನು ಗೌಡ ಬಿಗ್ ಬಾಸ್ ಒಟಿಟಿಗೆ ಬಂದಾಗ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದೂ ಉಂಟು.. ಸೋನು ಗೌಡಗೆ ಬಿಗ್ ಬಾಸ್ ಒಟಿಟಿಯಲ್ಲಿ ಸಿಕ್ಕ ಸಂಭಾವನೆಯ ಬಗ್ಗೆ ಇದೀಗ ಭಾರೀ ಚರ್ಚೆಯಾಗ್ತಿದೆ..
ಅಂದ್ಹಾಗೆ ಮನೆಯಿಂದ ಹೊರಬಂದ ನಂತರದಲ್ಲಿ ಸೋನು ಗೌಡ ಸಂದರ್ಶನದಲ್ಲಿ ಅನೇಕ ಟ್ರೆಸ್ಟಿಂಗ್ ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ.. ಅಂತೆಯೇ ಬಿಗ್ ಬಾಸ್ ನಲ್ಲಿ ತಮಗೆ ಸಿಕ್ಕ ಸಂಭಾವನೆಯ ಬಗ್ಗೆಯೂ ಹೇಳಿಕೊಂಡಿದ್ಧಾರೆ..
ಸಂದರ್ಶನವೊಂದ್ರಲ್ಲಿ ಮಾತನಾಡ್ತಾ ಅದನ್ನ ಹೇಳೋಕಾಗೋದಿಲ್ಲ.. ಅದನ್ನ ಹೇಳಿದರೆ ನನಗೆ ನೆಗೆಟಿವ್ ಆಗಬಹುದು ಎಂದು ಸೀಕ್ರೇಟ್ ಮೇಂಟೇನ್ ಮಾಡಿದ್ದಾರೆ.. ಆದ್ರೆ ಸೋನು ಗೌಡಗೆ ಬಿಗ್ ಬಾಸ್ ನಲ್ಲಿ ಲಕ್ಷಾಂತರ ರೂಪಾಯಿ ಸಿಕ್ಕಿದೆ.. ಸುಮಾರು 10 ಲಕ್ಷ ಸಿಕ್ಕಿದೆ , 15 ಲಕ್ಷ ಸಿಕ್ಕಿದೆ ಎಂದೆಲ್ಲಾ ಸೋಷಿಯಲ್ ನಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ.. ಆದ್ರೆ ಅಧಿಕೃತವಾಗಿ ಮಾಹಿತಿ ಇಲ್ಲ..