ಟಾಲಿವುಡ್ ನ ಮೆಗಾಸ್ಟಾರ್ ಚಿರಂಜೀವಿ ಅವರು ಸಿನಿಮಾರಂಗದಲ್ಲಿ ಆಲದಮರದಂತೆ ಬೆಳೆದುನಿಂತಿದ್ದಾರೆ.. ಡ್ಯಾನ್ಸ್ , ಆಕ್ಟಿಂಗ್ , ಡೈಲಾಗ್ಸ್ ಗಳಿಂದ ಚಿರಂಜೀವಿ ಅವರು ಮಾಸ್ ಹೀರೋ ಆಗಿ ತೆಲುಗು ಸಿನಿಮಾರಂಗದಲ್ಲಿ ಬೆಳೆದುನಿಂತವರು.. ಇಂದು ಇಡಿ ಇಂಡಿಯಾದ ಟಾಪ್ ಸ್ಟಾರ್ ಗಳ ಪೈಕಿ ಒಬ್ಬರು..
ಅಂದ್ಹಾಗೆ ಸಿನಿಮಾರಂಗದವರು ಸಿನಿಮಾಕಷ್ಟೇ ಸೀಮಿತವಾಗದೇ ಉದ್ಯಮ ರಾಜಕೀಯ ಅಂತಲೂ ತೊಡಗಿಸಿಕೊಳ್ತಾರೆ.. ಅಂದ್ಹಾಗೆ ಇದಕ್ಕೆ ಮೆಗಾಸ್ಟಾರ್ ಚಿರಂಜೀವಿಯೂ ಹೊರತಾಗಿಲ್ಲ.. ಅಂದ್ಹಾಗೆ ಇತ್ತೀಚೆಗೆ ರಾಜಕೀಯದ ಕುರಿತಾಗಿ ಮೆಗಾಸ್ಟಾರ್ ಹೇಳಿಕೆ ಸದ್ಯ ಟಾಲಿವುಡ್ ಅಂಗಳದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ..
ಹೌದು,..!!
ಅವರ ಆಚಾರ್ಯ ಸಿನಿಮಾ ಸೋತ ನಂತರ ಇದೀಗ ಅವರ ನಟನೆಯ ಗಾಡ್ ಫಾದರ್ ಸಿನಿಮಾ ರಿಲೀಸ್ ಆಗಬೇಕಿದೆ.. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಕೂಡ ನಟಿಸುತ್ತಿದ್ದಾರೆ..
ಫಾದರ್ ಸಿನಿಮಾದಲ್ಲಿನ ಪವರ್ ಫುಲ್ ಡೈಲಾಗ್ ಅನ್ನು ಚಿರಂಜೀವಿ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ನಾನು ರಾಜಕೀಯದಿಂದ ದೂರವಾಗಿದ್ದೇನೆ, ಆದ್ರೆ ನನ್ನಿಂದ ರಾಜಕೀಯ ದೂರವಾಗಿಲ್ಲ ಅಂತ ಇರುವ ವಾಯ್ಸ್ ಓವರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇದ್ರಿಂದಾಗಿ ಚಿರು ಮತ್ತೆ ರಾಜಕೀಯಕ್ಕೆ ಎಂಟ್ರಿಕೊಡ್ತಿದ್ದಾರಾ ಅನ್ನೋ ಚರ್ಚೆಗಳು ಶುರುವಾಗಿಬಿಟ್ಟಿದೆ..