ಅದ್ಧೂರಿಯಾಗಿ ರಾಜ್ಯಾದ್ಯಂತ ( september 23) ಶರಣ್ ಅಭಿನಯದ ಗುರುಶಿಷ್ಯರು ಸಿನಿಮಾ ರಿಲೀಸ್ ಆಗಿದ್ದು , ಬಹುತೇಕ ಎಲ್ಲೆಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.. ಸಿನಿಮಾದ ಟಿಕೆಟ್ಸ್ ಗಳು ಆಲ್ ಮೋಸ್ಟ್ ಅಡ್ವಾನ್ಸ್ ಬುಕಿಂಗ್ ಆಗಿದೆ.. ಸಿನಿಮಾ ಬಗ್ಗೆ ಪ್ರೇಕ್ಷಕರು ಒಳ್ಲೆಯ ಭಿಪ್ರಾಯವನ್ನೇ ವ್ಯಕ್ತಪಡಿಸುತ್ತಿದ್ದಾರೆ…
ಶರಣ್ ಹಾಗೂ ನಿಶ್ವಿಕಾ ನಾಯ್ಡು ನಾಯಕ ಹಾಗೂ ನಾಯಕಿಯಾಗಿ ಕಾಣಸಿಕೊಂಡಿರುವ ಗುರು ಶಿಷ್ಯರು ಚಿತ್ರಕ್ಕೆ ಜಡೇಶ್ ಕುಮಾರ್ ಹಂಪಿ ಆಕ್ಷನ್ ಕಟ್ ಹೇಳಿದ್ದಾರೆ..
ಚಿತ್ರಕ್ಕೆ ಸ್ವತಃ ನಟ ಶರಣ್ ಹಾಗೂ ತರುಣ್ ಸುಧೀರ್ ಬಂಡವಾಳ ಹೂಡಿದ್ದಾರೆ.ಅಂದ್ಹಾಗೆ ಸಿನಿಮಾ ನೋಡಿಬಂದಿರುವ ಪ್ರೇಕ್ಷಕರು ಸೋಷಿಯಲ್ ಮೀಡಿಯಾಗಳಲ್ಲಿ ಅಭಿಪ್ರಾಯಗಳನ್ನ ಹಂಚಿಕೊಳ್ತಿದ್ದಾರೆ..
Guru Shishyaru Review
ಚಿತ್ರ ಎಲ್ಲಾ ವಿಭಾಗಗಳಲ್ಲಿಯೂ ಸೂಪರಾಗಿದೆ.. ಕಥೆ ಮಸ್ತ್ ಇದೆ.. ಪ್ಯಾನ್ ಇಂಡಿಯಾ ಸಿನಿಮಾದ ಲೆವೆಲ್ ನಲ್ಲಿಯೇ ಸಿನಿಮಾವಿದೆ..
ಯಾವ ವಿಭಾಗದಲ್ಲೂ ಸಿನಿಮಾ ಕಡಿಮೆಯಿಲ್ಲ… ಸಿನಿಮಾವನ್ನ ಥಿಯೇಟರ್ ಗಳಲ್ಲಿ ಮಿಸ್ ಮಾಡದೇ ನೋಡಲೇಬೇಕೆಂದು ಕಾಮೆಂಟ್ ಗಳು ಪೋಸ್ಟ್ ಗಳನ್ನ ನೆಟ್ಟಿಗರು ಮಾಡ್ತಿದ್ದು , ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಗುತ್ತಿದೆ..
ಅಂದ್ಹಾಗೆ ದಶಕಗಳ ಹಿಂದೆ ಕನ್ನಡದಲ್ಲಿ ಇದೇ ಟೈಟಲ್ ನಲ್ಲಿ ( GuruShishyaru ) ಸಿನಿಮಾ ರಿಲೀಸ್ ಆಗಿ ಅಬ್ಬರಿಸಿತ್ತು.. ಈಗ ಮತ್ತದೇ ಟೈಟಲ್ ನಲ್ಲಿ ಸಿನಿಮಾ ಬರುತ್ತಿದ್ದು , ಅಭಿಮಾನಿಗಳ ಕಾತರತೆ ಹೆಚ್ಚಾಗಿದೆ.. ಅದ್ರಲ್ಲೂ ಶರಣ್ ಸಿನಿಮಾ ಅಂದ್ರೆ ಅದ್ರಲ್ಲೊಂದು ಕಾಮಿಡಿ ಟಚ್ ಇರಲೇ ಬೇಕು..
ಇದೊಂದು ಗ್ರಾಮೀಣ ಕ್ರೀಡೆ ಖೋ ಖೋ ಕಥೆಯಾಧಾರಿತ ಸಿನಿಮಾವಾಗಿದೆ.. ಜೊತೆಗೆ ಗುರು ಮತ್ತು ಶಿಷ್ಯಂದಿರ ನಡುವಿನ ಸಂಬಂಧದ ಬಗ್ಗೆಯ ಕಥೆಯಾಗಿದೆ. ಸಿನಿಮಾದಲ್ಲಿ ಶರಣ್ ಪಿಟಿ ಮಾಸ್ಟರ್ ಆಗಿ ಕಾಣಿಸಿಕೊಂಡಿರೋದು ವಿಶೇಷ..
ಆದ್ರೆ ಈ ಸಿನಿಮಾಗೆ ಯಾಕೆ ಅದೇ ಹಳೇ ಸಿನಿಮಾದ ಟೈಟಲ್ ಮರುಬಳಕೆ ಮಾಡಿದೆ ಎಂಬುದಕ್ಕೆ ಉತ್ತರ ಇಲ್ಲಿದೆ..
ಸಿನಿಮಾದ ಟೈಟಲೇ ಹೇಳುವಂತೆ ಇದೊಂದು ಗುರು ಶಿಷ್ಯರ ನಡುವಿನ ಸಂಬಂಧದ ಕಥೆಯಾಗಿದೆ.. ಅಂದ್ಹಾಗೆ ಹಳೆಯ ಗುರುಶಿಷ್ಯರು ಸಫುರ್ ಹಿಟ್ ಸಿನಿಮಾದಲ್ಲಿ ವಿಷ್ಣುವರ್ಧನ್ , ದ್ವಾರಕೀಶ್ , ಎಸ್ ಶಿವರಾಮ್ , ಎಮ್ ಎಸ್ ಉಮೇಶ್ ಸೇರಿದಂತೆ ಹಲವರು ಬಣ್ಣ ಹಚ್ಚಿದ್ದರು.. ಈ ಸಿನಿಮಾ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿ ದಾಖಲೆ ಬರೆದಿತ್ತು..
ಅದೇ ಸಿನಿಮಾದ ಟೈಟಲ್ ಮರುಬಳಕೆ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.. ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಈ ಬಗ್ಗೆ ಶರಣ್ ಮಾತನಾಡಿದ್ದಾರೆ.. ಅಂದಿನ ಗುರುಶಿಷ್ಯರು ಸಿನಿಮಾವೇ ಬೇರೆ.. ಈ ಸಿನಿಮಾವೇ ಬೇರೆ.. ಎರೆಡೂ ಸಿನಿಮಾಗಳಲ್ಲೂ ಕಂಟೆಂಟ್ ಬೇರೆ.. ಕಥೆ ಬೇರೆ..
ಆದ್ರೆ ಈ ಸಿನಿಮಾ ಗುರು ಶಿಷ್ಯರ ನಡುವಿನ ಸಂಬಂಧದ ಸಿನಿಮಾವಾದ ಕಾರಣ ಸಿನಿಮಾಗೆ ಗುರುಶಿಷ್ಯರೆಂದು ಟೈಟ್ಲ್ ಇಟ್ಟಿದ್ದಾಗಿ ಹೇಳಿದ್ದಾರೆ..
ಗುರು ಇಲ್ಲದೇ ಶಿಷ್ಯರಿಲ್ಲ,.. ಶಿಷ್ಯರಿಲ್ಲದೇ ಗುರುವಿಲ್ಲ ಬ ಮಾದರಿಯ ಕಥೆಯುದಾಗಿದೆ.. ಆರಂಭದಲ್ಲಿ ಗುರುಶಿಷ್ಯರ ತರ ಟೈಟಲ್ ಬೇಕು ಎಂದು ಚರ್ಚೆಯಾದಾಗ ತರ ಯಾಕೆ ಇದೇ ಟೈಟಲ್ ಯಾಕಾಗಬಾರದು ಎನಿಸಿ ಈ ಟೈಟಲ್ ಫಿಕ್ಸ್ ಮಾಡಲಾಯ್ತೆಂದು ತಿಳಿಸಿದ್ಧಾರೆ..
ಇನ್ನೂ ಹಳೆಯ ಗುರು ಶಿಷ್ಯರ ಬಗ್ಗೆ ಮಾತನಾಡಿರುವ ಶರಣ್ ಅಂತಹ ಸಿನಿಮಾ ಬರೋದು ಒಂದೊಂದೇ ಸಾರಿ.. ಅಂತಹ ಸಿನಿಮಾಗಳ ರೀಕ್ರಿಯೇಟ್ ಮಾಡಲು ಸಾಧ್ಯವಿಲ್ಲ.. ಅದರ ಹತ್ತಿರಕ್ಕೂ ನಾವು ಹೋಗಬಾರದು ಎಂದಿದ್ದಾರೆ.. ಅದಕ್ಕೆ ಇರುವ ಸ್ಥಾನಮಾನವೇ ಬೇರೆ.. ಹೀಗಾಗಿ ಆ ಸಿನಿಮಾವೇ ಬೇರೆ ಈ ಸಿನಿಮಾವೇ ಬೇರೆ ಎಂದಿದ್ಧಾರೆ..