( Hombale Films) ಹೊಂಬಾಳೆ ಫಿಲಮ್ಸ್… KGF ನಂತಹ ಸಿನಿಮಾ ಮೂಲಕ ಕನ್ನಡ ಇಂಡಸ್ಟ್ರಿ ಪವರ್ ಅನ್ನ ಡೀ ಭಾರತಕ್ಕೆ ತೋರಿಸಿದ ಸಿನಿಮಾ ನಿರ್ಮಾಣ ಸಂಸ್ಥೆ.. ಸದ್ಯ ಸಲಾರ್ , ಕಾಂತಾರಾದಂತಹ ಸಿನಿಮಾಗಳಿಗೂ ಬಂಡವಾಳ ಹೂಡಿದ್ದು ಈ ಸಿನಿಮಾಗಳು ರಿಲೀಸ್ ಆಗಬೇಕಿವೆ.. ಕಾಂತಾರಾ ಇನ್ನೇನು ಸೆಪ್ಟೆಂಬರ್ 30 ರಂದು ಬಿಡುಗಡೆಯಾಗಲಿದೆ..
ಸದ್ಯ ತೆಲುಗು , ತಮಿಳು , ಮಲಯಾಳಂ ನಲ್ಲೂ ಸಿನಿಮಾಗಳನ್ನ ನಿರ್ಮಿಸುವ ಪ್ಲಾನ್ ನಲ್ಲಿರೋ ಸಿನಿಮಾ ನಿರ್ಮಾಣ ಸಂಸ್ಥೆ ಕೆಲ ತಿಂಗಳುಗಳ ಹಿಂದೆ ಸೂರರೈ ಪೊಟ್ರು ಖ್ಯಾತಿಯ ನಿರ್ದೇಶಕಿ ಸುಧಾ ಕೊಂಗರ ಅವರ ಜೊತೆಗೆ ಸಿನಿಮಾ ಮಾಡುತ್ತಿರುವುದಾಗಿ ಘೋಷಣೆ ಮಾಡಿತ್ತು..
ಆದ್ರೆ ಯಾವ ಸಿನಿಮಾ ಯಾವ ಭಾಷೆ ನಾಯಕ ಯಾರು ನನ್ನೂ ರಿವೀಲ್ ಮಾಡದೇ ಸಸ್ಪೆನ್ಸ್ ಕಾಯ್ದಿರಿಸಿಕೊಂಡಿದೆ.. ಆದ್ರೆ ಸುಧಾ ಕೊಂಗರ ಅವರು ಮತ್ತೆ ತಮಿಳಿನ ಸ್ಟಾರ್ ನಟ ಸೂರ್ಯಗೆ ಆಕ್ಷನ್ ಕಟ್ ಹೇಳಿದ್ದಾರೆ ಎಂದೇ ಗಾಸಿಪ್ ಗಳು ಹರಿದಾಡತ್ತಿತ್ತು..
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೋಟೋವೊಂದು ಭಾರೀ ಸಂಚಲನವನ್ನೇ ಸೃಷ್ಟಿ ಮಾಡಿದೆ..
ಹೌದು..!
ಈ ಪೋಸ್ಟರ್ ನಲ್ಲಿ ನಟ ಸೂರ್ಯ ಅವರು ಭಾರತದ ಮಾಜಿ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಮ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.. ಟೈಟಲ್ ‘ಕಲಾಮ್’ ಬೈ ಸುಧಾ ಕೊಂಗರ ಎಂದಿದ್ದು ಈ ಪೋಸ್ಟರ್ ಭಾರೀ ವೈರಲ್ ಆಗ್ತಿದೆ..
ಹೀಗಾಗಿ ಅನೇಕರು ಮುಂದೆ ಸುಧಾ ಕೊಂಗರ ಹಾಗೂ ಹೊಂಬಾಳೆ ಕಾಂಬಿನೇಷನ್ ನಲ್ಲಿ ಬರುತ್ತಿರುವ ಸಿನಿಮಾ ಅಬ್ದುಲ್ ಕಲಾಮ್ ಅವರ ಬಯೋಪಿಕ್ ಇರಬಹುದಾ..?? ಸೂರ್ಯನೇ ನಾಯಕನಾ ಎಂದೆಲ್ಲಾ ಚರ್ಚೆಗಳನ್ನ ಮಾಡ್ತಾಯಿದ್ದಾರೆ..
ಅಂದ್ಹಾಗೆ ಇದು ಫ್ಯಾನ್ ಮೇಡ್ ಪೋಸ್ಟರ್.. ಎಡಿಟೆಡ್ ಪೋಸ್ಟರ್ ಆಗಿದೆ..
ಇದ್ದಕ್ಕಿದ್ದ ಹಾಗೆ ಯಾಕೆ ಈ ರೀತಿಯಾದ ಪೋಸ್ಟರ್ ಹರೊದಾಡ್ತಿದೆ ಅನ್ನೋ ಪ್ರಶ್ನೆ ಮೂಡುವುದೂ ಸಹಜ..
ಅಂದ್ಹಾಗೆ ಇತ್ತೀಚೆಗೆ ಪ್ರಶಸ್ತಿ ಸಮಾರಂಭವೊಂದ್ರಲ್ಲಿ ಸುಧಾ ಕೊಂಗರ ಅವರಿಗೆ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ನೀಡಲಾಗಿದೆ.. ಈ ವೇಳೆ ಮಾತನಾಡಿರುವ ಸುಧಾ ಕೊಂಗರ ಅವರು ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ್ದಾರೆ..
ಆಗ ನಿರೂಪಕರು ಕೆಲವೊಂದಿಷ್ಟು ಇಂಟ್ರೆಸ್ಟಿಂಗ್ ಪ್ರಶ್ನೆಗಳ ಕೇಳುವಾಗ ಅಬ್ದುಲ್ ಕಲಾಮ್ ಅವರ ಫೋಟೋ ತೋರಿಸಿ ಕಲಾಮ್ ಅವರ ಬಯೋಪಿಕ್ ಮಾಡಿದರೆ ಅವರ ಪಾತ್ರವನ್ನ ಯಾರು ಮಾಡಬಹುದು ಎಂದಾಗ ಸುಧಾ ಅವರು ಸೂರ್ಯ ಎಂದು ಉತ್ತರಿಸಿದ್ದರು..
ಹೀಗಾಗಿಯೇ ಅಭಿಮಾನಿಗಳು ರೀತಿಯಾದ ಪೋಸ್ಟರ್ ಮಾಡಿ ವೈರಲ್ ಮಾಡಿದ್ದಾರೆ..