ಆಸ್ಕರ್ ಗೆ ಭಾರತದಿಂದ RRR ಅಥವ ದಿ ಕಾಶ್ಮೀರ್ ಫೈಲ್ಸ್ ಪ್ರವೇಶ ಪಡೆಯಲಿದೆ ಎನ್ನಲಾಗ್ತಿತ್ತು.. ಇದೆರೆಡು ಸಿನಿಮಾಗಳ ಫ್ಯಾನ್ಸ್ ಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಪೈಪೋಟಿಯೂ ತೀವ್ರವಾಗಿತ್ತು.. ಆದ್ರೆ ಸೈಲೆಂಟ್ ಆಗಿ ಯಾರೂ ಗೆಸ್ ಮಾಡದ ರೀತಿಯಲ್ಲಿ ‘ಚಲ್ಲೊ ಶೋ’ ಸಿನಿಮಾ ಆಸ್ಕರ್‌ಗೆ ಅಧಿಕೃತವಾಗಿ ಆಯ್ಕೆಯಾಗಿದೆ..
ದಿ ಕಾಶ್ಮೀರ್ ಫೈಲ್ಸ್ ಹಾಗೂ RRR ಬಿಟ್ಟು ಇರಾನಿ ಸಿನಿಮಾದಿಂದ ಪ್ರೇರೇಪಣೆ ಪಡೆದು ಮಾಡಿದ ರೀಮೇಕ್ ಸಿನಿಮಾ ಚೆಲ್ಲೋ ಶೋ ಆಯ್ಕೆ ಮಾಡಿದ್ಯಾಕೆ ಎಂದು ನೆಟಿಜನ್ಸ್ ಪ್ರಶ್ನೆ ಮಾಡುತ್ತಾ ಸಿಟ್ಟು ತೋರಿಸಿಕೊಳ್ತಿದ್ದಾರೆ..
ಅತ್ಯುತ್ತಮ ಅಂತರಾಷ್ಟ್ರೀಯ ಚಲನಚಿತ್ರ ವಿಭಾಗದಲ್ಲಿ ಛೆಲೋ ಶೋ ಆಯ್ಕೆಯಾಗಿದೆ. ಈ ಚಿತ್ರ ಭಾರತದಲ್ಲಿ ಅಕ್ಟೋಬರ್ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇಂಗ್ಲಿಷ್ ನಲ್ಲಿ ಲಾಸ್ಟ್ ಫಿಲ್ಮ್ ಶೋ ಎಂದು ಹೆಸರಿಸಲಾದ ಚೆಲೋ ಶೋ ಸಿನಿಮಾ ರಾಬರ್ಟ್ ಡಿನಿರೋ ಅವರ ಟ್ರಿಬೆಕಾ ಫಿಲ್ಮ್ ಫೆಸ್ಟಿವಲ್ ನಲ್ಲಿ ಆರಂಭಿಕ ಚಲನಚಿತ್ರವಾಗಿ ಪ್ರಥಮ ಪ್ರದರ್ಶನ ಕಂಡಿತ್ತು ಮತ್ತು ವಿವಿಧ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ.
ಆಸ್ಕರ್ ಪ್ರಶಸ್ತಿಗೆ ತಮ್ಮ ಚಿತ್ರವನ್ನು ಆಯ್ಕೆ ಮಾಡಿದ್ದಕ್ಕಾಗಿ ಫಿಲ್ಮ್ ಫೆಡರೇಶನ್ ಆಫ್ ಇಂಡಿಯಾ ಮತ್ತು ತೀರ್ಪುಗಾರರ ಸದಸ್ಯರಿಗೆ ಚಿತ್ರದ ನಿರ್ದೇಶಕ ಪಾನ್ ನಳಿನ್ ಧನ್ಯವಾದ ತಿಳಿಸಿದ್ದಾರೆ.
ಛೆಲೋ ಶೋ ಎಂಬುದು ಇದು ಭಾರತದ ದೂರದ ಹಳ್ಳಿಯಲ್ಲಿ ವಾಸಿಸುವ 9 ವರ್ಷದ ಹುಡುಗ ಮತ್ತು ಸಿನಿಮಾದೊಂದಿಗಿನ ಅವನ ಪ್ರೇಮ ಸಂಬಂಧದ ಸುತ್ತ ಕಥೆ ಸುತ್ತುತ್ತದೆ. ಚಿಕ್ಕ ಹುಡುಗ ಬೇಸಿಗೆಯಲ್ಲಿ ಪ್ರೊಜೆಕ್ಷನ್ ಬೂತ್‌ನಿಂದ ಚಲನಚಿತ್ರಗಳನ್ನು ಹೇಗೆ ನೋಡುತ್ತಾನೆ ಎಂಬುದನ್ನು ಚಿತ್ರ ತೋರಿಸುತ್ತದೆ.