Samantha : ಶಾಕುಂತಲಂ ಸಿನಿಮಾ ರಿಲೀಸ್ ಡೇಟ್ ರಿವೀಲ್..!!
ನಾಗಚೈತನ್ಯರ ಜೊತೆಗೆ ಡಿವೋರ್ಸ್ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಸಮಂತಾ ಇತ್ತೀಚೆಗೆ ಬೋಲ್ಡ್ ಪಾತ್ರಗಳಿಗೂ ಪ್ಪುತ್ತಿದ್ದು , ಬಾಲಿವುಡ್ , ಹಾಲಿವುಡ್ ನಲ್ಲೂ ಆಫರ್ ಗಳನ್ನ ಗಿಟ್ಟಿಸಿಕೊಂಡಿದ್ದಾರೆ.. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರುವ ಸಮಂತಾ ವಿಭಿನ್ನ ಪಾತ್ರವನ್ನ ನಿಭಾಯಿಸಿರುವ ಅವರ ಶಾಕುಂತಲಂ ಸಿನಿಮಾ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ..
ಪೌರಾಣಿಕ ಕಥೆಯುಳ್ಳ ‘ಶಾಕುಂತಲಂ’ ಸಿನಿಮಾ ಬಿಡುಗಡೆ ಸಿದ್ದವಾಗಿದೆ. ಸಮಂತಾ ಮತ್ತು ದೇವ್ ಮೋಹನ್ ಅವರ ಪ್ಯಾನ್ ಇಂಡಿಯಾ ಸಿನಿಮಾ ನವೆಂಬರ್ 4ಕ್ಕೆ ತೆರೆಕಾಣಲಿದ್ದು, ಪ್ರೇಕ್ಷಕರನ್ನು ಮಹಾಭಾರತದ ಕಥಾಲೊಕಕ್ಕೆ ಕರೆದೊಯ್ಯಲಿದೆ. ಅಲ್ಲು ಅರ್ಜುನ್ ಅವರ ಮಗಳು ಅಲ್ಲು ಅರ್ಹ ಮೊದಲ ಬಾರಿಗೆ ಬಾಲನಟಿಯಾಗಿ ಸಿನಿಮಾದಲ್ಲಿ ಕಮಾಲ್ ಮಾಡಲು ಸಿದ್ದರಾಗಿದ್ದಾರೆ.
ಅಂದ್ಹಾಗೆ ಈ ಸಿನಿಮಾಗೆ ನೀಲಿಮಾ ಗುಣ ಬಂಡವಾಳ ಹೂಡಿದ್ಧಾರೆ. ಗುಣ ಶೇಖರ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಇದು ಪ್ಯಾನ್ ಇಂಡಿಯನ್ ಸಿನಿಮಾವಾಗಿದೆ.. ತೆಲುಗು , ತಮಿಳು , ಕನ್ನಡ , ಹಿಂದಿ , ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ..