ಗಾನಗಂಧರ್ವ , ಭಾರತ ಸಂಗೀತ ಜಗತ್ತಿನ ದಿಗ್ಗಜರಾಗಿದ್ದ , ಮೇರು ನಟ , ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಇಂದು ನಮ್ಮೊಂದಿಗಿಲ್ಲ.. ಅವರು ನಮ್ಮನ್ನೆಲ್ಲಾ ಅಗಲಿ 2 ವರ್ಷಗಳೇ ಕಳೆದಿದೆ.. ಆದ್ರೆ ಅವರು ತಮ್ಮ ಹಾಡುಗಳ ಮೂಲಕ ದಿಗೂ ಅಜರಾಮರರಾಗಿದದಾರೆ..
ಎಸ್ ಪಿಬಿ ಅವರ ಸರಳತೆ ಹಾಗೂ ಮುಗ್ಧ ನಗುವೇ ಅವರಿಗೆ ಕೋಟ್ಯಾಂತರ ಹೃದಯಗಳು ಸೋಲುವಂತೆ ಮಾಡಿದ್ದು.. 14 ಕ್ಕೂ ಹೆಚ್ಚು ಭಾಷೆಗಳಲ್ಲಿ ಅತಿ ಹೆಚ್ಚು ಹಾಡುಗಳನ್ನ ಹಾಡಿರುವ ದಾಖಲೆ ಅವರದ್ದು.. ರಾಷ್ಟ್ರಪ್ರಶಸ್ತಿ ವಿಜೇತರಾದ ಎಸ್ ಪಿಬಿ ಅವರು ಎಲ್ಲಾ ಜನರೇಷನ್ ಅವರಿಗೂ ಫೇವರೇಟ್ ಆಗಿದ್ದವರು..
ಅಲ್ಲದೇ ನಟನೆಯಲ್ಲೂ ಎಸ್ ಪಿಬಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು.. ಕನ್ನಡದ , ತೆಲುಗು , ತಮಿಳು , ಮಲಯಾಳಂ , ಹಿಂದಿ ಸಿನಿಮಾರಂಗದಲ್ಲಿ ನಟಿಸಿದ್ದಾರೆ..
ಆದ್ರೆ ಇಂಜಿನಿಯರಿಂಗ್ ಪ್ರವೇಶ ಪಡೆದಿದ್ದ ಎಸ್ ಪಿಬಿ ಅವರು ಸಂಗೀತ ಜಗತ್ತಿಗೆ ಪ್ರವೇಶ ಪಡೆದಿದ್ದೇ ಇಂಟ್ರೆಸ್ಟಿಂಗ್… ಬೇಕಂತ ಸಂಗೀತ ಜಗತ್ತಿನಲ್ಲೇ ಬೆಳೆಯಬೇಕೆಂದುಕೊಂಡು ಬಂದವರೇನಲ್ಲ.. ಆದ್ರೆ ಕೆಲ ಕಾರಣಗಳಿಮದ ಕಾಲೇಜು ಬಿಟ್ಟಿದ್ದ ಸ್ ಪಿಬಿ ಅವರು ಅವರ ಸ್ನೇಹಿತರ ಒತ್ತಾಯದ ಮೇರೆಗೆ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಿದ್ದರಂತೆ.. ಆ ನಂತರ ಅವರಿಗೆ ಸಿನಿಮಾಗಳಿಂದ ಹಿನ್ನೆಲೆ ಗಾಯನಕ್ಕೆ ಆಫರ್ ಗಳು ಒಲಿದು ಬಂದವು.. 1966 ರಲ್ಲಿ ಶ್ರೀ ಮರ್ಯಾದ ರಾಮಣ್ಣ ಸಿನಿಮಾದ ಮೂಲಕ ಅವರು ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು.. ಅದಾದ ನಂತರ ಎಸ್ ಪಿಬಿ ಅವರು ಹಿಂದುರುಗಿ ನೋಡಲೇ ಇಲ್ಲ.. ಸಂಗೀತ ಕ್ಷೇತ್ರದಲ್ಲಿ ಹೆಮ್ಮರವಾಗಿ ಬೆಳೆದು ನಿಂತರು.. ಸಾವಿರಾರು ಹಾಡುಗಳಿಗೆ ಧ್ವನಿಯಾದರು..
ಸೂಪರ್ ಹಿಟ್ ಹಾಡುಗಳನ್ನ ನೀಡಿದರು.. ಭಾಷೆಗಳ ಲ್ಲೆ ಮೀರಿ ತಮ್ಮ ಗಾಯನದ ಮೂಲಕ ದೇಶಾದ್ಯಂತ ಭಿಮಾನಿಗಳನ್ನ ಸಂಪಾದನೆ ಮಾಡಿದರು..