ಸೌತ್ ಸ್ಟಾರ್ ಗಳು ಇದೀಗ ಬಾಲಿವುಡ್ ಸ್ಟಾರ್ ಗಳನ್ನ ಮೀರಿಸಿ ಸ್ಟಾರ್ ಡಮ್ ಪಡೆಯುತ್ತಿದ್ದಾರೆ.. ಆಲ್ ಓವರ್ ಇಂಡಿಯಾ ಸೌತ್ ಸ್ಟಾರ್ ಗಳು , ಸೌತ್ ಸಿನಿಮಾಗಳದ್ದೇ ಅಬ್ಬರ ಚರ್ಚೆಯಾಗಿದೆ..
ಯಶ್ , ಪ್ರಭಾಸ್ , ರಾಮ್ ಚರಣ್ , ಸುದೀಪ್ , ದಳಪತಿ ವಿಜಯ್ ರಂತಹ ನಟರು ಟಾಪ್ ಸ್ಟಾರ್ ಗಳಾಗಿದ್ದಾರೆ..
ಅಂದ್ಹಾಗೆ ಆರ್ಮ್ಯಾಕ್ಸ್ ಬಿಡುಗಡೆ ಮಾಡಿರುವ ಭಾರತದ ಟಾಪ್ 10 ಹೀರೋ ಪಟ್ಟಿಯಲ್ಲು ಟಾಪ್ 5ರಲ್ಲಿ ದಕ್ಷಿಣ ಭಾರತದ ನಟರೇ ಕಾಣಿಸಿಕೊಂಡಿದ್ದಾರೆ. ಕೆಜಿಎಫ್ ಮೂಲಕ ದೇಶ ವಿದೇಶಗಳಲ್ಲಿ ಸಿನಿಮಾ ಕ್ರೇಜ್ ಹೆಚ್ಚಿಸಿದ ಯಶ್, ಬಾಲಿವುಡ್ ನಟ ಅಕ್ಷಯ್ ಕುಮಾರ್, ತೆಲುಗು ನಟ ಮಹೇಶ್ ಬಾಬು, ತಮಿಳು ನಟ ಸೂರ್ಯ ಸೇರಿದಂತೆ ಹಲವು ದಿಗ್ಗಜರನ್ನೇ ಹಿಂದಿಕ್ಕಿದ್ದಾರೆ.
ಆರ್ಮ್ಯಾಕ್ಸ್ ಬಿಡುಗಡೆ ಮಾಡಿರುವ ಭಾರತದ ಟಾಪ್ 10 ಹೀರೋಗಳ ಪಟ್ಟಿಯಲ್ಲಿ ತಮಿಳು ಸ್ಟಾರ್ ದಳಪತಿ ವಿಜಯ್ ಅಗ್ರಸ್ಥಾನದಲ್ಲಿದ್ದಾರೆ.
ಎರಡನೇ ಸ್ಥಾನದಲ್ಲಿ ಬಾಹುಬಲಿ ಹೀರೋ ಪ್ರಭಾಸ್ ಇದ್ದಾರೆ..
ಮೂರನೇ ಸ್ಥಾನದಲ್ಲಿ ತೆಲುಗು ಸ್ಟಾರ್ ಜ್ಯೂನಿಯರ್ NTR ಮೂರನೇ ಸ್ಥಾನದಲ್ಲಿದ್ದರೆ ನಾಲ್ಕನೇ ಸ್ಥಾನದಲ್ಲಿ ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ಇದ್ದಾರೆ.. ರಾಕಿಂಗ್ ಸ್ಟಾರ್ ಯಶ್ 5ನೇ ಸ್ಥಾನದಲ್ಲಿದ್ದಾರೆ.
ಆದ್ರೆ ಆಶ್ಚರ್ಯ ಅಂದ್ರೆ ಈ ಪಟ್ಟಿಯಲ್ಲಿ ಅಕ್ಷಯ್ ಕುಮಾರ್ ಒಬ್ಬರೇ ಬಾಲಿವುಡ್ ನಟರು.. ಅದ್ರಲ್ಲೂ ಟಾಪ್ 5 ನಲ್ಲಿಯೂ ಅವರಿಗೆ ಸ್ಥಾನ ಸಿಕ್ಕಿಲ್ಲ.. ಟಾಪ್ 5 ರಲ್ಲಿ ಸೌತ್ ಸ್ಟಾರ್ ಗಳೇ ವಿರಾಜಮಾನರಾಗಿದ್ದಾರೆ..
ಆರ್ಮ್ಯಾಕ್ಸ್ ಬಿಡುಗಡೆ ಮಾಡಿದ ಭಾರತದ ಟಾಪ್ 10 ಹೀರೋಗಳ ಪಟ್ಟಿ ವಿವರ:
- ವಿಜಯ್ ದಳಪತಿ
- ಪ್ರಭಾಸ್
- ಜ್ಯೂ.ಎನ್ಟಿಆರ್
- ಅಲ್ಲು ಅರ್ಜುನ್
- ಯಶ್
- ಅಕ್ಷಯ್ ಕುಮಾರ್
- ರಾಮ್ ಚರಣ್
- ಮಹೇಶ್ ಬಾಬು
- ಸೂರ್ಯ
- ಅಜಿತ್ ಕುಮಾರ್