ಸ್ಯಾಂಡಲ್ ವುಡ್ ನ ಸ್ಟಾರ್ ಜೋಡಿ , ” ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ” … ಯಶ್ ರಾಧಿಕಾ ಬಹುತೇಕರ ಫೇವರೇಟ್ ಸ್ಟಾರ್ ಕಪಲ್… ಸೌತ್ ನ ಅಚ್ಚುಮೆಚ್ಚಿನ ಸ್ಟಾರ್ ಜೋಡಿಗಳ ಪೈಕಿ ಒಂದು.. ಯಶ್ ಹಾಗೂ ರಾಧಿಕಾ ಇಬ್ಬರೂ ಪರಸ್ಪರ 10 ವರ್ಷ ಪ್ರೀತಿಸಿ ವಿವಾಹವಾದ ಜೋಡಿ… ಸಹಜವಾಗಿಯೇ ಇಬ್ಬರ ನಡುವಿನ ಬಾಂಡಿಂಗ್ ಗಟ್ಟಿಯಾಗಿರುತ್ತದೆ…
ಇಬ್ಬರೂ ಕಿರುತೆರೆ ಮೂಲಕ ಒಟ್ಟಾಗಿಯೇ ಜರ್ನಿ ಆರಂಭಿಸಿ ಒಟ್ಟಿಗೆ ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು.. ವಿವಾಹದ ನಂತರ ಮಕ್ಕಳು ಸಂಸಾರ ಎಂದು ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ಬ್ಯುಸಿಯಾಗಿದ್ದಾರೆ..
ಇತ್ತ ಯಶ್ ನ್ಯಾಷನಲ್ ಲೆವೆಲ್ ನಲ್ಲಿ ಅಬ್ಬರಿಸುತ್ತಿದ್ದಾರೆ.. ಒಂದೆಡೆ ಫ್ಯಾನ್ಸ್ ರಾಧಿಕಾ ಪಂಡಿತ್ ಕಮ್ ಬ್ಯಾಕ್ ಗಾಗಿ ಕಾಯ್ತಿದ್ದಾರೆ.. ಮತ್ತೊಂದೆಡೆ ಯಶ್ ಅವರ 19 ನೇ ಸಿನಿಮಾದ ಅಪ್ ಡೇಟ್ಸ್ ಗಾಗಿ ಡಿಮ್ಯಾಂಡ್ ಹೆಚ್ಚಾಗ್ತಿದೆ..
ಅಂದ್ಹಾಗೆ ಈ ಜೋಡಿಗೆ ಇಬ್ಬರು ಮುದ್ದು ಮಕ್ಕಳಿದ್ದಾರೆ ಐರಾ , ಯಥರ್ವ್.. ಇವರಿಗೂ ಒಂದು ರೀತಿ ಫ್ಯಾನ್ಸ್ ಇದ್ದಾರೆ ಎನ್ನಬಹುದು.. ಯಶ್ ರಾಧಿಕಾ ಆಗಾಗ ಮುದ್ದು ಮಕ್ಕಳ ಫೋಟೋಗಳನ್ನಹಂಚಿಕೊಳ್ತಾ ಇರುತ್ತಾರೆ..
ಫ್ಯಾಮಿಲಿ ಜೊತೆಗೆ ಆಗಾಗ ಟ್ರಿಪ್ ಗಳನ್ನ ಹಾಕುತ್ತಿರುತ್ತಾರೆ.. ಸದ್ಯ ಯಶ್ ಹಾಗೂ ರಾಧಿಕಾ ಇತ್ತೀಚೆಗೆ ಒಂದು ವಾರದ ಕಾಲ ವಿದೇಶಕ್ಕೆ ಪ್ರವಾಸ ತೆರಳಿದ್ದು ಮಸ್ತ್ ಎಂಜಾಯ್ ಮಾಡಿದ್ದಾರೆ.. ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ಶೇರ್ ಮಾಡಿಕೊಂಡಿದ್ದಾರೆ..
ನದಿಯ ಮಧ್ಯ ಬೋಟ್ ನಲ್ಲಿ ರಾಧಿಕಾ ಕುಳಿತಿರುವ ಫೋಟೋವನ್ನ ಯಶ್ ಕ್ಲಿಕಿಸಿದ್ದಾರೆ. ಈ ಫೋಟೋವನ್ನ ಶೇರ್ ಮಾಡಿ, ಯಾವಾಗಲೂ ಹೆಂಡತಿಯರು ಪರ್ಫೆಕ್ಟ್ ಶಾಟ್ ಅನ್ನು ಹೇಗೆ ತೆಗೆಯಬೇಕು ಎಂದು ಸೂಚನೆ ಕೊಡುತ್ತಾರೆ. ಅದು ಎಲ್ಲಿಯವರೆಗೆ ಎಂದರೆ ಒಬ್ಬರು ಬೇಸರಗೊಳ್ಳುವವರೆಗೆ ಎಂದು ಬರೆದುಕೊಂಡಿದ್ದಾರೆ. ಫೋಟೋವನ್ನ ನೋಡಿ ಫಿದಾ ಆಗಿರೋ ಫ್ಯಾನ್ಸ್ ಕ್ಯೂಟ್ ಜೋಡಿ ಅಂತ ಕಾಮೆಂಟ್ ಗಳನ್ನ ಮಾಡ್ತಿದ್ದಾರೆ..
View this post on Instagram