ರಾಷ್ಟ್ರೀಯ ಸಿನಿಮಾ ದಿನದಂದು ದಾಖಲೆಯ ಬುಕ್ಕಿಂಗ್ ಕಂಡ ಬ್ರಹ್ಮಾಸ್ತ್ರ…
ನಿನ್ನೆ ಸೆಪ್ಟಂಬರ್ 23 ರಂದು ರಾಷ್ಟ್ರೀಯ ಸಿನಿಮಾ ದಿನದ ಪ್ರಯುಕ್ತ 6 ಲಕ್ಷ ಮುಂಗಡ ಬುಕ್ಕಿಂಗ್‌ಗಳೊಂದಿಗೆ ಬ್ರಹ್ಮಾಸ್ತ್ರ ದಾಖಲೆಗಳನ್ನು ಮುರಿದಿದೆ.. ಈ ಮೂಲಕ ಕೆಜಿಎಫ್ 2 ಅನ್ನು ಮೀರಿಸಿದೆ.. ದ್ರೆ ಇದೇನು ಸಾಧನೆ ಅಲ್ಲ.. ದಾಖಲೆ ಲೆಕ್ಕಕ್ಕೆ ಇಲ್ಲ ಎನ್ನುತ್ತಿದ್ದಾರೆ ಸಿನಿಮಾ ಪ್ರೇಕ್ಷಕರು..
ಕಾರಣ 75 ರೂಗೆ ಟಿಕೆಟ್ ಸಿಕ್ಕ ಹಿನ್ನೆಲೆ ಎಲ್ಲರೂ ಮುಗಿಬಿದ್ದು ಸಿನಿಮಾ ನೋಡಿದರು.. ಇದೇ ಬೇರೆ ಬೇರೆ ಸಿನಿಮಾಗಳ ಟೈಮ್ ನಲ್ಲೂ ಚಾನ್ಸ್ ಇದ್ದಿದ್ರೆ ಯಾವುದೇ ಕಾರಣಕ್ಕೂ KGF 2 ರೆಕಾರ್ಡ್ ಬ್ರೇಕ್ ಮಾಡೋಕೆ ಸಾಧ್ಯವೇ ಇರುತ್ತಿರಲಿಲ್ಲ ಎನುತ್ತಿದ್ದಾರೆ ಫ್ಯಾನ್ಸ್..
ಶುಕ್ರವಾರದಂದು ರಾಷ್ಟ್ರೀಯ ಸಿನಿಮಾ ದಿನದಂದು ಮೂರು ರಾಷ್ಟ್ರೀಯ ಸರಣಿಗಳಲ್ಲಿ ಸುಮಾರು ಆರು ಲಕ್ಷ ಟಿಕೆಟ್‌ಗಳು ಮಾರಾಟವಾಗುವುದರೊಂದಿಗೆ ಮುಂಗಡ ಬುಕ್ಕಿಂಗ್ ದಾಖಲೆಗಳನ್ನು ಬ್ರಹ್ಮಾಸ್ತ್ರ ಛಿದ್ರಗೊಳಿಸಿದೆ, ಟಿಕೆಟ್‌ಗಳ ಬೆಲೆ 75 ರೂ. ಈ ವರ್ಷದ ಯಾವುದೇ ಚಲನಚಿತ್ರದ ಅತ್ಯಧಿಕ ಮುಂಗಡ ಅಂಕಿಅಂಶಗಳಾಗಿವೆ.