ರಶ್ಮಿಕಾ ಮಂದಣ್ಣಗೆ ಆರೋಗ್ಯ ಸಮಸ್ಯೆ – ಆಸ್ಪತ್ರೆ ಸೇರಿದ ನಟಿ…
ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಚಿತ್ರದ ಮೂಲಕ ನ್ಯಾಷನಲ್ ಕ್ರಶ್ ಎಂದೇ ಗುರುತಿಸಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಷಯವನ್ನ ಸ್ವತಃ ರಶ್ಮಿಕಾಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೇ ತಿಳಿಸಿದ್ದಾರೆ.
ಸತತವಾಗಿ ಚಿತ್ರೀಕರಣದಿಂದ ಬಳಲಿರುವ ರಶ್ಮಿಕಾ ಮೊಣಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಗಾಗಿ ಹೈದ್ರಾಬಾದ ನ ಪ್ರತಿಷ್ಟಿತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೈದಾಬಾದ್ನಲ್ಲಿನ ಪ್ರಮುಖ ಆರ್ಥೋ ಸ್ಪೆಷಲಿಸ್ಟ್ ಗುರುವಾ ರೆಡ್ಡಿ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಸಮಸ್ಯೆಯನ್ನು ಹಾಸ್ಯಾತ್ಮಕವಾಗಿ ವಿವರಿಸಿರುವ ಗುರುವ ರೆಡ್ಡಿ, ”ಸಾಮಿ..ಸಾಮಿ.. ಎಂದು ಮೊಣಕಾಲಿನ ಮೇಲೆ ಭಾರ ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಕ್ಕೆ ನಿಮಗೆ ಮೊಣಕಾಲು ನೋವು ಬಂದಿದೆ ಹಾಗಾಗಿ ನನ್ನ ಬಳಿ ಬಂದಿದ್ದೀರಿ ಎಂದು ತಮ್ಮ ಸೋಶಿಯಲ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ರಶ್ಮಿಕಾ ಸದ್ಯ ಅಲ್ಲು ಅರ್ಜುನ್ ಜೊತೆ ಪುಷ್ಪಾ ಹಾಗೂ ತಮಿಳಿನ ಸ್ಟಾರ್ ನಟ ವಿಜಯ್ ಜೊತೆ ವಾರಿಸು ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಈಗಾಗಲೇ ಗುಡ್ ಬೈ ಚಿತ್ರದ ಮೂಲಕ ಬಾಲಿವುಡ್ಗೂ ಲಗ್ಗೆಯಿಟ್ಟಿರುವ ನ್ಯಾಷನಲ್ ಕ್ರಷ್ ಮಿಷನ್ ಮಜ್ನು ಹಾಗೂ ಅನಿಮಲ್ ಚಿತ್ರಗಳ ಮೂಲಕ ಬಾಲಿವುಡ್ ನಲ್ಲೂ ನೆಲೆಯೂರುತ್ತಿದ್ದಾರೆ.