ಬಿಗ್ ಬಾಸ್ ನಲ್ಲಿ ಇವರಿಗೇ ಓಟ್ ಮಾಡಿ ಎಂದ ರಾಮ್ ಗೋಪಾಲ್ ವರ್ಮಾ…
RGV… ರಾಮ್ ಗೋಪಾಲ್ ವರ್ಮಾ… ಇವರ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇನೂ ಇಲ್ಲ… ತಮಗಿಷ್ಟ ಬಂದಹಾಗೆಯೇ ನಡೆಯುವ, ವಿವಾದಗಳಾದ್ರೂ ತಲೆ ಕೆಡಿಸಿಕೊಳ್ದೇ ಬದುಕುವಂತಹ ವ್ಯಕ್ತಿತ್ವ ಇವರದ್ದು..
ಆಗಾಗ ಪಬ್ ಗಳಲ್ಲಿ ಹುಡುಗೀರ ಜೊತೆಗೆ ಕಾಣಿಸಿಕೊಳ್ತಾ ಇನ್ನೂ ಅತಿರೇಕದ ವರ್ತನೆಗಳಿಂದಲೂ ವಿವಾದ ಮಾಡಿಕೊಳ್ಳುವ ಆರ್ ಜಿ ವಿ ಅವರು ಇತ್ತೀಚೆಗೆ ನಟಿ ಇಯಾನಾ ಸುಲ್ತಾನಾ ಜೊತೆಗೆ ಕ್ಲೋಸ್ ಆಗಿರೋ ಫೋಟೋ ಹಂಚಿಕೊಂಡು ಬಿಗ್ ಬಾಸ್ ಗೆ ಹೋಗಿರುವ ನಟಿಗೆ ವೋಟ್ ಮಾಡುವಂತೆ ಕೇಳಿದ್ದಾರೆ..
ಹೌದು..!
ಕನ್ನಡದ ನಂತರ ಇದೀಗ ತೆಲುಗಿನಲ್ಲೂ ಬಿಗ್ ಬಾಸ್ ಒಟಿಟಿ ಆರಂಭವಾಗಿದೆ.. ನಾಗಾರ್ಜುನ್ ಅವರು ನಡೆಸಿಕೊಡ್ತಿದ್ದಾರೆ.. ಮತ್ತೊಂದೆಡೆ ಬಿಗ್ ಬಾಸ್ ತೆಲುಗು ಸೀಸನ್ 6 ಮೂರನೇ ವಾರಕ್ಕೆ ಕಾಲಿಟ್ಟಿದೆ..
ಈ ವಾರದ ಎಲಿಮಿನೇಷನ್ ರೌಂಡ್ ನಲ್ಲಿ ಒಟ್ಟು 9 ಮಂದಿ ನಾಮಿನೇಟ್ ಆಗಿದ್ದು ಈ ಪೈಕಿ ಇಯಾನಾ ಸುಲ್ತಾನಾ ಸಹ ಒಬ್ರು..
ಹೀಗಾಗಿ ಎಲಿಮಿನೇಷನ್ ರೌಂಡ್ ನಿಂದ ಈಕೆಯನ್ನ ಸೇಫ್ ಮಾಡಲು ವೋಟ್ ಮಾಡುವಂತೆ ರಾಮ್ ಗೋಪಾಲ್ ವರ್ಮಾ ಮನವಿ ಮಾಡಿದ್ದು , ಇಯಾನಾ ಜೊತೆಗಿನ ಕ್ಲೋಸ್ ಆಗಿರುವ ಫೋಟೋವನ್ನ ಹಂಚಿಕೊಂಡಿದ್ದು , ಇದೀಗ ವೈರಲ್ ಆಗ್ತಿದೆ..