ಬಾಲಿವುಡ್ ನ ನಟಿ ತನುಶ್ರೀ ದತ್ತ ತ್ತೀಚೆಗೆ ಶಾಕಿಂಗ್ ಹೇಳಿಕೆ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ..
ಬಾಲಿವುಡ್ ನ ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಿದ್ದರು..
ಆ ನಂತರ ತಮಗೆ ಅವಕಾಶಗಳು ಕಡಿಮೆಯಾಯ್ತು ಅಂತಲು ಕೆಲವು ಬಾರಿ ಹೇಳಿಕೊಂಡಿದ್ರು..
ಇತ್ತೀಚೆಗೆ ಸಂದರ್ಶನವೊಂದ್ರಲ್ಲಿ ಮಾತನಾಡಿರುವ ನಟಿ ನನ್ನ ಮೇಲೆ ಹಲವು ಬಾರಿ ಹತ್ಯೆ ಯತ್ನ ನಡೆದಿದೆ ಎಂದಿದ್ದಾರೆ..
#METOO ಆರೋಪ ಮಾಡಿದ ಬಳಿಕ ನನ್ನ ಮೇಲೆ ಹತ್ಯೆ ಪ್ರಯತ್ನಗಳು ನಡೆದಿವೆ..
ನಾನು ಉಜ್ಜೈನಿಯಲ್ಲಿದ್ದಾಗ ನನ್ನ ಕಾರಿನ ಬ್ರೇಕ್ ಗಳನ್ನು ನಿಷ್ಕ್ರಿಯಗೊಳಿಸಲಾಗಿತ್ತು.. ಇದ್ರಿಂದ ನಾನು ಅಪಘಾತಕ್ಕೆ ಈಡಾಗಿ ಗಾಯಗೊಂಡಿದ್ದೆ..
ಮತ್ತೊಂದ್ ಸರತಿ ವಿಷ ನೀಡಿ ಕೊಲೆ ಯತ್ನ ನಡೆಸಲಾಗಿತ್ತು. ಒಬ್ಬಳು ಕೆಲಸದವಳನ್ನ ಸಂಚು ರೂಪಿಸಿ ನನ್ನ ಶತ್ರುಗಳು ನನ್ನ ಮನೆಗೆ ಕಳುಹಿಸಿದ್ದರು…
ಆಕೆ ಬಂದಾಗಿನಿಂದ ಕೆಲವು ದಿನಗಳಿಗೆ ನನಗೆ ಹುಷಾರಿಲ್ಲದಂತಾಯ್ತು.. ಗಲೇ ನನಗೆ ಗೊತ್ತಾಗಿತ್ತು.. ನಾನು ಸೇವಿಸುತ್ತಿರುವ ನೀರಿನಲ್ಲಿ ಏನೋ ಬೆರೆಸಲಾಗ್ತಿದೆ ಎಂದು ಹೇಳಿದ್ದಾರೆ..
ಅಲ್ಲದೇ ನಾನು ಮೊದಲು ಮೀಟೂ ಆರೂಪ ಮಾಡಿದ್ದ ನಟರು ಹಾಗೂ ಬಾಲಿವುಡ್ ಮಾಫಿಯಾ ನನ್ನನ್ನು ಹತ್ಯೆ ಮಾಡಲು ಯತ್ನಿಸುತ್ತಿದ್ದು ನನಗೇನಾದ್ರೂ ಆದ್ರೆ ಅದಕ್ಕೆ ನಾನಾ ಪಾಟೇಕರ್ ಹಾಗೂ ಬಾಲಿವುಡ್ ಮಾಫಿಯಾ ಹೊಣೆ ಎಂದಿದ್ಧಾರೆ..